ಅ.೨೧ರಿಂದ ರಾಜ್ಯಮಟ್ಟದ ದಿವ್ಯಾಂಗರ ಕ್ರಿಕೆಟ್ ಪಂದ್ಯ: ಡಾ. ಅಶೋಕ ಡಂಬರ

ಗಂಗಾವತಿ: ವಿಶೇಷ ಚೇತನ ಅಂತಾರಾಷ್ಟಿçÃಯ ಕ್ರೀಡಾಪಟುಗಳಿಗೆ ಸನ್ಮಾನ
ಗಂಗಾವತಿ: ನಗರದ ಸಿಬಿಎಸ್ ಕ್ರೀಡಾಂಗಣದಲ್ಲಿ ಕಿಷ್ಟಿಂದ ಕಪ್‌ಗಾಗಿ ಅಗಷ್ಟ್ ೨೧ರ ಬೆಳಗ್ಗೆ ೧೦.೦೦ ಗಂಟೆಗೆ ರಾಜ್ಯಮಟ್ಟದ ದಿವ್ಯಾಂಗರ ವ್ಹೀಲ್‌ಚೇರ್ ಕ್ರಿಕೆಟ್ ಹಾಗು ಸಿಟಿಂಗ್ ಕ್ರಿಕೆಟ್ ನಾಲ್ಕುದಿನಗಳ ವಿವಿಧ ಸಂಘಟನಗಳ ಸಹಯೋಗದಲ್ಲಿ ಜರುಗಲಿದೆ ಎಂದು ಕನಸುನನಸು ಚಾರಿಟೇಬಲ್ ಟ್ರಸ್ಟ್ç ದಿವ್ಯಾಂಗರು ಅಧ್ಯಕ್ಷ ಡಾ.ಅಶೋಕ ಡಂಬರ ತಿಳಿಸಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. ಕಿಷ್ಕಿಂದ ಕಿಂಗ್ಸ್ ಅಕಾಡೆಮಿ, ದಿವ್ಯಾಂಗ ಸ್ಪೋರ್ಟ್ಸ್ ಅಕಾಡೆಮಿ, ಗಂಗಾವತಿ, ದಿವ್ಯಾಂಗ ಮೈತ್ರಿ ಸ್ಪೋರ್ಟ್ಸ ಅಕಾಡೆಮಿ ಗಂಗಾವತಿ, ದಿವ್ಯಾಂಗ ಮೈತ್ರಿ ಅಕಾಡೆಮಿ ತುಮಕೂರು, ಕನಸು ನನಸು ಚಾರಿಟೇಬಲ್ ಟ್ರಸ್ಟ್ ಫಾರ್ ದಿವ್ಯಾಂಗರು ಹಾಗು ಕೊಪ್ಪಳ ಬೋರ್ಡ್ ಆಫ್ ವ್ಹೀಲ್ ಚೇರ್ ಕ್ರಿಕೆಟ್ ಕಂಟ್ರೋಲ್ ಇನ್ ಕರ್ನಾಟಕ ಬೆಂಗಳೂರು ಸಹಯೋಗದಲ್ಲಿ ಈ ಪಂದ್ಯಾವಳಿ ಆಯೋಜಿಸಲಾಗಿದ್ದು, ಒಟ್ಟು ೧೦ ತಂಡಗಳು ಪಾಲ್ಗೊಳ್ಳಲಿವೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಅಂಗವಿಕಲರ ಒಕ್ಕೂಟ ಗಂಗಾವತಿ ನಗರ ಘಟಕದ ಅಧ್ಯಕ್ಷ ಯಮನೂರಪ್ಪ ಪುಂಡಗೌಡ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ದಿವ್ಯಾಂಗರ ರಾಜ್ಯ ಮಟ್ಟದ ಕ್ರಿಕೆಟ್ ಆಯೋಜಿಸಲಾಗುತ್ತಿದ್ದು, ಪಂದ್ಯಾವಳಿಗಳನ್ನು ಹಿಂದುಳಿದ ಕಲ್ಯಾಣ ಹಾಗು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಉದ್ಘಾಟಿಸಲಿದ್ದಾರೆ, ಸಂಸದ ರಾಜಶೇಖರ್ ಹಿಟ್ನಾಳ್ ಅಧ್ಯಕ್ಷತೆ ವಹಿಸಲಿದ್ದು, ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಜಿ.ವೀರಪ್ಪ, ಹೆಚ್.ಆರ್.ಶ್ರೀನಾಥ್, ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ, ಮಲ್ಲಿಕಾರ್ಜುನ ನಾಗಪ್ಪ ಇತರ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು,
ರಾಷ್ಟಿçÃಯ ಆಟಗಾರ ಹುಲಿಗೇಶ್ ಕೆರೆಹಳ್ಳಿ ಮಾತನಾಡಿ, ಅಂತಾರಾಷ್ಟಿçÃಯ ದಿವ್ಯಾಂಗ ಕ್ರೀಡಾಪಟುಗಳಾದ ನಾಗನಗೌಡ ಭದ್ರವತಿ, ಹರೀಷ್ ಕುಮಾರ್ ಬೆಂಗಳೂರು, ಶಿವಪ್ರಸಾದ ಬೆಂಗಳೂರು, ಸಾಗರ್ ಲಮಾಣಿ ಬಿಜಾಪುರ, ಪ್ರವೀಣ ಕುಮಾರ್ ಕಲ್ಲಾ ಭದ್ರವತಿ ಇವರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದು ಹೆಳಿದರು.
ಸಂಘಟನೆಯ ಮಂಜುನಾಥ ಹೊಸಕೇರಿ ಮಾತನಾಡಿ, ಒಟ್ಟು ೧೦ಕ್ಕೂ ಹೆಚ್ಚು ಕ್ರಿಕೆಟ್ ತಂಡಗಳು ಪಾಲ್ಗೊಳ್ಳಲಿದ್ದು, ವ್ಹೀಲ್ ಚೇರ್ ಹಾಗು ಸಿಟಿಂಗ್ ಕ್ರಿಕೆಟ್ ಪಂದ್ಯಾವಳಿ ಎರಡು ವಿಭಾಗಗಳಿಗೂ ಪ್ರಥಮ ದ್ವಿತೀಯ ಹಾಗು ತೃತೀಯ ಬಹುಮಾನ ನೀಡಲಾಗುವುದು, ಸುಮಾರು ೨೦೦ ಕ್ರೀಡಾಪಟುಗಳು ಆಗಮಿಸುವ ನಿರೀಕ್ಷೆ ಇದೆ, ನಾಲ್ಕುದಿನಗಳ ಕಾಲ ಎಲ್ಲರಿಗು ಉಪಹಾರ ಹಾಗು ಊಟ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದಿವ್ಯಾಂಗರಿಗೆ ಬೆಂಬಲ ನೀಡಿ ಪ್ರೋತ್ಸಾಹಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ದಿವ್ಯಾಂಗರ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಯಲ್ಲಪ್ಪ ವಡ್ಡರಹಟ್ಟಿ, ನಾಗರಾಜ್ ರೇವಣಕರ್, ಅಸಾದುಲ್ಲಾ, ಸಣ್ಣ ವೀರೇಶ್ ಗಿಣಿಮೂತಿ, ಅಬ್ರಾಹಾಂ, ಉಮೇಶ್ ಕಲ್ಮಂಗಿ, ನಾಗರಾಜ್ ಕಂಪ್ಲಿ, ಬಸವರಾಜ್ ಗೋನಾಳ್, ನಾಗರಾಜ್ ಚಲುವಾದಿ, ಖಾದರ್‌ಪಾಶಾ, ಹುಲುಗಪ್ಪ ಕಾಗೇರಿ ಇತರರಿದ್ದರು.
Comments are closed.