ಪಿಯು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ

Get real time updates directly on you device, subscribe now.

 

ಕೊಪ್ಪಳ : ಸಿವಿಸಿ ಫೌಂಡೇಶನ್, ಕೊಪ್ಪಳ, ಹಾಗೂ ಎಸ್ ವಿ ಸಿ ಶಿಕ್ಷಣ ಸಂಸ್ಥೆ, ಕುಷ್ಟಗಿ, ಪಿಯುಸಿ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ಹಾಗೂ ಜೆಇಇ ಪರೀಕ್ಷೆಗಳಿಗಾಗಿ ಉಚಿತ ತರಬೇತಿಯನ್ನು ಜಂಟಿಯಾಗಿ ಆಯೋಜಿಸಿವೆ. ರಾಜ್ಯಮಟ್ಟದ ವಿಷಯ ತಜ್ಞರು ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳ ಕುರಿತು ಪ್ರತಿ ತಿಂಗಳು ರವಿವಾರ ತರಬೇತಿ ನಡೆಸಿಕೊಳ್ಳಲಿದ್ದಾರೆ. ತರಬೇತಿ ಶಿಬಿರ ಆಗಸ್ಟ್ ತಿಂಗಳಿನಿಂದ ಪ್ರಾರಂಭವಾಗಲಿದೆ. ರಾಜ್ಯಮಟ್ಟದ ವಿಷಯ ತಜ್ಞರ ಈ ತರಬೇತಿ ಶಿಬಿರ ಇಡೀ ರಾಜ್ಯದಲ್ಲಿಯೇ ಪ್ರಥಮ ಪ್ರಯೋಗವಾಗಿದೆ.‌ ಬಡ ಹಾಗೂ ಮಧ್ಯಮ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿಗಳ ಕನಸಿಗೆ ನೀರೆರೆಯಲು ಸಿವಿಸಿ ಫೌಂಡೇಶನ್ ಹಾಗೂ ಎಸ್ ವಿ ಸಿ ಸಂಸ್ಥೆ ತರಬೇತಿ ಶಿಬಿರವನ್ನು ಆಯೋಜಿಸಿವೆ. ಈ ಭಾಗದ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಎಸ್ ವಿ ಸಿ ವಿಜ್ಞಾನ ಮತ್ತು ವಾಣಿಜ್ಯ ಪಿಯು ಕಾಲೇಜಿನ ಪ್ರಾಂಶುಪಾಲರಾದ ಭೀಮಸೇನ್ ಆಚಾರ್ (99806 86982 /9620172080) ಅವರನ್ನು ಸಂಪರ್ಕಿಸಬಹುದು ಎಂದು ಸಿವಿಸಿ ಫೌಂಡೇಶನ್ ಪತ್ರಿಕಾ ಪ್ರಕಟಣೆ ತಿಳಿಸಿದೆ.

cvc foundation koppal

svc kustagi

neet training koppal kustagi

 

Get real time updates directly on you device, subscribe now.

Comments are closed.

error: Content is protected !!