ಮಣ್ಣು ತಿಂದಿದ್ದ ಕುಣಿಕೆರಿ ಗ್ರಾಮದ ರೈತನಿಗೆ ಯೂರಿಯಾ ಗೊಬ್ಬರ ನೀಡಿದ ಬಿಜೆಪಿ ಮುಖಂಡರು

Get real time updates directly on you device, subscribe now.

ಕೊಪ್ಪಳ : ಯೂರಿಯಾ ರಸಗೊಬ್ಬರ ಅಭಾವದಿಂದ ಬೇಸತ್ತ ಕುಣಿಕೆರಿ ಗ್ರಾಮದ ರೈತ ಮಣ್ಣು ತಿಂದಿದ್ದ ಘಟನೆ  ಹಿನ್ನಲೆಯಲ್ಲಿ ಇಂದು ಆ ರೈತನ ಮನೆಗೆ ರಾಜ್ಯ ರೈತ ಮೋರ್ಚಾ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ  ಎ ಎಸ್ ಪಾಟೀಲ್ ನಡಹಳ್ಳಿರೊಂದಿಗೆ ಜಿಲ್ಲಾ ಬಿಜೆಪಿ ಹಾಗೂ ರೈತ ಮೋರ್ಚಾ ತಂಡ ಭೇಟಿ ನೀಡಿ ಯೂರಿಯಾ ಗೊಬ್ಬರ ನೀಡುವ ಮೂಲಕ ಧೈರ್ಯ ತುಂಬಲಾಯಿತು.

ಅವೈಜ್ಞಾನಿಕ ಗೊಬ್ಬರ ಶೇಖರಣೆಯೇ ಇದಕ್ಕೆಲ್ಲ ಕಾರಣವಾಗಿದ್ದು ವಿನಃಕಾರಣ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಬೆರಳು ಮಾಡುತ್ತಿದ್ದು ವಾಸ್ತವದಲ್ಲಿ ಕೇಂದ್ರದಿಂದ ಅಗತ್ಯಕ್ಕೆ ತಕ್ಕಷ್ಟು ಗೊಬ್ಬರ ರಾಜ್ಯಕ್ಕೆ ಪೂರೈಕೆಯಾಗಿದೆ ಮತ್ತು ಶೀಘ್ರದಲ್ಲೆ ಜಿಲ್ಲೆಯಲ್ಲಿ ಇದರ ವಿರುದ್ಧ ಬಿಜೆಪಿ ಪಕ್ಷ ಹೋರಾಟಕ್ಕೆ ಮುಂದಾಗಲಿದೆ-ಎ ಎಸ್ ಪಾಟೀಲ್ ನಡಹಳ್ಳಿ

ಈ ಸಂಧರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ   ಬಸವರಾಜ ಧಡೆಸೂಗೂರು,  ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ , ಡಾ.ಬಸವರಾಜ್ ಕ್ಯಾವಟರ್,  ನಗರಾಭಿವೃದ್ದಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ್ ಸೇರಿದಂತೆ  ರೈತ ಮೋರ್ಚಾ ಪದಾಧಿಕಾರಿಗಳು, ಜಿಲ್ಲಾ ಬಿಜೆಪಿ ಮುಖಂಡರು, ಸ್ಥಳೀಯ ರೈತರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!