“ವಾಣಿಜ್ಯ ರತ್ನ” ಪ್ರಶಸ್ತಿಗೆ ಸಿದ್ದಣ್ಣ ನಾಲ್ವಡ ಆಯ್ಕೆ : ಸನ್ಮಾನ

ಕೊಪ್ಪಳ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ 97ನೇ ಸಂಸ್ಥಾಪಕರ ದಿನಾಚರಣೆ ಮತ್ತು ಪ್ರತಿಷ್ಠಿತ “ವಾಣಿಜ್ಯ ರತ್ನ” ಪ್ರಶಸ್ತಿಗೆ ಭಾಜನರಾದ ಕೊಪ್ಪಳ ವರ್ತಕರ ಸಂಘದ ಕಾರ್ಯದರ್ಶಿ, ಕಿರಾಣಿ ಹಾಗೂ ಅಕ್ಕಿ ವರ್ತಕರ ಸಂಘದ ಅಧ್ಯಕ್ಷರಾದ ಸಿದ್ದಣ್ಣ ನಾಲ್ವಡರವರಿಗೆ ಕೊಪ್ಪಳದ ಪ್ರತಿಷ್ಠಿತ ಬ್ಯಾಂಕ್ ಶ್ರೀ ಗವಿಸಿದ್ದೇಶ್ವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ಆಡಳಿತ ಮಂಡಳಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ನಂತರ ಬ್ಯಾಂಕಿನ ಅಧ್ಯಕ್ಷ ರಾಜಶೇಖರಗೌಡ ಆಡೂರ ಮಾತನಾಡಿ ಹುಬ್ಬಳ್ಳಿಯ ಚೆಂಬರ್ ಕಾಮರ್ಸನಿಂದ 2025 ನೇ ಸಾಲಿಗೆ ವಾಣಿಜ್ಯ ರತ್ನ ಪ್ರಶಸ್ತಿಗೆ ಹಿರಿಯರಾದ ಸಿದ್ದಣ್ಣ ನಾಲ್ವಡ ಆಯ್ಕೆಯಾಗಿದ್ದಕ್ಕೆ ಸಂತಸ ಎನಿಸುತ್ತದೆ ಅವರನ್ನು ಅಭಿನಂದಸುತ್ತೇನೆ, ಬೆಳೆಯುವ ಕಿರಿಯ ವ್ಯಾಪಾರಿಗಳಿಗೆ ತಮ್ಮ ಸಾಧನೆ ಆದರ್ಶವಾದದು, ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಕೊಡುಗೆ ಮತ್ತು ಆದರ್ಶಪ್ರಾಯ ನಾಯಕತ್ವಕ್ಕೆ “ವಾಣಿಜ್ಯ ರತ್ನ” ಪ್ರಶಸ್ತಿ ತಮಗೆ ಅರಸಿ ಬಂದಿದೆ ಎಂದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಬಸಯ್ಯ ಹಿರೇಮಠ, ನಿರ್ದೇಶಕರಾದ ಬಸವರಾಜ ಶಹಪೂರ, ಗವಿಸಿದ್ದಪ್ಪ ತಳಕಲ್, ವಿಶ್ವನಾಥ ಅಗಡಿ, ಶಿವರೆಡ್ಡಿ ಭೂಮಕ್ಕನವರ್, ಶಿವಕುಮಾರ್ ಪಾವಲಿ ಶೆಟ್ಟರ್, ರಾಜೇಂದ್ರ ಕುಮಾರ್ ಶೆಟ್ಟರ್, ರಮೇಶ್ ಕವಲೂರ, ನಾಗರಾಜ್ ಅರಿಕೇರಿ, ಸುಮಂಗಲಾ ಸೋಮಲಾಪುರ, ಸೈಯದಾ ಸೈನಾಜ ಬೇಗಂ, ಜಯಶ್ರೀ ಬಬಲಿ, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಪ್ರಭಾಕರ್ ಜೋಶಿ, ಮಲ್ಲಿಕಾರ್ಜುನ ಸಿದ್ನೆಕೊಪ್ಪ, ಸಹಾಯಕ ವ್ಯವಸ್ಥಾಪಕರಾದ ವೀರಮ್ಮ ನರಗುಂದ, ಹಿರಿಯ ಸಹಾಯಕ ಐ.ಜೆ. ನದೀಮುಲ್ಲಾ ಸೇರಿದಂತೆ ಬ್ಯಾಂಕಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Comments are closed.