ರಸಗೊಬ್ಬರ ದಾಸ್ತಾನಿನಲ್ಲಿ ಯಾವುದೇ ಕೊರತೆಯಿಲ್ಲ: ಎನ್ ಚೆಲುವರಾಯಸ್ವಾಮಿ

Get real time updates directly on you device, subscribe now.

ರೈತರಿಗೆ ನೀಡಬೇಕಾದ ರಸಗೊಬ್ಬರ ದಾಸ್ತಾನಿನಲ್ಲಿ ಯಾವುದೇ ಕೊರತೆಯಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೃಷಿ ಸಚಿವರಾದ ಎನ್ ಚೆಲುವರಾಯಸ್ವಾಮಿ ಅವರು ಹೇಳಿದರು.

ಮಾಧ್ಯಮದವರ ಜೊತೆ ಮಾತನಾಡಿದ ಅವರು ಇರಾನ್ ನಲ್ಲಿ ಯುದ್ಧ ನಡೆಯುತ್ತಿರುವ ಕಾರಣ ಹಾಗೂ ಚೀನಾ ರಸಗೊಬ್ಬರ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವುದರಿಂದ ರಸಗೊಬ್ಬರ ವಿತರಣೆ ವಿಳಂಬವಾಗಿದೆ ಎಂದರು.

ಏಪ್ರಿಲ್ ಮಾಹೆಯಿಂದ ಜುಲೈ ಮಾಹೆಯವರೆಗೂ 6.80 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇದ್ದು ಈಗಾಗಲೇ 6.60 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಮಾರಾಟ ಮಾಡಲಾಗಿದೆ.
ಇನ್ನು ಸರ್ಕಾರದ ಬಳಿ 1.94 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಲಭ್ಯವಿದೆ ಎಂದು ಹೇಳಿದರು.

ಹಾವೇರಿಯಲ್ಲಿ 36 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇದ್ದು ಆದರೆ 40 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರವನ್ನು ಹಾವೇರಿ ಜಿಲ್ಲೆಗೆ ನೀಡಲಾಗಿದೆ. ಆಗಸ್ಟ್ ಮಾಹೆಯಲ್ಲಿ ಜಲಾಶಯಗಳ ನೀರನ್ನು ಹೊರ ಹರಿಸಿಬೇಕಾಗಿತ್ತು ಆದರೆ ಜಲಾಶಯಗಳು ತುಂಬಿದ ಕಾರಣ ಜುಲೈನಲ್ಲೆ ನೀರು ಪೂರೈಸಲಾಗಿದೆ ಆದ್ದರಿಂದ ಒಂದು ತಿಂಗಳು ಮುಂಚಿತವಾಗಿಯೇ ಬಿತ್ತನೆ ಪ್ರಾರಂಭವಾಗಿದೆ ಎಂದರು.

ಯೂರಿಯಾ ಮತ್ತು ಡಿ.ಐ.ಪಿ ಕಡಿಮೆ ಬರುತ್ತದೆ ಎಂದು ಕೇಂದ್ರದಿಂದ ನೀಡಲಾದ ಸಂದೇಶದಿಂದ ಆಗಷ್ಟನಲ್ಲಿ ಬೇಕಾಗಿರುವ ಗೊಬ್ಬರಕ್ಕಾಗಿ ರೈತರು ಈಗ ಮುಗಿಬಿಳುತ್ತಿದ್ದಾರೆ. ಇದರಿಂದಾಗಿ ಗೊಬ್ಬರ ವಿತರಣೆಯಲ್ಲಿ ಒತ್ತಡ ಬಿಳುತ್ತಿದೆ ಎಂದು ಹೇಳಿದರು.

ರೈತರು ತುಸು ತಾಳ್ಮೆ ವಹಿಸಿದರೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅಗತ್ಯವಿರುವ ಗೊಬ್ಬರವನ್ನು ಸಕಾಲಕ್ಕೆ ಸರಬರಾಜು ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ರಾಷ್ಟ್ರದಲ್ಲಿ ಗೊಬ್ಬರಕ್ಕೆ ಕೊರತೆ ಉಂಟಾದರೂ ರಾಜ್ಯದಲ್ಲಿ ಗೊಬ್ಬರಕ್ಕೆ ವಿತರಣೆಯಲ್ಲಿ ತೊಂದರೆ ಉಂಟಾಗದಂತೆ ಕ್ರಮವಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

Get real time updates directly on you device, subscribe now.

Comments are closed.

error: Content is protected !!