ಚಂದಿರನಿಲ್ಲದ ಬಾನಿನಲಿ ಹಾಗೂ ಕಮಲಿಯ ಕುರಿಮರಿ ಕೃತಿ ಲೋಕಾರ್ಪಣೆಸನ್ಮಾನ ಮತ್ತು ಕವಿಗೋಷ್ಠಿ ಕಾರ್ಯಕ್ರಮ

ಕೊಪ್ಪಳದ ಸಾಹಿತಿ ಶಿಕ್ಷಕಿ ಅರುಣಾ ನರೇಂದ್ರ ಅವರ ಚಂದಿರನಿಲ್ಲದ ಬಾನಿನಲಿ ಹಾಗೂ ಕಮಲಿಯ ಕುರಿಮರಿ ಎರಡು ಕೃತಿಗಳ ಲೋಕಾರ್ಪಣೆ,ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮತ್ತು ಕವಿಗೋಷ್ಠಿ ಕಾರ್ಯಕ್ರಮ ಜುಲೈ 20 ರಂದು ಭಾನುವಾರ ಬೆಳಿಗ್ಗೆ 10-00 ಗಂಟೆಗೆ ನಗರದ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ನಡೆಯುವುದು. ಈರಪ್ಪ ಕಂಬಳಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವರು. ಜಗದೀಶ ಸಿಂಗನಾಳ ಕಾರ್ಯಕ್ರಮವನ್ನು ಉದ್ಘಾಟಿಸುವರು. ಡಾ.ಕೆ ರವೀಂದ್ರನಾಥ ಅವರು ಕೃತಿ ಲೋಕಾರ್ಪಣೆ ಮಾಡುವರು. ಅಬ್ದುಲ್ ಹೈ. ತೋರಣಗಲ್ಲು, ರಾಮಣ್ಣ ಆಲ್ಮರ್ಸಿಕೇರಿ ಪುಸ್ತಕ ಕುರಿತು ಮಾತನಾಡುವರು. ಮಂಜುನಾಥ ಡೊಳ್ಳಿನ, ವಿಶ್ವನಾಥ ಅಗಡಿ, ಗವಿಸಿದ್ದಪ್ಪ ಅಳವಂಡಿ,ಸಹದೇವ ಯರಗೊಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅಲ್ಲಮಪ್ರಭು ಬೆಟ್ಟದೂರು, ಎ.ಎಂ. ಮದರಿ,ಡಾ.ಜೆ.ಬಿ. ಬೀಡ್ನಾಳ, ಶರಣಪ್ಪ ವಡಗೇರಿ,ಹೆಚ್.ಬಿ. ಸರೋಜಮ್ಮ ಹಾಗೂ ವಿವಿಧ ಕ್ಷೇತ್ರದ ಸಾಧಕರಾದ ರಾಜೇಂದ್ರಕುಮಾರ ಜೈನ್, ಚಂದ್ರಕಲಾ ಇಟಗಿ ಮಠ, ರಮೇಶ ಗಬ್ಬೂರ ಅವರನ್ನು ಸನ್ಮಾನಿಸಲಿದ್ದಾರೆ.
Comments are closed.