ಬಸವರಾಜ್ ಹೆಸರೂರ, ಹಾಲಯ್ಯ ಹುಡೆಜಾಲಿ, ನಾಗರಾಜ್ ಇಂಗಳಗಿಯವರಿಗೆ ಸಿಜಿಕೆ ರಂಗ ಪುರಸ್ಕಾರ

Get real time updates directly on you device, subscribe now.

ಕೊಪ್ಪಳ : ಕೊಪ್ಪಳ ಜಿಲ್ಲೆಯ ಮೂವರು ರಂಗಕರ್ಮಿಗಳಿಗೆ ಸಿಜಿಕೆ ರಂಗಪುರಸ್ಕಾರ ಘೋಷಣೆ ಮಾಡಲಾಗಿದೆ. ಜಿಲ್ಲೆಯ ಹಿರಿಯ ರಂಗಕರ್ಮಿ ಗಳಾದ ಬಸವರಾಜ್ ಹೆಸರೂರು, ಹಾಲಯ್ಯ ಹುಡೇಜಾಲಿ ಹಾಗೂ ನಾಗರಾಜ್ ಇಂಗಳಗಿ ಇವರಿಗೆ ಸಿಜಿಕೆ ರಂಗ ಪುರಸ್ಕಾರಗಳನ್ನು ಘೋಷಣೆ ಮಾಡಲಾಗಿದೆ.

ಕೊಪ್ಪಳ ವಿಶ್ವವಿದ್ಯಾಲಯ, ಕರ್ನಾಟಕ ಬೀದಿ ನಾಟಕ ಅಕಾಡೆಮಿ ಬೆಂಗಳೂರು, ಕವಿ ಸಮೂಹ, ಸೇವಾ & ಡೇವ್ಸ್. ಬಹುತ್ವ ಬಳಗ ಕೊಪ್ಪಳ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ ಸಿಜಿಕೆ ರಂಗದಿನಾಚರಣೆಯAದು ಸಿಜಿಕೆ ರಂಗಪುರಸ್ಕಾರ ಪ್ರಶಸ್ತಿಗಳನ್ನು ವಿತರಿಸಲಾಗುವುದು.
ಇದೇ ಜುಲೈ ೧೪, ೨೦೨೫ ಸೋಮವಾರ ಬೆಳಗ್ಗೆ ೧೧ ಗಂಟೆಗೆ ಕೊಪ್ಪಳ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು ಅಧ್ಯಕ್ಷರಾದ ಕೆ.ವಿ.ನಾಗರಾಜಮೂರ್ತಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕೊಪ್ಪಳ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ಬಿ.ಕೆ.ರವಿ ವಹಿಸಿಕೊಳ್ಳಲಿದ್ದಾರೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಚಾಂದ್ ಪಾಷಾ ಕಿಲ್ಲೆದಾರ್ ಸದಸ್ಯರು, ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ನಾರಾಯಣರಾವ್ ಕುಲಕರ್ಣಿ ಹಿರಿಯ ಪತ್ರಕರ್ತರು, ಕುಷ್ಟಗಿ. ಪ್ರೊ. ಕೆ.ವಿ.ಪ್ರಸಾದ ಕುಲಸಚಿವರು (ಪ್ರಭಾರ) ಕೊಪ್ಪಳ ವಿಶ್ವವಿದ್ಯಾಲಯ, ಸುರೇಶ್ ಡಿ. ಸಿಪಿಐ, ಕೊಪ್ಪಳ ಗ್ರಾಮೀಣ ಠಾಣೆ, ಕೊಪ್ಪಳ, ಡಾ. ಸುರೇಶ್ ಜಿ. ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೊಪ್ಪಳ , ತಿಮ್ಮಾರಡ್ಡಿ ಮೇಟಿ ಆಡಳಿತಾಧಿಕಾರಿಗಳು, ಕೊಪ್ಪಳ ವಿಶ್ವವಿದ್ಯಾಲಯ ಆಗಮಿಸಲಿದ್ದಾರೆ. ಆಸಕ್ತ ರಂಗ ಅಭಿಮಾನಿಗಳು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಸಂಘಟಕರಾದ ಸಿರಾಜ್ ಬಿಸರಳ್ಳಿ, ರಾಜಬಕ್ಷಿ ಹೆಚ್. ವಿ. ಪ್ರಕಟಣೆಯಲ್ಲಿ ಕೋರಿದ್ದಾರೆ.

Get real time updates directly on you device, subscribe now.

Comments are closed.

error: Content is protected !!