ಶ್ರೀ ಗವಿಮಠದ ಆವರಣದಲ್ಲಿ ಅಂತರ್‌ರಾಷ್ಟ್ರೀಯ ಯೋಗ ದಿನಾಚರಣೆ

Get real time updates directly on you device, subscribe now.

 

ವಿಶ್ವರಾದ್ಯಂತ ಪ್ರತಿವರ್ಷ 21 ಜೂನ್ ರಂದು ಎಶ್ವಯೋಗ ದಿನವನ್ನು ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದ ಸ್ವಸ್ಥವೃತ್ತ ಸ್ನಾತಕೋತ್ತರ ವಿಭಾಗ, ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ, ನವದೆಹಲಿ, ಶ್ರೀ ಜಗದ್ಗುರು ಗವಿಸಿದ್ದೇಶ್ವರ ವಿದ್ಯಾವರ್ಧಕ ಸಂಸ್ಥೆಯ ಅಂಗ ಶಿಕ್ಷಣ ಸಂಸ್ಥೆಗಳು, ಜಿಲ್ಲಾ ವಕೀಲರ ಸಂಘ ಕೊಪ್ಪಳ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೊಪ್ಪಳ ಇವರ ಸಹಯೋಗದೊಂದಿಗೆ 1 ನೇ ಅಂತರ್‌ರಾಷ್ಟ್ರೀಯ ಯೋಗ ದಿನಾಚರಣೆಯನ್ನು “ಯೋಗ ಸಂಗಮ” ಎಂಬ ಶೀರ್ಷಿಕೆಯಡಿ ಮತ್ತು ಶ್ರೀ ಮರಿಶಾಂತವೀರ ಮಹಾಸ್ವಾಮೀಜಿಗಳ ಪುಣ್ಯಸ್ಮರಣೆಯನ್ನು ಶ್ರೀ ಗವಿಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು,

ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಸಂಸ್ಥೆಯ ಸದಸ್ಯರು, ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದ ಕಾರ್ಯಾಧ್ಯಕ್ಷರಾದ ಶ್ರೀ ಸಂಜಯ ಕೊತಬಾಳ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೊಪ್ಪಳದ ಶ್ರೀ ಕುಮಾರ, ಡಿ. ಕೆ. ಇವರುಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ಕುಮಾರ, ಡಿ. ಕೆ. ಮಾತನಾಡಿ ಯೋಗವು ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಹಾಗೂ ಬೌದ್ಧಿಕ ಬೆಳವಣಿಗಗೆ ಕಾರಣವಾಗಿದೆ. ಇದಕ್ಕೆ ಯಾರ ಒತ್ತಾಯವಿಲ್ಲದೇ ಸ್ವಯಂಪ್ರೇರಿತರಾಗಿ ಪ್ರತಿಯೊಬ್ಬರು ದಿನನಿತ್ಯ ಯೋಗಾಭ್ಯಾಸ ಮಾಡಬೇಕೆಂದರು. ಕೆ.ಎಸ್ ಆಸ್ಪತ್ರೆಯ ಡಾ. ಬಸವರಾಜ ಕ್ಯಾವಟರ್ ಮಾತನಾಡಿ ಇಂದಿನ ದಿನಮಾನಗಳಲ್ಲಿ ಜೀವನಶೈಲಿಯಿಂದ ಉಂಟಾಗುವ ರೋಗಗಳನ್ನು ಯೋಗದ ಮೂಲಕ ಶಮನಗೊಳಿಸುವುದರ ಜೊತೆಗೆ ಆರೋಗ್ಯವನ್ನು ಕಾಪಾಡಬಹುದು ಎಂದು

ನಂತರ ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಸಂಸ್ಥೆಯ ಸದಸ್ಯರಾದ ಶ್ರೀ ವೀರೇಶರವರು ಸಂಸ್ಥಾಪಕ ಲಿಂ. ಶ್ರೀ ಮರಿಶಾಂತವೀರ ಮಹಾಸ್ವಾಮೀಜಿಗಳ ಕುರಿತು ಮಾತನಾಡಿದರು. ಯೋಗವು ಕೇವಲ ಶಾರೀರ ಉದ್ದೇಶವಾದ ಸಮತೋಲನ ಹಾಗೂ ಸಂತೋಷ ಯೋಗದಿಂದ ಪಡೆಯಲು ಸಾಧ್ಯವೆಂದರು. ಸದೃಢತೆ ಮಾತ್ರವಲ್ಲ ಮನಸ್ಸಿನ ನಿಗ್ರಹ ಮಾಡುವುದಕ್ಕೂ ಸಹಕಾರಿಯಾಗಿದೆ. ಜೀವನದ ಪರಮ

ವಿಶ್ವಯೋಗ ದಿನದ ಯೋಗಾಭ್ಯಾಸವನ್ನು ಸ್ವಷ್ಟವೃತ್ತ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾದ ಡಾ. ಪ್ರಭು. ಸಿ. ನಾಗಲಾಪೂರ, ಸಹಪ್ರಾಧ್ಯಾಪಕರಾದ ಡಾ. ಆತಾ ಹಾಗೂ ಡಾ. ಅಮಲ್ ಚಂದ್ರನ್, ಉಪನ್ಯಾಸಕರಾದ ಡಾ. ನವೀನಕುಮಾರ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಾದ ಡಾ. ಲಕ್ಷ್ಮಿ ಸಂಗಟಿ ಹಾಗೂ ಡಾ. ನೇಹಾ ಇವರುಗಳು ಸಾರ್ವಜನಿಕರಿಗೆ ಯೋಗ ಪ್ರದರ್ಶನವನ್ನು ನೀಡಿದರು

ಯೋಗ ದಿನಾಚರಣೆಯ ಅಂಗವಾಗಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಯೋಗ ಸ್ಪರ್ಧೆ ಏರ್ಪಡಿಸಲಾಗಿತ್ತು, ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಶ್ರೇಯಾ, ದ್ವೀತಿಯ ಸ್ಥಾನ ಸ್ವಾತಿ ಹಾಗೂ ತೃತಿಯ ಸ್ಥಾನವನ್ನು ಮಹಾಲಕ್ಷ್ಮಿ ಇವರು ಬಹುಮಾನ ಪಡೆದುಕೊಂಡರು. ಶ್ರೀ ಗವಿಸಿದ್ದೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಪ್ರಥಮ ಸ್ಥಾನ ಪಡೆದುಕೊಂಡರು. 

 

ಶ್ರೀಮತಿ ಭಾಗ್ಯಲಕ್ಷ್ಮೀ ಹಾಗೂ ಶ್ರೀಮತಿ ತ್ರಿವೇಳೆ ಎರಗಾರ ಉಪಸ್ಥಿತರಿದ್ದರು. ಶ್ರೀ ಜಗದ್ಗುರು
ಗವಿಸಿದ್ದೇಶ್ವರ ವಿದ್ಯಾವರ್ಧಕ ಸಂಸ್ಥೆಯ ಅಂಗ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸೇರಿ ಸುಮಾರು 3000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮಹಾಂತೇಶ, ಪ್ರಾರ್ಥಿಸಿದರು. ಯೋಗ ದಿನಾಚರಣೆ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಶರಣಬಸಪ್ಪ ಬಿಳಿಯೆಲೆ ಇವರು ನಡೆಸಿಕೊಟ್ಟರು. ಸಾಲಿಮಠ ಸ್ವಾಗತ ಭಾಷಣ ಮಾಡಿದರು. ಸ್ವಸ್ವವೃತ್ತ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿಯರು

Get real time updates directly on you device, subscribe now.

Comments are closed.

error: Content is protected !!