ಕೊಪ್ಪಳ ಜಿಲ್ಲಾ ಪಂಚಾಯತ ನೂತನ ಸಿಇಓ ಆಗಿ ವರ್ಣಿತ್ ನೇಗಿ ಅಧಿಕಾರ ಸ್ವೀಕಾರ

Get real time updates directly on you device, subscribe now.

Koppal CEO  Varneet Negi

:- ಕೊಪ್ಪಳ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ವರ್ಣಿತ್ ನೇಗಿ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಸಿಇಓ ರಾಹಲ್ ರತ್ನಂ ಪಾಂಡೇಯ ಅವರು ನೂತನ ಸಿಇಓ ಅವರಿಗೆ ಅಧಿಕಾರಿ ಹಸ್ತಾಂತರಿದರು.

2019 ರ ಐಎಎಸ್ ಬ್ಯಾಚ್‌ನ ಅಧಿಕಾರಿಯಾದ ವರ್ಣಿತ್ ನೇಗಿ ಅವರು ಮೂಲತಃ ಛತ್ತೀಸಗಡ ರಾಜ್ಯದವರಾಗಿದ್ದಾರೆ. ಅವರು ಮೊದಲು ತಮ್ಮ ಪ್ರೋಬೇಷನರಿ ಅವಧಿಯನ್ನು ಕೊಪ್ಪಳದಲ್ಲಿ ಮುಗಿಸಿದ ನಂತರ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಸಹಾಯಕ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿ ನಂತರ ಮೈಸೂರು ಆಡಳಿತ ತರಬೇತಿ ಸಂಸ್ಥೆ(ಎ.ಟಿ.ಐ) ನಲ್ಲಿ ಜಂಟಿ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ.
ಬೆಂಗಳೂರಿನ ಗ್ರಾಮಾಂತರ ಜಿಲ್ಲೆ ಹಾಗೂ ಕೊಡಗು ಜಿಲ್ಲೆಯ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ ನಂತರ ಕೆ.ಎಚ್.ಡಿ.ಸಿ ಹುಬ್ಬಳ್ಳಿಯ ಎಂ.ಡಿ ಆಗಿ ಕರ್ತವ್ಯ ನಿರ್ವಸಿದ ಅವರು ಸದ್ಯ ಕೊಪ್ಪಳ ಜಿಲ್ಲೆಯ ನೂತನ ಸಿಇಓ ಆಗಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಹಾಗೂ ಜಿಲ್ಲಾ ಪಂಚಾಯತನ ವಿವಿಧ ಶಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!