ಭಾವಗೀತೆಗಳ ರಚನೆಯ ಹರಿಕಾರ ಎಚ್.ಎಸ್.ವಿ. -ರವಿತೇಜ ಅಬ್ಬಿಗೇರಿ

Get real time updates directly on you device, subscribe now.

 ಕೊಪ್ಪಳ : ಭಾವಗೀತೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬರಹ ರೂಪದಲ್ಲಿ ಪ್ರಕಟಿಸಿದ ಶ್ರೇಯಸ್ಸು ಖ್ಯಾತ ಕವಿ ದಿವಂಗತ ಎಚ್..ಎಸ್. ವೆಂಕಟೇಶ ಮೂರ್ತಿ ಅವರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ರವಿತೇಜ ಅಬ್ಬಿಗೇರಿ ಅಭಿಪ್ರಾಯ ಪಟ್ಟರು.
ಅವರು ಭಾನುವಾರ ಇಲ್ಲಿಯ ಕುಷ್ಟಗಿ ರಸ್ತೆಯಲ್ಲಿರುವ ಪದಕಿ ಟೌನ್ ಶಿಪ್ ಪ್ರದೇಶದ ಶಾಂತಿ ನಿವಾಸದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಖ್ಯಾತ ಕವಿ ಡಾ. ಎಚ್..ಎಸ್. ವೆಂಕಟೇಶ್ ಮೂರ್ತಿ ಅವರಿಗೆ ನುಡಿನಮನ ಹಾಗೂ ಜಿಲ್ಲಾ ಮಟ್ಟದ ಮುಂಗಾರು ಕಾವ್ಯೋತ್ಸವ ( ಚುಟುಕು, ಕವಿತೆ, ಶಾಹಿರಿ ಹಾಗೂ ಗಜಲ್ ವಾಚನಗಳ ಝಲಕ್ ) ಕಾಯ೯ಕ್ರಮದಲ್ಲಿ ಎಚ್.ಎಸ್. ವಿ ಅವರ ಬದುಕು ಬರಹ ಕುರಿತು ಮಾತನಾಡಿ, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಯಾವುದೇ ಗುಂಪು ಪಂಗಡ ಸೀಮಿತ ಗೊಳ್ಳದೆ ನಿರಂತರ ಅಧ್ಯಯನ ಸಾಹಿತ್ಯ ಕೃಷಿ ಮಾಡುತ್ತಾ ಸುಮಾರು ನೂರಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ಕನ್ನಡ ಸಾಹಿತ್ಯ ವನ್ನು ಶ್ರೀಮಂತಗೊಳಿಸಿದ್ದಾರೆ, ಇಂತಹ ಸಾಹಿತ್ಯ ದಿಗ್ಗಜರ ಪರಂಪರೆಯನ್ನು ಯುವ ಪೀಳಿಗೆ ಸ್ಮರಿಸಿ ಗುಣಗಾನ ಮಾಡುತ್ತಿರುವುದು ಎಚ್..ಎಸ್.ವಿ ಅವರ ಸಾಥ೯ಕ ಬದುಕಿಗೆ ನಿದಶ೯ನ ಎಂದು ತಿಳಿಸಿದರು. ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜಾಮದಾರ್ ಮಾತನಾಡಿ, ಎಚ್ಚ.ಎಸ್.ವಿ ಅವರೊಂದಿಗಿನ ಒಡನಾಟ ಸ್ಮರಿಸುತ್ತಾ ನನ್ನ ಕೃತಿಗೆ ಎಚ್ಚ.ಎಸ್. ವಿ ಅವರಿಂದ ಬೆನ್ನುಡಿ ಬರೆಸಬೇಕೆಂದು ನಿರೀಕ್ಷೆ ಮಾಡಿದ್ದೆ ಅದು ಈಡೇರಲಿಲ್ಲ ಎಂದು ಭಾವುಕರಾದರು. ಬರುವ ದಿನಗಳಲ್ಲಿ ಚುಟುಕ ಸಾಹಿತ್ಯ ಪರಿಷತ್ ಹಾಗೂ ಚಲನ ಚಿತ್ರ ಆಕಾಡೆಮಿ ಸಹಯೋಗದಲ್ಲಿ ಎಚ್.ಎಸ್.ವಿ ಸ್ಮರಣಾಥ೯ ಕಾಯ೯ಕ್ರಮ ರೂಪಿಸಲಾಗುವುದು ಎಂದು ತಿಳಿಸಿದರು. ಕನ್ನಡ ಪಂಡಿತ್ ಶಿಕ್ಷಕ ತಿಥ೯ಯ್ಯ ಮಠದ ಅಧ್ಯಕ್ಷತೆ ವಹಿಸಿದ್ದರು . ಸಾಹಿತಿ ಶಿ.ಕಾ.ಬಡಿಗೇರ, ದೊಡ್ಡಯ್ಯ ಮಳಿಮಠ , ಕನ್ನಡ ಪರ ಚಿಂತಕ ಅಮೀನಸಾಬ್ ಮುಲ್ಲಾ, ಸ್ಪರ್ಧಾಸ್ಪೂತಿ೯ ಸಂಪಾದಕ ಎಚ್.ಆರ್.ವಸ್ತ್ರದ ಉಪಸ್ಥಿತರಿದ್ದರು. ನಂತರ ನಡೆದ ಮುಂಗಾರು ಕಾವ್ಯೋತ್ಸವದಲ್ಲಿ ಕವಿಗಳಾದ ಎ. ಪಿ. ಅಂಗಡಿ, ಪುಷ್ಪ ಲತಾ ಯೋಳಭಾವಿ., ಶಿವಮ್ಮ ಗುರುಸ್ಥಳಮಠ. ಶಾರದಾ ಶ್ರಾವಣಸಿಂಗ್ ರಜಪೂತ. ಡಾ. ಪ್ರಕಾಶ್ ಹಳ್ಳಿಗುಡಿ, ಸುಮಂಗಲಾ ಹಂಚಿನಾಳ,
ಪ್ರದೀಪ್ ಹದ್ದಣ್ಣವರ್,ಪೂಜಾ ವಣಗೇರಿ. ವೀರೇಶ ಇಂದರಗಿ. ಶಿವಪ್ರಸಾದ್ ಹಾದಿಮನಿ,ನಿಂಗಪ್ಪ ಕೆ,
ಅಕ್ಕಮಹಾದೇವಿ ಅಂಗಡಿ, ಶರಭಯ್ಯಸ್ವಾಮಿ ಹಿರೇಮಠ, ಮೊದಲಾದವರು ಕವಿತೆ ವಾಚಿಸಿದರು. ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರುದ್ರಪ್ಪ ಆರ್.ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಪ್ರಸಾದ್ ಹಾದಿಮನಿ ನಿರೂಪಿಸಿದರು. ಪ್ರದೀಪ ಹದ್ದಣ್ಣವರ್ ವಂದಿಸಿದರು.

Get real time updates directly on you device, subscribe now.

Comments are closed.

error: Content is protected !!