ಹೆಚ್.ಐ.ವಿ ಜಾಗೃತಿ: ರೀಲ್ಸ್ ಮೇಕಿಂಗ್ ಸ್ಪರ್ಧೆ

Get real time updates directly on you device, subscribe now.

ಕೊಪ್ಪಳ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದಿಂದ
ಜಿಲ್ಲಾ ಮಟ್ಟದ “ಯುವಜನೋತ್ಸವ ಕಾರ್ಯಕ್ರಮದ ಅಂಗವಾಗಿ ರೀಲ್ಸ್ ಮೇಕಿಂಗ್ ಸ್ಪರ್ಧೆ ಏರ್ಪಡಿಸಲಾಗಿದೆ.
ಹೆಚ್.ಐ.ವಿ ಏಡ್ಸ್ ಕುರಿತು ಜಿಲ್ಲಾ ಮಟ್ಟದಲ್ಲಿ “ಯುವಜನೋತ್ಸವ” ವನ್ನು ನ್ಯಾಕೋ ಮಾರ್ಗಸೂಚಿಯಂತೆ ರೀಲ್ಸ್ ಮೇಕಿಂಗ್ ಸ್ಪರ್ಧೆಯನ್ನು ಜಿಲ್ಲಾ, ರಾಜ್ಯ, ಪ್ರಾದೇಶಿಕ ಹಾಗೂ ರಾಷ್ಟ್ರ ಮಟ್ಟದಲ್ಲಿ ಹಮ್ಮಿಕೊಳ್ಳುತ್ತಿದ್ದು, ಈ ಸ್ಪರ್ಧೆಯ ಮುಖ್ಯ ಉದ್ದೇಶ ಹೆಚ್.ಐ.ವಿ ಏಡ್ಸ್ ಬಗ್ಗೆ ಅರಿವು ಸೇವಾ ಸೌಲಭ್ಯಗಳ ಮಾಹಿತಿ, ಕಳಂಕ ಮತ್ತು ತಾರತಮ್ಯವನ್ನು ತಡೆಗಟ್ಟುವುದು ಹಾಗೂ ಹೆಚ್.ಐ.ವಿ ಮತ್ತು ಏಡ್ಸ್ (ತಡೆ) ಕಾಯ್ದೆ 2017, ನ್ಯಾಕೋ ಏಡ್ಸ್ ಆಪ್, ಉಚಿತ ರಾಷ್ಟ್ರೀಯ ಸಹಾಯವಾಣಿ 1097, ಎಸ್.ಟಿ.ಐ., ಇತ್ಯಾದಿ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದಾಗಿದೆ.
ರೀಲ್ಸ್ ಸ್ಪರ್ಧೆಯ ಮಾರ್ಗಸೂಚಿಗಳು: 17 ರಿಂದ 25 ವರ್ಷದ ಕಾಲೇಜು ವಿದ್ಯಾರ್ಥಿಗಳು, ಕಾಲೇಜಿನಲ್ಲಿರುವ ಆರ್.ಆರ್ ಕ್ಲಬ್ ಸದಸ್ಯರುಗಳು ಭಾಗವಹಿಸಬಹುದು. “ರೌಟೇಸ್ ಆಪ್ ಟ್ರಾನ್ಸ್ಮಿಷನ್, ಸ್ಟಿಗ್ಮಾ ಅಂಡ್ ಡಿಸ್ಕಿçಮಿನೆಶನ್, ಬೆನಿಫಿಟ್ಸ್ ಆಪ್ ನಾಕಾ ಏಡ್ಸ್ ಅಪ್ಲಿಕೇಶನ್ ಆ್ಯಪ್ ಆರ್ 1097 ಟೋಲ್ ಫ್ರೀ, ಪ್ರಮೋಷನ್ ಆಪ್ ಹೆಚ್.ಐ.ವಿ ಟೆಸ್ಟಿಂಗ್ (Routes of transmission, Stigma and Discrimination, Benefits of NACO AIDS app or 1097 toll free, Promotion of HIV testing) ವಿಷಯದ ರೀಲ್ಸ್ 30 ಸೆಕೆಂಡ್ ರಿಂದ 1 ನಿಮಿಷಾಗಿರಬೇಕು. 1 ರಿಂದ 5 ವಿದ್ಯಾರ್ಥಿಗಳ ತಂಡ ಇರಬೇಕು. ರೀಲ್ಸ್ ಸ್ಪರ್ಧೆಯಲ್ಲಿ ವಿಜೇತರಾದ ಮೂರು ತಂಡಗಳಿಗೆ ಮೊದಲನೇ ಬಹುಮಾನ 1500 ರೂ., ಎರಡನೇ ಬಹುಮಾನ 1000 ರೂ. ಮತ್ತು ಮೂರನೇ ಬಹುಮಾನ 500 ರೂ.ಗಳನ್ನು ನೀಡಲಾಗುವುದು. ಸ್ಪರ್ಧೆಯಲ್ಲಿ ವಿಜೇತರಾದ 3 ರೀಲ್ಸ್ ಗಳನ್ನು ರಾಜ್ಯ ಮಟ್ಟದ ಸ್ಪರ್ಧೆಗೆ ಭಾಗವಹಿಸಲು ಕೆ.ಎಸ್.ಎ.ಪಿ.ಎಸ್. ಬೆಂಗಳೂರು ಇವರಿಗೆ ಕಳುಹಿಸಲಾಗುವುದು ವಿಜೇತರಾದ 3 ರೀಲ್ಸ್ ಗಳನ್ನು ಬಹುಮಾನವನ್ನು ಪಿ.ಎಫ್.ಎಂ.ಎಸ್ ಮುಖಾಂತರ ವಿದ್ಯಾರ್ಥಿಗಳಿಗೆ ನೀಡಲಾಗುವುದು.
ರೀಲ್ಸ್ ಗಳನ್ನು ಕಚೇರಿಗೆ ಕಳುಹಿಸಲು ಕೊನೆಯ ದಿನಾಂಕ ಆಗಸ್ಟ್ 26 ಆಗಿದ್ದು, ಅಂದು ಸಂಜೆ 5ಗಂಟೆಯವರೆಗೆ ಅವಕಾಶವಿರುತ್ತದೆ. ರೀಲ್ಸ್ ಗಳನ್ನು ಮೊ.ಸಂ: 9449843232, 9449846991 ಗೆ ಕಳುಹಿಸುವುದರ ಜೊತೆಗೆ ವಿದ್ಯಾರ್ಥಿಯ ತಮ್ಮ ಗುರುತಿನ ಚೀಟಿ, ಅಧಾರ್ ಕಾರ್ಡ ಹಾಗೂ ಕಾಲೇಜಿನ ಪ್ರಾಂಶುಪಾಲರ ದೃಢೀಕರಣ ಪತ್ರಗಳೊಂದಿಗೆ ಮಾರ್ಗಸೂಚಿಗಳನ್ವಯ ಹೆಚ್.ಐ.ವಿ ಏಡ್ಸ್ ಜಾಗೃತಿ ರೀಲ್ಸ್ ಗಳನ್ನು ಕಳುಹಿಸಬೇಕು ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!