ಮುನಿರಾಬಾದ್: ವಿಶ್ವ ಪರಿಸರ ದಿನಾಚರಣೆ
ಮುನಿರಾಬಾದ್, ಜೂ.5:
ಗ್ರಾಮದ ಮದಿನಾ ಮಸೀದಿ ಕಮೀಟಿಯಿಂದ ಗಿಡಗಳನ್ನು ನೆಟ್ಟು ಮತ್ತು ಸಾಸಿಗಳನ್ನು ವಿತರಿಸುವುದರ ಮೂಲಕ ಪರಿಸರ ಸಂರಕ್ಷಣೆಯ ಜಾಗೃತಿಯನ್ನು ಮೂಡಿಸಿ ವಿಶಿಷ್ಟವಾಗಿ ಪರಿಸರ ದಿನ ಆಚರಿಸಲಾಯಿತು.
ಮದೀನಾ ಮಸೀದಿಯ ಸದಸ್ಯ ಸಾಧಿಕ್ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಇಂದು ನಾವು ಇದನ್ನು ಸಂರಕ್ಷಿಸಿದರೆ ಇದು ಮುಂದಿನ ಪೀಳಿಗೆಗೆ ಒಂದು ದಾರಿ ದೀಪವಾಗುತ್ತದೆ. ನಾವು ಮುಂದಿನ ಪೀಳಿಗೆಗೆ ಸ್ವಚ್ಛ ಆರೋಗ್ಯಕರ ಪರಿಸರ ಒಂದನ್ನು ಬಿಟ್ಟು ಹೋಗೋಣ . ಈ ದಿನದಿಂದಲೇ ಪರಿಸರ ಸಂರಕ್ಷಣೆಗೆ ಕೈಜೋಡಿಸೋಣ ಎಂದರು.
ಮದೀನಾ ಮಸೀದಿಯ ಕಾರ್ಯದರ್ಶಿ ದಿಲಾವರ್ ಖಾನ್ ಮಾತನಾಡಿ, ಇಂದು ನಾವೆಲ್ಲರೂ ಪರಿಸರ ಮಾಲಿನ್ಯವನ್ನು ಉಂಟು ಮಾಡಿ ನಮ್ಮ ಸ್ವಂತ ಭವಿಷ್ಯಕ್ಕೆ ಅಪಾಯವನ್ನುಂಟು ಮಾಡುತ್ತಿದ್ದೇವೆ ಈ ಪರಿಸ್ಥಿತಿಯನ್ನು ತಿದ್ದುಪಡಿ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.. ಇಂದಿನ ಯಾಂತ್ರಿಕ ಯುಗದಲ್ಲಿ ಮಾನವ ತನ್ನ ಅತಿಯಾಗಿ ಬೆಳೆದ ಆರ್ಥಿಕ ಲಾಲಸೆಯಿಂದ ಪರಿಸರವನ್ನು ನಾಶ ಮಾಡುತ್ತಿದ್ದಾನೆ ಕಾಡುಗಳುಹೋಗಿ ನಾಡುಗಳು ಬೆಳೆಯುತ್ತಿವೆ, ನದಿಗಳು ಮಾಲಿನ್ಯಗೊಳ್ಳುತ್ತಿವೆ, ಗಾಳಿ ನೀರು ಮಣ್ಣು ಎಲ್ಲವೂ ಮಲಿನವಾಗುತ್ತಿದೆ ಇದು ನಮ್ಮ ಮುಂದಿನ ಪೀಳಿಗೆಗೂ ಕೂಡ ಅಪಾಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಲ್ಲರಿಗೂ ಉಚಿತವಾಗಿ ಸಸಿಯನ್ನು ಹಂಚಲಾಯಿತು ಮತ್ತು ಪರಿಸರದ ಸಂರಕ್ಷಣೆಯ ಕುರಿತು ಮನೆಮನೆಗೆ ಹೋಗಿ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ರಫೀಕ್ ಅಹಮದ್, ಸೈಯದ್ ಅನ್ವರ್, ಶಬ್ಬೀರ್ ಅಹ್ಮದ್ ಅಬ್ದುಲ್ ವಹಾಬ , ನಿಸಾರ್ ಅಹಮದ್ ಮತ್ತು ಮುಂತಾದ ಎಲ್ಲಾ ಸದಸ್ಯರು ಮತ್ತು ಮುನಿರಾಬಾದಿನ ನಾಗರಿಕರು ಹಾಜರಿದ್ದರು.
Comments are closed.