ತುಂಗಭದ್ರಾ ಜಲಾಶಯಕ್ಕೆ ಬಿಜೆಪಿ ನಿಯೋಗ ಬೇಟಿ, ಪರಿಶೀಲನೆ

Get real time updates directly on you device, subscribe now.

ಕೊಪ್ಪಳ :  ಉತ್ತರ ಕರ್ನಾಟಕ ಭಾಗದ ಜೀವನಾಡಿಯಾದ ತುಂಗಭದ್ರಾ ಜಲಾಶಯಕ್ಕೆ  ಜಿಲ್ಲೆಯ ಬಿಜೆಪಿ ಪಕ್ಷದ ಮುಖಂಡರ ನಿಯೋಗ ಭೇಟಿ ನೀಡಿ  ಕಳೆದ ವರ್ಷ ದುರಸ್ಥಿಗೆ ಒಳಗಾಗಿದ್ದ ಕ್ರಸ್ಟ್ ಗೇಟ್ ವೀಕ್ಷಣೆ ಮಾಡಿದರು.

ಕ್ರಸ್ಟ್ ಗೇಟ್ ಪರಿಶೀಲನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ

ಹೊಸ ಕ್ರಸ್ಟ ಗೇಟ್ ಅಳವಡಿಕೆಗಾಗಿ ಟೆಂಡರ್ ಪ್ರಕ್ರಿಯೆ ಮುಗಿದು ಈ ಮೇ ಅಂತ್ಯಕ್ಕೆ ಕಾಮಗಾರಿ ಮುಗಿಯಬೇಕಿತ್ತು ಆದರೆ ಇನ್ನೂ ಕೆಲಸ ಪ್ರಾರಂಭವಾಗಿಲ್ಲ, ಈ ಬಾರಿ ಮಳೆಗಾಲ ಒಂದು ತಿಂಗಳು ಮುಂಚೆಯೇ ಶುರುವಾಗಿದ್ದು ಜಲಾಶಯಕ್ಕೆ ಈ ಬಾರಿ ಹೆಚ್ಚು ನೀರು ಸಂಗ್ರಹಣೆಯಾಗುವ ನಿರೀಕ್ಷೆ ಯಲ್ಲಿದೆ ಆದರೆ ಇನ್ನೂ ಕೂಡ ಹೊಸ ಕ್ರಸ್ಟ್ ಗೇಟ್ ಅಳವಡಿಕೆ ಕಾಮಗಾರಿ ಪ್ರಾರಂಭವೆ ಆಗದಿರುವುದು ಬೇಸರದ ಸಂಗತಿ ಎಂದು ರಾಜ್ಯ ಕಾರ್ಯ ಕಾರಿಣಿ ಸದಸ್ಯ ಸದಸ್ಯ ಡಾ. ಬಸವರಾಜ್ ಕ್ಯಾವತಾರ್ ಹೇಳಿದರು.

ಜಲಾಶಯದ ಅಧಿಕಾರಿಗಳೊಂದಿಗೆ ಈ ವಿಷಯದ ಬಗ್ಗೆ ನಮ್ಮ ಪಕ್ಷದ ಎಲ್ಲಾ ನಾಯಕರು ಕೂಡ ಚರ್ಚೆ ಮಾಡಿ ಬೇಗನೆ ಕಾಮಗಾರಿ ಮುಗಿಸಲು ಕ್ರಮಗಳನ್ನೂ ತೆಗೆದುಕೊಳ್ಳಲು ಸೂಚಿಸಿದ್ದೇವೆ ಎಂದು ಜಿಲ್ಲಾಧ್ಯಕ್ಷ ಬಸವರಾಜ್ ದಡೆಸುಗುರ ಹೇಳಿದ್ರು.

ಈ ಸಂಧರ್ಭದಲ್ಲಿ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಶಾಸಕರಾದ  ದೊಡ್ಡನಗೌಡ ಎಚ್ ಪಾಟೀಲ್, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ  ಬಸವರಾಜ ಧಡೆಸೂಗೂರು, ಮಾಜಿ ಸಚಿವರಾದ  ಹಾಲಪ್ಪ ಆಚಾರ್,ಮುಖಂಡರುಗಳಾದ  ಕೆ ಕರಿಯಪ್ಪ ಮತ್ತು  ರಮೇಶ ವೈದ್ಯ ಹಾಗೂ ಇನ್ನಿತರ ಪ್ರಮುಖರು ಜೊತೆಗಿದ್ದರು.

Get real time updates directly on you device, subscribe now.

Comments are closed.

error: Content is protected !!