ಕುಷ್ಟಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Get real time updates directly on you device, subscribe now.

  ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕುಷ್ಟಗಿ ಮತಕ್ಷೇತ್ರದಲ್ಲಿ ಕುಷ್ಟಗಿ ತಾಲೂಕ‌
ಹಾಲುಮತ ಸಮಾಜ ಹಾಗೂ ಹಾಲುಮತ ಮಹಾಸಭಾ ಹಾಗೂ ಕನಕ ನೌಕರರ ಸಂಘ ಕುಷ್ಟಗಿ ಸಹಯೋಗದಲ್ಲಿ 2024 – 25
ನೇ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ
ಭಾಗಿಯಾಗಿ ಎಲ್ಲ ವಿದ್ಯಾರ್ಥಿಗಳಿಗೆ ಶುಭಕೋರಿ ಅವರ ಮುಂದಿನ ವಿದ್ಯಾಭ್ಯಾಸ ಉನ್ನತ ಮಟ್ಟಕ್ಕೆ ಹೋಗಲೆಂದು ಎಂದು ಸಂಸದ ರಾಜಶೇಖರ ಹಿಟ್ನಾಳ ಶುಭ ಹಾರೈಸಿದರು

ಈ ಸಂದರ್ಭದಲ್ಲಿ ಕುಷ್ಟಗಿ  ಶಾಸಕರಾದ  ದೊಡ್ಡನಗೌಡ ಪಾಟೀಲ್ ರವರು ಕನಕ ಗುರುಪೀಠದ
ಶಾಖಾ ಮಠದ ಜಗದ್ಗುರು ಶ್ರೀ ಶಿವಸಿದ್ಧೇಶ್ವರ ಸ್ವಾಮಿಗಳು, ಮತ್ತೋರ್ವ ಸಹೋದರ ಇನ್ ಸೈಟ್ ಐಎಎಸ್ ಇನ್ಸ್ಟಿಟ್ಯೂಟ್ ನ
ಸಂಸ್ಥಾಪಕರಾದ ಜಿ ಬಿ ವಿನಯ್ ಕುಮಾರ್ ರವರು, ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷರಾದ ಶರಣು ತಳ್ಳಿಕೇರಿ ರವರು
ಹಾಗೂ ಸಮಾಜದ ಹಿರಿಯರಾದ ಮಲ್ಲಣ್ಣ ಪಲ್ಲೆದ್, ಫಕೀರಪ್ಪ ಚಳ್ಳಿಗೇರಿ ರವರು ಕುಷ್ಟಗಿ ಹಾಲುಮತ ಮಹಾಸಭಾ ತಾಲೂಕು  ಅಧ್ಯಕ್ಷರಾದ ಗೂರಪ್ಪ ಕುರಿ, ಮಂಜುನಾಥ ನಾಲಗಾರ್ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು

Get real time updates directly on you device, subscribe now.

Comments are closed.

error: Content is protected !!