ಪರಿಶಿಷ್ಟ ಜಾತಿಗಳ ಸಮಗ್ರ ಮನೆ-ಮನೆ ಸಮೀಕ್ಷೆ ದಿನಾಂಕ ಮೇ 25 ರವರೆಗೆ ವಿಸ್ತರಣೆ

Get real time updates directly on you device, subscribe now.

ಕೊಪ್ಪಳ ಮೇ 20  : ಗೌರವಾನ್ವಿತ ನ್ಯಾಯಮೂರ್ತಿಗಳಾದ ಡಾ.ಹೆಚ್.ಎನ್. ನಾಗಮೋಹನದಾಸ್ ಏಕಸದಸ್ಯ ವಿಚಾರಣಾ ಆಯೋಗದಿಂದ ಕೈಗೊಳ್ಳಲಾದ ಪರಿಶಿಷ್ಟ ಜಾತಿಗಳ ಸಮಗ್ರ ಮನೆ-ಮನೆ ಸಮೀಕ್ಷೆ ದಿನಾಂಕವನ್ನು ಮೇ 25 ರವರೆಗೆ ವಿಸ್ತರಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ತಿಳಿಸಿದ್ದಾರೆ.
ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯ ಸಂಬAಧ ಕೈಗೊಳ್ಳಲಾಗಿರುವ ವಿಶೇಷ ಶಿಬಿರಗಳನ್ನು ಸಂಬAಧಪಟ್ಟ ಮತಗಟ್ಟೆ/ ಶಾಲೆ ಕಾಲೇಜುಗಳಲ್ಲಿ ಮೇ 26 ರಿಂದ 28ರ ವರೆಗೆ ಹಮ್ಮಿಕೊಳ್ಳಲಾಗಿದೆ ಹಾಗೂ ಆನ್‌ಲೈನ್ ಮೂಲಕ ದೃಢೀಕರಣ ನೀಡಲು ಮೇ 28 ರವರೆಗೆ ಅವಧಿ ವಿಸ್ತರಿಸಲಾಗಿದೆ. ಆಸಕ್ತರು  https://schedulecastesurvey.karnataka.gov.in.selfdeclaration     ಮೂಲಕ ಲಾಗಿನ್ ಆಗಿ ಸ್ವಯಂ ದೃಢೀಕರಣ ನೀಡಬಹುದಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ 2025ಕ್ಕೆ ಯೋಜಿಸಲಾಗಿರುವ 56,580 ಪರಿಶಿಷ್ಟ ಜಾತಿ ಕುಟುಂಬಗಳ ಪೈಕಿ ಈಗಾಗಲೇ 56,709 ಕುಟುಂಬಗಳ ಸಮೀಕ್ಷೆ ಮುಕ್ತಾಯವಾಗಿದ್ದು, ಪ್ರತಿಶತ 100 ರಷ್ಟು ಪ್ರಗತಿ ಸಾಧಿಸಲಾಗಿದೆ. 2,41,149 ಇತರ ಜಾತಿ ಕುಟುಂಬಗಳ ಸಮೀಕ್ಷೆ ಸಹ ಕೈಗೊಳ್ಳಲಾಗಿದೆ. ಸಮೀಕ್ಷೆಯಿಂದ ಯಾವುದೇ ಕುಟುಂಬಗಳು ಹೊರಗುಳಿಯದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!