Get real time updates directly on you device, subscribe now.
): 2025-26ನೇ ಸಾಲಿನ ಮಾವು ಮಾರಾಟ ಮೇಳವನ್ನು ಇನ್ನೂ 4 ದಿನಗಳ ಕಾಲ ಮುಂದುವರೆಸಲಾಗಿದೆ ಎಂದು ಕೊಪ್ಪಳ ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಸಿ. ಉಕ್ಕುಂದ ಅವರು ತಿಳಿಸಿದ್ದಾರೆ.
ಕೊಪ್ಪಳ ತೋಟಗಾರಿಕೆ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿರುವ ಮಾವು ಬೆಳೆಗೆ ಉತ್ತಮ ಮಾರುಕಟ್ಟೆ ಒದಗಿಸುವ ಜೊತೆಗೆ ಕೊಪ್ಪಳ ಜಿಲ್ಲೆಯ ನಾಗರಿಕರಿಗೆ ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳನ್ನು ರೈತರಿಂದ ನೇರವಾಗಿ ಖರೀದಿಸಲು ಮಾವು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಮೇ 13 ರಿಂದ 22ರ ಆಯೋಜಿಸಲಾಗಿದ್ದು, ರೈತರು ಹಾಗೂ ಗ್ರಾಹಕರ ಒತ್ತಾಯದ ಮೇರೆಗೆ ಮಾವು ಮಾರಾಟ ಮೇಳವನ್ನು ಇನ್ನೂ 4 ದಿನಗಳ ಕಾಲ ಅಂದರೆ ಮೇ 26ರ ಸೋಮವಾರದವರೆಗೆ ಮುಂದುವರೆಸಲಾಗಿದೆ. ರೈತರು ಹಾಗೂ ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತೋಟಗಾರಿಕೆ ಇಲಾಖೆ ಪ್ರಕಟಣೆ ತಿಳಿಸಿದೆ.
Comments are closed.