ಅಪರಾಧಿಗಳ ವಿರುದ್ಧ ಕಠಿಣ ಕ್ರಮ -ಮುಖ್ಯಮಂತ್ರಿಗಳಿಗೆ ಮನವಿ
koppal : ಬೆಂಗಳೂರಿನ ಬಿಡದಿಯಲ್ಲಿ ಅಂಗವಿಕಲ ಬಾಲಕಿಯ ಮೇಲೆ ಕ್ರೂರವಾಗಿ ಅತ್ಯಾಚಾರ ವೆಸಗಿ ಸಾಯಿಸಿದ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ (ರಿ) (ಚಂದ್ರಕಾಂತ್ ಎಸ್. ಕಾದ್ರೋಳ್ಳಿ ಬಣ) ಕೊಪ್ಪಳ ಜಿಲ್ಲಾ ಸಮಿತಿ ವತಿಯಿಂದ ಕೊಪ್ಪಳ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ನಿಂಗಪ್ಪ ಜಿ.ಎಸ್. ಬೆಣಕಲ್, ಉಪಾಧ್ಯಕ್ಷರಾದ ಗಾಳೇಪ್ಪ ಮಕ್ಕಳ್ಳಿ, ಕರಿಯಪ್ಪ ಮಣ್ಣಿನವರ, ಶ್ರೀಮತಿ ಗೌರಿ ಗೋನಾಳ, ಶ್ರೀಮತಿ ಶಶಿಕಲಾ ಮಠದ, ಶ್ರೀಮತಿ ಕೃಷ್ಣಾ ವೇಣಿ, ಶ್ರೀಮತಿ ರೇಣುಶ್ರೀ ಚೌವ್ಹಾಣ್, ಶ್ರೀ ಮೈಲಪ್ಪ ಮಾದಿನೂರು, ಶ್ರೀಮತಿ ಮಂಜುಳಾ ಕವಲೂರು ಮತ್ತು ಇನ್ನಿತರರು ಭಾಗಿಯಾಗಿದ್ದರು.
Comments are closed.