ಹುಬ್ಬಳ್ಳಿ-ಕುಷ್ಟಗಿ ನಡುವೆ ಹೊಸ ದೈನಂದಿನ ಎಕ್ಸ್‌ಪ್ರೆಸ್‌ ರೈಲು ಸೇವೆ ಆರಂಭ

Get real time updates directly on you device, subscribe now.

ಉತ್ತರ ಕರ್ನಾಟಕದ ರೈಲು ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೈರುತ್ಯ ರೈಲ್ವೆಯು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್ ಮತ್ತು ಕುಷ್ಟಗಿ ನಿಲ್ದಾಣಗಳ ನಡುವೆ ಹೊಸ ದೈನಂದಿನ ಎಕ್ಸ್‌ಪ್ರೆಸ್‌ ರೈಲು ಸೇವೆಗಳನ್ನು ಪ್ರಾರಂಭಿಸಲು ಸಂತಸ ವ್ಯಕ್ತಪಡಿಸಿದೆ.

ಉದ್ಘಾಟನಾ ವಿಶೇಷ ರೈಲು:

ಗದಗ-ಕುಷ್ಟಗಿ ಹೊಸ ರೈಲು ಮಾರ್ಗದ ಉದ್ಘಾಟನೆಯೊಂದಿಗೆ, ರೈಲು ಸಂಖ್ಯೆ 07353 ಕುಷ್ಟಗಿ – ಎಸ್ಎಸ್ಎಸ್ ಹುಬ್ಬಳ್ಳಿ ಉದ್ಘಾಟನಾ ವಿಶೇಷ ಎಕ್ಸ್‌ಪ್ರೆಸ್‌ (ಒನ್ ವೇ) ರೈಲಿಗೆ  ಕೇಂದ್ರ ರೈಲ್ವೆ ರಾಜ್ಯ ಸಚಿವರಾದ  ವಿ. ಸೋಮಣ್ಣ ಅವರು ಮೇ 15, 2024 ರಂದು ಕುಷ್ಟಗಿ ರೈಲು ನಿಲ್ದಾಣದಿಂದ ಹಸಿರು ನಿಶಾನೆ ತೋರಲಿದ್ದಾರೆ.

ಈ ಉದ್ಘಾಟನಾ ವಿಶೇಷ ರೈಲು 2 ಎಸ್ಎಲ್ಆರ್/ಡಿ ಮತ್ತು 6 ಸಾಮಾನ್ಯ ದ್ವಿತೀಯ ದರ್ಜೆ/ಸ್ಲೀಪರ್ ದರ್ಜೆಯ ಬೋಗಿಗಳೊಂದಿಗೆ ಕುಷ್ಟಗಿಯಿಂದ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿಗೆ ಚಲಿಸಲಿದ್ದು, ಮಾರ್ಗಮಧ್ಯ, ಈ ರೈಲು ಲಿಂಗನಬಂಡಿ, ಹನಮಾಪೂರ, ಯಲಬುರ್ಗಾ, ಸಂಗನಾಳ, ಕುಕನೂರು, ತಳಕಲ್, ಬನ್ನಿಕೊಪ್ಪ, ಸೋಂಪುರ ರೋಡ್, ಹಳ್ಳಿಗುಡಿ ಹಾಲ್ಟ್, ಹರ್ಲಾಪುರ, ಕಣಗಿನಹಾಳ, ಗದಗ, ಹುಲಕೋಟಿ, ಅಣ್ಣಿಗೇರಿ, ಶಿಶ್ವಿನಹಳ್ಳಿ, ಹೆಬಸೂರ ಮತ್ತು ಕುಸುಗಲ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.

ನಿಯಮಿತ ರೈಲು ಸೇವೆಗಳು:

• ರೈಲು ಸಂಖ್ಯೆ 17327 ಎಸ್ಎಸ್ಎಸ್ ಹುಬ್ಬಳ್ಳಿ – ಕುಷ್ಟಗಿ ದೈನಂದಿನ ಎಕ್ಸ್‌ಪ್ರೆಸ್‌ ರೈಲು ಮೇ 16, 2025 ರಿಂದ ನಿಯಮಿತ ಸೇವೆಯನ್ನು ಪ್ರಾರಂಭಿಸಲಿದೆ.

• ರೈಲು ಸಂಖ್ಯೆ 17328 ಕುಷ್ಟಗಿ – ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಎಕ್ಸ್‌ಪ್ರೆಸ್‌ ರೈಲು ಮೇ 17, 2025 ರಿಂದ ನಿಯಮಿತ ಸೇವೆಯನ್ನು ಪ್ರಾರಂಭಿಸಲಿದೆ.

ರೈಲು ಸಂಖ್ಯೆ 17327 ಎಸ್ಎಸ್ಎಸ್ ಹುಬ್ಬಳ್ಳಿ-ಕುಷ್ಟಗಿ ದೈನಂದಿನ ಎಕ್ಸ್‌ಪ್ರೆಸ್‌ ರೈಲು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ಸಂಜೆ 5:00 ಗಂಟೆಗೆ ಹೊರಟು ಅದೇ ದಿನ ರಾತ್ರಿ 8:40 ಕ್ಕೆ ಕುಷ್ಟಗಿಯನ್ನು ತಲುಪಲಿದೆ. ಮಾರ್ಗ ಮಧ್ಯೆ, ಈ ರೈಲು ಕುಸುಗಲ್ (05:14/05:15 pm), ಹೆಬಸೂರ (05:24/05:25 pm), ಶಿಶ್ವಿನಹಳ್ಳಿ (05:28/05:29 pm), ಅಣ್ಣಿಗೇರಿ (05:45/05:46 pm), ಹುಲಕೋಟಿ (05:54/05:55 pm), ಗದಗ (06:10/06:12 pm), ಕಣಗಿನಹಾಳ (06:19/06:20 pm), ಹರ್ಲಾಪುರ (06:27/06:28 pm), ಹಳ್ಳಿಗುಡಿ ಹಾಲ್ಟ್ (06:31/06:32 pm), ಸೊಂಪುರ ರೋಡ್ (06:35/06:36 pm), ಬನ್ನಿಕೊಪ್ಪ (06:43/06:44 pm), ತಲಕಲ್ (06:50/07:00 pm), ಕುಕನೂರು (07:12/07:13 pm), ಸಂಗನಾಳ (07:23/07:24 pm), ಯಲಬುರ್ಗಾ (07:33/07:34 pm), ಹನಮಪೂರ (07:42/07:43 pm) ಮತ್ತು ಲಿಂಗನಬಂಡಿ (07:56/07:57 pm) ನಿಲ್ದಾಣಗಳಲ್ಲಿ ಆಗಮಿಸಿ/ನಿರ್ಗಮಿಸಲಿದೆ.

ರೈಲು ಸಂಖ್ಯೆ 17328 ಕುಷ್ಟಗಿ- ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಎಕ್ಸ್‌ಪ್ರೆಸ್‌ ರೈಲು ಕುಷ್ಟಗಿಯಿಂದ ಬೆಳಿಗ್ಗೆ 07:00 ಗಂಟೆಗೆ ಹೊರಟು ಅದೇ ದಿನ ಬೆಳಿಗ್ಗೆ 10:40 ಕ್ಕೆ ಶ್ರೀ ಸಿದ್ಧರೂಢ ಸ್ವಾಮೀಜಿ ಹುಬ್ಬಳ್ಳಿಯನ್ನು ತಲುಪಲಿದೆ. ಮಾರ್ಗ ಮಧ್ಯೆ, ಈ ರೈಲು ಲಿಂಗನಬಂಡಿ (07:10/07:11 am), ಹನಮಾಪುರ (07:21/07:22 am), ಯಲಬುರ್ಗಾ (07:29/07:30 am), ಸಂಗನಾಳ (07:38/07:39 am), ಕುಕನೂರು (07:49/07:50 am), ತಲಕಲ್ (08:10/08:20 am), ಬನ್ನಿಕೊಪ್ಪ (08:25/08:26 am), ಸೊಂಪುರ ರೋಡ್ (08:33/08:34 am), ಹಳ್ಳಿಗುಡಿ ಹಾಲ್ಟ್ (08:36/08:37 am), ಹರ್ಲಾಪುರ (08:40/08:41 am), ಕಣಗಿನಹಾಳ (08:48/08:49 am), ಗದಗ (09:08/09:10 am), ಹುಲಕೋಟಿ (09:24/09:25 am), ಅಣ್ಣಿಗೇರಿ (09:33/09:34 am), ಶಿಶ್ವಿನಹಳ್ಳಿ (09:37/09:38 am), ಹೆಬಸೂರ (09:41/09:42 am) ಮತ್ತು ಕುಸುಗಲ್ (09:49/09:50 am) ನಿಲ್ದಾಣಗಳಲ್ಲಿ ಆಗಮಿಸಿ/ನಿರ್ಗಮಿಸಲಿದೆ.

ಈ ರೈಲುಗಳು ಒಟ್ಟು 11 ಬೋಗಿಗಳನ್ನು ಹೊಂದಿವೆ, ಅವುಗಳಲ್ಲಿ 9 ಸಾಮಾನ್ಯ ದ್ವಿತೀಯ ದರ್ಜೆಯ ಮತ್ತು 2 ದ್ವಿತೀಯ ದರ್ಜೆಯ ಲಗೇಜ್ ಕಮ್ ಗಾರ್ಡ್ ಬ್ರೇಕ್ ವ್ಯಾನ್’ಗಳು/ದಿವ್ಯಾಂಗಜನ ಬೋಗಿಗಳು ಸೇರಿವೆ.

ಈ ಹೊಸ ದೈನಂದಿನ ಎಕ್ಸ್‌ಪ್ರೆಸ್‌ ಸೇವೆಯು ಈ ಭಾಗದ ಪ್ರಯಾಣಿಕರು, ವಿದ್ಯಾರ್ಥಿಗಳು, ವ್ಯಾಪಾರಿಗಳು ಮತ್ತು ಸಾರ್ವಜನಿಕರಿಗೆ ವೇಗವಾದ ಮತ್ತು ಅನುಕೂಲಕರ ಪ್ರಯಾಣವನ್ನು ಒದಗಿಸುವ ಮೂಲಕ ಉತ್ತರ ಕರ್ನಾಟಕದ ಪ್ರಮುಖ ಪಟ್ಟಣಗಳ ನಡುವಿನ ಸಂಪರ್ಕವನ್ನು ಹೆಚ್ಚಿಸುವ ನಿರೀಕ್ಷೆಯಿದೆ.

Get real time updates directly on you device, subscribe now.

Comments are closed.

error: Content is protected !!