ಶ್ರೀ ಶಿವಶರಣೆ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿ: ಜಿಲ್ಲಾಡಳಿತದಿಂದ ಪುಷ್ಪ ನಮನ ಸಲ್ಲಿಕೆ
—–
ಕೊಪ್ಪಳ ಮೇ : ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶ್ರೀ ಶಿವಶರಣೆ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಆಚರಿಸಲಾಯಿತು.
ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಅವರು ಶ್ರೀ ಶಿವಶರಣೆ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ನವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಸಿಬ್ಬಂದಿ ಮುತ್ತಣ್ಣ ಚಲವಾದಿ, ಪೋಲಿಸ್ ಇಲಾಖೆಯ ಎ.ಎಸ್.ಐ ಸುರೇಶ್ ಕೆ.ಹೆಚ್ ಹಾಗೂ ಸಮಾಜದ ಮುಖಂಡರಾದ ವೀರುಪಣ್ಣ ನವೋದಯ ಕೊಪ್ಪಳ, ಬಿ.ಶರಣಪ್ಪ ವಕೀಲರು, ಶಿವರಡ್ಡಿ ಹೆಚ್.ಬಿ, ಶಂಕರಗೌಡ ಹಿರೇಗೌಡರ್, ಹನುಮರಡ್ಡಿ ಹಂಚಿನಕಟ್ಟಿ, ಸಿದ್ದರೆಡ್ಡಿ ಕೆಂಚರಡ್ಡಿ, ಚಂದ್ರಶೇಖರಗೌಡ ಪಾಟೀಲ್, ಸಂಧ್ಯಾ ಮದೀನೂರ ವಕೀಲರು, ಬಸವರಡ್ಡಿ ಮದೀನೂರ, ದೇವರಡ್ಡಿ ಹಳ್ಳಿಕೇರಿ, ಪ್ರಕಾಶ್ ರಡ್ಡಿ, ಹೇಮರಡ್ಡಿ ಕೆಂಚರೆಡ್ಡಿ, ನಾಗರಾಜ ಸುನಗ, ಸೇರಿದಂತೆ ಇನ್ನೂ ಹಲವರು ಮತ್ತು ಜಿಲ್ಲಾಧಿಕಾರಿ ಕಚೇರಿಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

Comments are closed.