ಪಹಲ್ಗಾವ್ ಉಗ್ರರ ದಾಳಿಗೆ ಆಪರೇಷನ್ ಸಿಂಧೂರ ಮೂಲಕ ಪ್ರಬಲ ಪ್ರತ್ಯುತ್ತರ-ಡಾ. ಬಸವರಾಜ ಎಸ್

Get real time updates directly on you device, subscribe now.


Koppal  ದೇಶದ ಜನರು ನಿದ್ದೆಯಲ್ಲಿರುವಾಗ ಭಾರತೀಯ ಸೇನೆ ತನ್ನ ಅದ್ಭುತ ಕಾರ್ಯಾಚರಣೆ ಮೂಲಕ ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ನುಗ್ಗಿ ಉಗ್ರ ತಾಣಗಳನ್ನು ಧ್ವಂಸ ಮಾಡಿ ತಕ್ಕ ಉತ್ತರವನ್ನು ನೀಡುವ ಮೂಲಕ ತನ್ನ ಶೌರ್ಯ ವನ್ನು ಜಗತ್ತಿಗೆ ಮತ್ತೆ ತೋರಿಸಿದೆ ಎಂದು ಭಾರತೀಯ ಜನತಾ ಪಕ್ಷದ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಡಾ. ಬಸವರಾಜ ಎಸ್ ಶ್ಲಾಘಿಸಿದರು.

ಜಮ್ಮು ಕಾಶ್ಮೀರದಲ್ಲಿ 26 ಜನ ಪ್ರವಾಸಿಗರನ್ನು ಹಿಂದೂಗಳು ಎಂದು ಗುರುತಿಸಿ ಹತ್ಯೆಗೈದ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರ ಪೈಶಾಚಿಕ ಕೃತ್ಯದ ಬಳಿಕ ಭಾರತೀಯರ ರಕ್ತ ಕುದಿಯುತ್ತಿತ್ತು. ಪ್ರತಿಯೊಬ್ಬರ ಮನದಲ್ಲಿ ಪ್ರತೀಕಾರದ ಜ್ವಾಲೆ ಉರಿಯುತ್ತಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ಉಗ್ರರು ಮತ್ತು ಇದರ ಹಿಂದೆ ಇರುವವರು ಊಹೆ ಮಾಡದ ರೀತಿಯ ಶಿಕ್ಷೆ ಅನುಭವಹಿಸಲಿದ್ದಾರೆ ಎಂದು ಸ್ಪಷ್ಟ ಸಂದೇಶವನ್ನು ನೀಡಿದ್ದರು. ಅಪರೇಷನ್ ಸಿಂಧೂರ ಮೂಲಕ ಭಾರತೀಯ ಸೇನೆ ಇದನ್ನು ನಿಜ ಗೊಳಿಸಿದೆ‌. ಉಗ್ರರ ಹುಟ್ಟಡಗಿಸುವ ರೀತಿಯಲ್ಲಿ ಸೇನೆ ಬಲವಾದ ಪೆಟ್ಟು ನೀಡಿದೆ ಎಂದು ಭಾರತೀಯ ಜನತಾ ಪಕ್ಷದ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಡಾ. ಬಸವರಾಜ ಎಸ್  ತಿಳಿಸಿದ್ದಾರೆ.

ಭಯೋತ್ಪಾದಕರಿಗೆ ಸರಿಯಾದ ರೀತಿಯಲ್ಲಿ ಮರ್ಮಾಘಾತವನ್ನು ನೀಡಿರುವ ಭಾರತೀಯ ಸೇನೆಗೆ, ಪ್ರಧಾನ ಮಂತ್ರಿಗಳಿಗೆ, ಗೃಹ ಸಚಿವರಿಗೆ  ರಕ್ಷಣಾ ಸಚಿವರಿಗೆ ,  ರಕ್ಷಣಾ ಇಲಾಖೆಗೆ ಕೊಪ್ಪಳ ಲೋಕಸಭ ಕ್ಷೇತ್ರದ ಸಮಸ್ತ ಪಕ್ಷದ ಕಾರ್ಯಕರ್ತರ ಪರವಾಗಿ ಅಭಿನಂದನೆ ಗಳು ಡಾ. ಬಸವರಾಜ ಎಸ್ ಭಾರತೀಯ ಜನತಾ ಪಕ್ಷದ ರಾಜ್ಯ ಕಾರ್ಯಕಾರಣಿ ಸದಸ್ಯರು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!