ಭಾಗ್ಯನಗರ ನ್ಯಾಷನಲ್ ಶಾಲೆ ಸತತ ೧೩ ನೇ ಬಾರಿ ೧೦೦% ಫಲಿತಾಂಶ,ರಾಜ್ಯಕ್ಕೆ ೬ನೇ ರ್ಯಾಂಕ್
ಕೊಪ್ಪಳ:- ಭಾಗ್ಯನಗರದ ನ್ಯಾಷನಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಶುಕ್ರವಾರ ಪ್ರಕಟವಾದ ೨೦೨೪ ೨೫ ನೇ ಸಾಲಿನ ಎಸ್. ಎಸ್ .ಎಲ್. ಸಿ ಫಲಿತಾಂಶದಲ್ಲಿ ಉತ್ತಮವಾದ ಸಾಧನೆ ಮಾಡಿದ್ದು, ಸತತ ೧೧ನೇ ಬಾರಿಗೆ ಶೇಕಡಾ ೧೦೦% ರಷ್ಟು ಫಲಿತಾಂಶ ಪಡೆದುಕೊಂಡಿದೆ .ಪರೀಕ್ಷೆಗೆ ಹಾಜರಾದ ಒಟ್ಟು ೮೨ ವಿದ್ಯಾರ್ಥಿಗಳಲ್ಲಿ ೮೨ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಇದರಲ್ಲಿ ೫೨ ವಿದ್ಯಾರ್ಥಿಗಳು ಅತ್ಯುನ್ನತ( ಡಿಸ್ಟಿಂಕ್ಷನ್) ದರ್ಜೆಯಲ್ಲಿ, ೩೦ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಆರ್ಯನ್ .ಕೆ. ೯೯. ೨ %(೬೦೦/೬೨೫)ಹೆಚ್ಚು ಅಂಕಗಳೊಂದಿಗೆ ರಾಜ್ಯಕ್ಕೆ ೬ನೇ ರ್ಯಾಂಕ ನ್ನು ತನ್ನದಾಗಿಸಿಕೊಂಡಿದ್ದಾರೆ. ಶಾಲೆಗೆ ನಿಖಿತಾಕೆ. ೯೮.೭೨%(೬೧೭/೬೨೫) ದ್ವಿತೀಯ ಸ್ಥಾನ ಮತ್ತು ಸೂರಜ್ ಬೇಟಗೇರಿ ೯೮.೪೦%(೬೧೫/೬೨೫) ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ .ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಪಾಲಕರಿಗೆ ಶಾಲಾ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.