ಗಂಗಾವತಿ: ತಾಲೂಕಿನ ಅನುದಾನರಹಿತ ಶಾಲೆಗಳಲ್ಲಿ ಮಹಾನ್ ಕಿಡ್ಸ್ ಶಾಲೆಗೆ ಪ್ರಥಮ ಸ್ಥಾನ.
ಗಂಗಾವತಿ: ೨೦೨೪-೨೫ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶದಲ್ಲಿ ಮಹಾನ್ ಕಿಡ್ಸ್ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶಾಲೆಗೆ ಶೇ ೧೦೦ ರಷ್ಟು ಫಲಿತಾಂಶ ತಂದುಕೊಟ್ಟಿರುತ್ತಾರೆ.
ಶಾಲೆಯ ವಿದ್ಯಾರ್ಥಿಯಾದ ಅಭಿಷೇಕ್ ೬೧೩ ಅಂಕ, ಪ್ರೀತಿ ಮುದ್ದೇಬಿಹಾಳ ೬೦೮ ಅಂಕ ಹಾಗೂ ಆಲಂ ನವಾಜ್ ೫೯೭ ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಶಾಲೆಯ ಎಲ್ಲಾ ಮಕ್ಕಳು ಉತ್ತಮ ಅಂಕಗಳನ್ನು ಪಡೆದಿದ್ದು, ಶಾಲೆಯ ಶೇ ೫೩ ರಷ್ಟು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಹಾಗೂ ಶೇಕಡಾ ೪೨ ರಷ್ಟು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿರುತ್ತಾರೆ. ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಗಂಗಾವತಿ ತಾಲೂಕಿನ ಅನುದಾನರಹಿತ ಶಾಲೆಗಳಲ್ಲಿ ಮಹಾನ್ ಕಿಡ್ಸ್ ಶಾಲೆ ಪ್ರಥಮ ಸ್ಥಾನ ಪಡೆದಿದೆ.
ಶಾಲೆಯ ೦೮ ವಿದ್ಯಾರ್ಥಿಗಳು ಕನ್ನಡ, ಹಿಂದಿ, ವಿಜ್ಞಾನ, ಸಮಾಜ, ಗಣಿತ ವಿ?ಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದುಕೊಂಡಿದ್ದಾರೆ.
ಈ ಎಲ್ಲಾ ಮಕ್ಕಳಿಗೆ ಶಾಲೆಯ ಅಧ್ಯಕ್ಷರಾದ ಶ್ರೀ ನೇತ್ರಾಜ್ ಗುರುವಿನ ಮಠ ಶುಭಾಶಯಗಳನ್ನು ಕೋರಿದರು. ಅದೇ ರೀತಿಯಾಗಿ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸವಿತಾ ಮಕ್ಕಳು ಮತ್ತು ಪಾಲಕರಿಗೆ ಶುಭಾಶಯಗಳು ತಿಳಿಸಿದರು.