ಭಾಗ್ಯನಗರ ಪಯೋನಿಯರ್ ಪಬ್ಲಿಕ್ ಸ್ಕೂಲ್ ೧೦೦% ಫಲಿತಾಂಶ

Get real time updates directly on you device, subscribe now.


ಭಾಗ್ಯನಗರ: ಭಾಗ್ಯನಗರದ ಪಯೋನಿಯರ್ ಪಬ್ಲಿಕ್ ಶಾಲೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ೧೦೦% ಫಲಿತಾಂಶ ಪಡೆದಿದೆ. ಒಟ್ಟು ಏಳು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹಾಜರಾಗಿದ್ದು, ಎಲ್ಲರೂ ಪ್ರಶಂಸನೀಯ ಫಲಿತಾಂಶಗಳನ್ನು ಗಳಿಸಿದ್ದು, ಇವರಲ್ಲಿ ಮೂವರು ಡಿಸ್ಟಿಂಕ್ಷನ್ ಮತ್ತು ನಾಲ್ವರು ಫಸ್ಟ್ ಕ್ಲಾಸ್ ಪಡಿದಿದ್ದಾರೆ.ಅತ್ಯುತ್ತಮ ಫಲಿತಾಂಶ ಹೊಂದಿದ ವಿದ್ಯಾರ್ಥಿನಿ ಕು. ವರ್ಷ ಅವರು ೬೦೧ ಅಂಕಗಳೊಂದಿಗೆ ೯೬.೧೬% ಗಳಿಸಿ ಪ್ರಥಮ ಸ್ಥಾನಗಳಿಸಿದ್ದಾರೆ. ಕು.ರಕ್ಷಾ
ಕಬಾಡಿ (೫೯೫ ಅಂಕಗಳು, ೯೫.೨೦%) ಮತ್ತು ಕು ವೈಷ್ಣವಿ (೫೮೪ ಅಂಕಗಳು, ೯೩.೪೪%). ಗಳಿಸುವುದರ ಮೂಲಕ ಈ ಮೂವರು ವಿದ್ಯಾರ್ಥಿನಿಗಳು ಂ+ ಶ್ರೇಣಿಯನ್ನು ಪಡೆದು ನಮ್ಮ ಶಾಲೆಗೆ ಕೀರ್ತಿ ತಂದಿದ್ದಾರೆ.
ಕು. ವೈಷ್ಣವಿ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ೧೦೦ ಕ್ಕೆ ೧೦೦ ಅಂಕಗಳನ್ನು ಪಡೆದು ತಮ್ಮ ಭಾಷಾ ಪ್ರತಿಭೆಯನ್ನು ಮೆರೆದಿದ್ದಾರೆ ಎಂದು ಪಯೋನಿಯರ್ ಪಬ್ಲಿಕ್ ಶಾಲೆಯ ಅಧ್ಯಕ್ಷರು, ಆಡಳಿತ ಮಂಡಳಿ ಹಾಗೂ ಅಧ್ಯಾಪಕ ವೃಂದವು ವಿದ್ಯಾರ್ಥಿಗಳ ಸಾಧನೆಗೆ ಅತ್ಯಂತ ಹೆಮ್ಮೆ ವ್ಯಕ್ತಪಡಿಸಿದ್ದು, ಪ್ರಾಂಶುಪಾಲರು ವಿದ್ಯಾರ್ಥಿಗಳ, ಪೋಷಕರ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!