ಹೂಗಾರ ಸಮಾಜದ ಮುಖಂಡ ರಮೇಶ ಹೂಗಾರ ನಿಧನ

Get real time updates directly on you device, subscribe now.

 

ಕೊಪ್ಪಳ : ಹೂಗಾರ ಸಮಾಜದ ಅಭಿವೃದ್ದಿಗೆ ಸದಾ ಶ್ರಮಿಸುತ್ತಿದ್ದ ಉತ್ಸಾಹಿ ಮುಖಂಡ ರಮೇಶ ಹೂಗಾರ (೬೩) ಅವರು ಹೃದಯಘಾತದಿಂದ ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ನಿಧನ ಹೊಂದಿದರು.
ಮೃತರಿಗೆ ಪತ್ನಿ, ಮೂವರು ಪುತ್ರರು,ಇಬ್ಬರು ಸಹೋದರರು, ಮೂವರು ಸಹೋದರಿಯರನ್ನು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಸಂತಾಪ : ಹೂಗಾರ ಸಮಾಜದ ಮುಖಂಡ ರಮೇಶ ಹೂಗಾರ ನಿಧನಕ್ಕೆ ಗದಗ ಜಿಲ್ಲಾ ಉಸ್ತುವಾರಿ ಹಾಗೂ ಕಾನೂನು ಸಚಿವರಾದ ಎಚ್.ಕೆ.ಪಾಟೀಲ್, ಸಂಸದ ಸಂಗಣ್ಣ ಕರಡಿ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಪ್ರಗತಿಪರ ಹೋರಾಟಗಾರ ಬಸವರಾಜ್ ಶೀಲವಂತರ, ಮಹಾಂತೇಶ ಕೊತಬಾಳ,ಡಾ.ಮಹಾಂತೇಶ ಮಲ್ಲನಗೌಡರ, ಶಿವರಾಜ್ ನುಗಡೋಣಿ, ಹೂಗಾರ ಸಮಾಜದ ಮುಖಂಡರಾದ ಶಂಕರ ಹೂಗಾರ ಬೆಂಗಳೂರು, ಗವಿಸಿದ್ದಪ್ಪ ಹೂಗಾರ, ವಿರೂಪಾಕ್ಷಪ್ಪ ಹೂಗಾರ, ವೆಂಕಣ್ಣ ಹೂಗಾರ,ಮಂಜುನಾಥ ಹೂಗಾರ,ವಿರೇಶ ಹೂಗಾರ,ಉದ್ಯಮಿ ಅಮರೇಶ ಹೂಗಾರ ಕೆರೆಹಳ್ಳಿ, ತೇಜಪ್ಪ ಹೂಗಾರ, ಭೀಮಣ್ಣ ಹೂಗಾರ ಶಿಕ್ಷಕರು, ಶಿವಪ್ಪ ಹಡಪದ, ರಾಮಣ್ಣ ವಾಲ್ಮೀಕಿ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!