ಹಿಂದಿವಾಲಾ ಟಿಕೆಟ್ ಕಲೆಕ್ಟರ್ ಅಮಾನತ್ತುಗೊಳಿಸಿ: ಬಿ.ಗಿರೀಶಾನಂದ
ರೈಲು ನಿಲ್ದಾಣದ ಮುಂದೆ ಕರವೇ ಪ್ರತಿಭಟನೆ|
![]()

ಕೊಪ್ಪಳ,ಏ.೨೬: ಕನ್ನಡದಲ್ಲಿ ಮಾತನಾಡಿ ಎಂದು ಮನವಿ ಮಾಡಿದಕ್ಕೆ ಕನ್ನಡಿಗ ಮಹ್ಮದ ಬಾಷಾ ಅತ್ತಾರ ಮೇಲೆ ಹಲ್ಲೆ ಮಾಡಿ ಮೊಬೈಲ್ ಕಸಿದುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ದೌಜ್ಯನ್ಯವೆಸಗಿದ್ದು ನಿಜವಾಗಲೂ ಖಂಡನೀಯವೆಂದು ಕರವೇ ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ ಜ್ಞಾನಸುಂದರ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ ಕೊಪ್ಪಳ ಜಿಲ್ಲಾ ಘಟಕದಿಂದ ಶನಿವಾರದಂದು ರೈಲು ನಿಲ್ಧಾಣದ ಮುಂದೆ ಪ್ರತಿಭಟಿಸಿ ಮಾನ್ಯ ಪ್ರಧಾನ ವ್ಯವಸ್ಥಾಪಕರು, ನೈಋತ್ಯ ರೇಲ್ವೆ ಹುಬ್ಬಳ್ಳಿ ಇವರಿಗೆ ಕೊಪ್ಪಳ ಸ್ಟೇಷನ್ ವ್ಯವಸ್ಥಾಪಕರ ಮುಖಾಂತರ ಮನವಿ ಸಲ್ಲಿಸಿ ಮಾತನಾಡಿದರು. ಏಪ್ರೀಲ್ ೨೪ ರಂದು ಕೊಪ್ಪಳ ತಾಲೂಕಿನ ಭಾಗ್ಯನಗರ ನಿವಾಸಿಯಾದ ಕನ್ನಡಿಗ ಮಹ್ಮದ ಬಾಷಾ ಅತ್ತಾರ ಇವರು ಹಂಪಿ ಎಕ್ಸಪ್ರೆಸ್ ರೈಲಿನಲ್ಲಿ ಎಸ್೩ ಬೋಗಿಯ ಆರ್.ಎ.ಸಿ ೭೧ ಆಸನದಲ್ಲಿ ಮೈಸೂರಿನಿಂದ ಕೊಪ್ಪಳಕ್ಕೆ ಪ್ರಯಾಣಿಸುವ ಸಂದರ್ಭದಲ್ಲಿ ಬೆಂಗಳೂರು ರೈಲು ನಿಲ್ದಾಣ ನಂತರದಲ್ಲಿ ಬಂದಂತಹ ಟಿಕೆಟ್ ಕಲೆಕ್ಟರ್ ಹಿಂದಿ ಬಾಷೆಯಲ್ಲಿ ಸಂಬೋಧಿಸುವಾಗ ಕನ್ನಡದಲ್ಲಿ ಮಾತನಾಡಿ ಎಂದು ಮನವಿ ಮಾಡಿದಕ್ಕೆ ಇವರ ಮೇಲೆ ಹಲ್ಲೆ ಮಾಡಿ ಮೊಬೈಲ್ ಕಸಿದುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ದೌಜ್ಯನ್ಯವೆಸಗಿದ್ದು ಬೇಸರದ ಸಂಗತಿ.
ಕಳೆದ ನಾಲ್ಕೈದು ದಿನಗಳ ಹಿಂದೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ವಾಯುಪಡೆಯ ಅಧಿಕಾರಿಯೊಬ್ಬರು ಕನ್ನಡಿಗ ಸೇಲ್ಸ್‌ಮಾನ್ ಮೇಲೆ ಹಾಡುಹಗಲೇ ಏಕಾಏಕಿ ಹಲ್ಲೆಗೈದು ದೌರ್ಜನ್ಯವೆಸಗಿದ ಪ್ರಕರಣ ಮಾಸುವ ಮೊದಲೇ ಈ ಪ್ರಕರಣ ಬೆಳಕಿಗೆ ಬಂದಿದ್ದು ಖೇಧಕರ. ರೈಲು ಪ್ರಯಾಣದಲ್ಲಿ ಸೌಜನ್ಯದಿಂದ ವರ್ತಿಸಿ ಪ್ರಯಾಣಿಕರಿಗೆ ಸುರಕ್ಷತೆ ಕಲ್ಪಿಸುವ ಅಧಿಕಾರಿಗಳೆ ದೌರ್ಜನ್ಯವೆಸಗಿದರೆ, ದೇಶದ ಪ್ರತಿಷ್ಟಿತ ರೇಲ್ವೆ ಇಲಾಖೆಯ ಮೇಲೆ ಸಾರ್ವಜನಿಕರಿಗೆ ನಂಬಿಕೆ ಇಲ್ಲದಂತಾಗುತ್ತದೆ. ರಾಜ್ಯದ ಆಡಳಿತ ಹಾಗೂ ಮಾತೃ ಭಾಷೆಯಾದ ಕನ್ನಡಲ್ಲಿ ಮಾತನಾಡಿ ಎಂದದ್ದಕ್ಕೆ ಹಲ್ಲೆ ಮಾಡಿ ದೌಜ್ಯನ್ಯವೆಸಗಿದರೆ, ನಾವು ಕರ್ನಾಟಕದಲ್ಲಿ ಬದುಕುತ್ತಿದ್ದೇವೆಯೇ? ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಆದ್ದರಿಂದ ಪದೇ ಪದೇ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರವಹಿಸಿ ಕನ್ನಡದಲ್ಲಿ ಮಾತನಾಡಿ ಎಂಬುದಕ್ಕೆ ಕನ್ನಡಿಗ ಮಹ್ಮದ ಬಾಷಾ ಅತ್ತಾರ ಇವರಿಗೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ದೌಜ್ಯನ್ಯವೆಸಗಿದ ಉತ್ತರ ಭಾರತದ ಟಿಕೆಟ್ ಕಲೆಕ್ಟರ್ ಅವರ ಮೇಲೆ ಸೂಕ್ತ ಕ್ರಮಕೈಗೊಂಡು ಕರ್ತವ್ಯದಿಂದ ಅಮಾನತ್ತು ಮಾಡಬೇಕು ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಮೂಗಿನ್, ಜಿಲ್ಲಾ ಗೌರವಾಧ್ಯಕ್ಷ ಶರಣಪ್ಪ ಚಂದನಕಟ್ಟಿ, ಸಂಜಯ ಖಟವಟೆ, ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕ ಸಿದ್ದು ಶಶಿಮಠ, ಕೊಪ್ಪಳ ನಗರಾಧ್ಯಕ್ಷ ಪ್ರಫುಲ್ ಪಾಟೀಲ, ಭಾಗ್ಯನಗರ ಅಧ್ಯಕ್ಷ ವಿರೇಶ ಮುಂಡಾಸದ, ಮುಖಂಡರಾದ ನೂರಪಾಶಾ ಕವಲೂರು, ಸಂಜೀವಸಿಂಗ್ ಹಜಾರೆ, ಮಹೇಶ್ವರ ಶಾಸ್ತ್ರಿ, ಹನುಮಂತ ತಳಕಲ್, ಚಂದ್ರು ಬಜಂತ್ರಿ, ಕಿರಣ ಮೇಟಿ, ಆಸೀಪ್ ಮೇಸ್ತ್ರಿ, ಹಾಗೂ ಇನ್ನೂ ಅನೇಕರು ಭಾಗವಹಿಸಿದ್ದರು.
ಬಾಕ್ಸ್: ರೈಲು ಪ್ರಯಾಣದಲ್ಲಿ ಸೌಜನ್ಯದಿಂದ ವರ್ತಿಸಿ ಪ್ರಯಾಣಿಕರಿಗೆ ಸುರಕ್ಷತೆ ಕಲ್ಪಿಸುವ ಅಧಿಕಾರಿಗಳೆ ದೌರ್ಜನ್ಯವೆಸಗಿದರೆ, ದೇಶದ ಪ್ರತಿಷ್ಟಿತ ರೇಲ್ವೆ ಇಲಾಖೆಯ ಮೇಲೆ ಸಾರ್ವಜನಿಕರಿಗೆ ನಂಬಿಕೆ ಇಲ್ಲದಂತಾಗುತ್ತದೆ. ಕನ್ನಡದಲ್ಲಿ ಮಾತನಾಡಿ ಎಂಬುದಕ್ಕೆ ಕನ್ನಡಿಗ ಮಹ್ಮದ ಬಾಷಾ ಅತ್ತಾರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ದೌಜ್ಯನ್ಯವೆಸಗಿದ ಉತ್ತರ ಭಾರತದ ಟಿಕೆಟ್ ಕಲೆಕ್ಟರ್ ಅವರ ಮೇಲೆ ಸೂಕ್ತ ಕ್ರಮಕೈಗೊಂಡು ಕರ್ತವ್ಯದಿಂದ ಅಮಾನತ್ತು ಮಾಡಬೇಕು
-ಬಿ.ಗಿರೀಶಾನಂದ ಜ್ಞಾನಸುಂದರ ಜಿಲ್ಲಾಧ್ಯಕ್ಷರು, ಕರವೇ
Comments are closed.