ನಿಸ್ವಾರ್ಥ ಸೇವೆಯ ಮೂಲಕ ಸಾಮಾಜಿಕ ಬದಲಾವಣೆ ಸಾಧ್ಯ-ಸಂಗಣ್ಣ ಕರಡಿ
ಕೊಪ್ಪಳ, ೧೭-ನಿಸ್ವಾರ್ಥ ಸೇವೆಯ ಮೂಲಕ ಸಾಮಾಜಿಕ ಬದಲಾವಣೆ ಸಾಧ್ಯ ನಿರ್ದೇಕರು ಮತ್ತು ಆಡಳಿತ ಮಂಡಳಿ ನಿಸ್ವಾರ್ಥ ಸೇವೆಯಿಂದ ಕಿನ್ನಾಳ ಪತ್ತಿನ ಸೌಹಾರ್ಧ ಸಹಕಾರಿ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿ ಇತರರಿಗೆ ಮಾದರಿಯಾಗಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಅವರು ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಕಿನ್ನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೧.೩ ಕೋಟಿ ವೆಚ್ಚದ ಉಗ್ರಾಣ ಹಾಗೂ ೨೦ ಲಕ್ಷ ವೆಚ್ಚದ ಲಿಫ್ಟ್ ಉದ್ಘಾಟಿಸಿ ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಕಿನ್ನಾಳ ಮತ್ತು ಭಾಗ್ಯನಗರದಮದ ಜನ ಶ್ರಮಿಕರು ಇಲ್ಲಿಯ ಪ್ರತಿಯೊಬ್ಬರು ಶ್ರಮಜೀವಿಗಳು ಕೃಷಿ ಹಾಗೂ ನೇಕಾರಿಕೆ ಸೇರಿದಂದತೆ ನಿತ್ಯ ಶ್ರಮಿಸುವ ಮೂಲಕ ಇತರರಿಗೆ ಮಾದರಿಯಾಗಿ ಜೀವನ ನಡೆಸುತ್ತಾರೆ.
ರಾಜ್ಯದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಲಿಪ್ಟ್ ಹೊಂದಿರುವ ಏಕೈಕ ಸಹಕಾರಿ ಸಂಘ ಇದಾಗಿದೆ. ರೈತರಿಗೆ ಕಾಲಕಾಲಕ್ಕೆ ರಸಗೊಬ್ಬರ ಔಷಧಿ, ಶುದ್ಧಕುಡಿಯುವ ನೀರಿನ ಘಟಕ, ಸೊಪರ್ ಮಾರ್ಕೆಟ್ ಸೇರಿದಂತೆದಲ್ಲಿ ವಲಯಗಳಲ್ಲಿ ಸೇವೆಗೆ ಸಂಘ ತೊಡಗಿಸಿ ಕೊಂಡಿರುವುದು ಶ್ಲಾಘನೀಯ ಸಂಗತಿ.
ರೈತರು ಬೆಳೆ ಬಂದಾಗ ಕಡಿಮೆ ದರಕ್ಕೆ ಬೆಳೆದ ಬೆಳೆ ಮಾರದೇ ಉತ್ತಮ ಬೆಲೆ ಸಿಗುವವರೆಗೆ ಸಂಘದ ಉಗ್ರಾಣದಲ್ಲಿ ಇಟ್ಟು ಸಾಲ ಪಡೆದು ಉತ್ತಮ ಬೆಲೆ ಬಂದಾಗ ಮಾರಲೂ ಉಗ್ರಾಣ ನಿರ್ಮಿಸಿದ್ದು ಶ್ಲಾಘನೀಯ ವಿಷಯ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲ ಯೋಜನೆಗಳ ಸದುಪಯೋಗ ಪಡೆಸಿಕೊಂಡು ರೈತರಿಗೆ ಗ್ರಾಹಕರಿಗೆ ಉತ್ತಮ ಸೌಲಭ್ಯ ನೀಡುವ ಮೂಲಕ ಹೆಸರು ಮಾಡಿರುವ ಸಹಕಾರ ಸಂಘ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ರೈತರು ರಾಸಾಯನಿಕ ಕೃಷಿ ಬಿಟ್ಟು ಸಾವಯುವ ಕೃಷಿಯಕಡೆ ಒತ್ತು ನೀಡಬೇಕು ಮುಂದಿನ ಪಿಳಿಗೆಗೆ ಶುದ್ಧ ಮಣ್ಣು ಪರಿಸರ ನೀಡುವ ಜವಾಬ್ಧಾರಿ ನಮ್ಮ ಮೇಲಿದೆ ಎಂದರು.
ಅತಿಥಿಗಳಾಗಿ ಆಗಮಿಸಿದ್ಧ ಆರ್‌ಕೆಡಿಸಿಸಿ ಬ್ಯಾಂಕ ಅದ್ಯಕ್ಷರಾದ ವಿಶ್ವನಾಥ ಪಾಟೀಲ ಮಾತನಾಡಿ ಗ್ರಾಮ ಹಾಗೂ ಸುತ್ತಮುತ್ತಲಿನ ಭಾಗದ ಅಭಿವೃದ್ಧಿಗೆ ಉತ್ತಮ ಶಾಲೆ, ಪ್ರಾಥಮಿಕ ಸಹಕಾರ ಸಂಘ ದೇವಾಲಯ ಇದ್ದಂತೆ ಕಿನ್ನಾಳ ಸಹಕಾರ ಸಂಘ ಎಲ್ಲಾ ಸಂಘಗಳಿಗೆ ಮಾದರಿಯಾಗಿ ಸೇವೆ ಸಲ್ಲಿಸುತ್ತಿದೆ ಅದರ ಬೇಡಿಕೆಗಳಿಗೆ ತಕ್ಷಣ ಪೂರೈಸಲ್ಲೂ ಆರ್‌ಕೆಡಿಸಿಸಿ ಸದ್ಧವಿದೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ನಿರ್ದೇಶಕ ಅಮರೇಶ ಉಪಲಾಪೂರ ರಾಜ್ಯದಲ್ಲಿ ಮಾದರಿಯಾಗಿ ಕೆಲಸ ನಿರ್ವಹಿಸುತ್ತಿರುವ ನಮ್ಮ ಸಂಘ ರೈತರಿಗಾಗಿ ೧.೩ ಕೋಟಿ ವೆಚ್ಚದಲ್ಲಿ ಉಗ್ರಾಣ ೨೦ ಲಕ್ಷದಲ್ಲಿ ಲಿಪ್ಟ್ ಸೌಲಭ್ಯವನ್ನು ಗ್ರಾಹಕರಿಗೆ ಅರ್ಪಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಅದ್ಯಕ್ಷತೆಯನ್ನು ಸಂಘದ ಅದ್ಯಕ್ಷ ಬಸವರಾಜ ಚಿಲವಾಡಗಿ ವಹಿಸಿದ್ದರು, ವೇದಿಕೆ ಮೇಲೆ ನಬಾರ್ಡ ಡಿಡಿಎಮ್ ಮಹಾದೇವ ಕೀರ್ತಿ, ಸಹಕಾರ ಸಂಘದ ಉಪನಿಬಂಧಕ ದಸತಗೀರಿ ಅಲಿ, ಇಪ್ಕೋ ವಲಯ ವ್ಯವಸ್ಥಾಪ ರಾಘವೇಂದ್ರ ಎನ್, ಮುಖಂಡರಾದ ವೆಂಕಟರಾಮ ದೇಸಾಯ, ಮನೋಹರರಾವ್ ದೇಸಾಯ, ನಿರ್ದೇಶಕಾರಾದ ವೀರಭದ್ರಪ್ಪ ಗಂಜಿ, ಮಹಾದೇವಯ್ಯ ಹಿರೇಮಠ, ಕೆ.ಮಲ್ಲಿಕಾರ್ಜುನ, ವಿರುಪಾಕ್ಷಪ್ಪ ಬಾರಕೇರ, ಮೋನೇಶ ಕಳ್ಳಿಮನಿ, ಈರಣ್ಣ ವಾಲ್ಮೀಕಿ, ರವೀಂದ್ರನಾಥ ಕೋಲ್ಕಾರ, ಮಲ್ಲಮ್ಮ ಕಾರಬ್ಯಾಳಿ ಮಾಲಾ ಹಡಗಲಿ, ಎಚ್.ಎಸ್.ಪಾಟೀಲ್ ಇತರರು ಇದ್ದರು. ನಿರ್ದೇಶಕ ವಿರುಪಾಕ್ಷಪ್ಪ ಐತಾಪೂರ ಸ್ವಾಗತಿಸಿದರು.
Comments are closed.