ಕೊಪ್ಪಳ ನಗರಸಭೆ: ಶೇ.5ರ ರಿಯಾಯಿತಿಯಲ್ಲಿ ಆಸ್ತಿಗಳ ತೆರಿಗೆ ಪಾವತಿಸಿ

Get real time updates directly on you device, subscribe now.

: ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿರುವ ಆಸ್ತಿ ಮಾಲಿಕರು, ಸಾರ್ವಜನಿಕರು ಶೇ.5ರ ರಿಯಾಯಿತಿಯೊಂದಿಗೆ ತಮ್ಮ ಆಸ್ತಿಗಳ ತೆರಿಗೆಯನ್ನು ಪಾವತಿಸುವಂತೆ ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.
ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿರುವ ಆಸ್ತಿ ಮಾಲಿಕರು ಸನ್ 2025-2026ನೇ ಸಾಲಿನ ಆಸ್ತಿ ತೆರಿಗೆಯನ್ನು ಏಪ್ರಿಲ್ 30ರ ಒಳಗೆ ಪಾವತಿ ಮಾಡಿದಲ್ಲಿ ಶೇ 5 ರಷ್ಟು ರಿಯಾಯಿತಿ ಇರುತ್ತದೆ ಹಾಗೂ ಮೇ-2025 ಹಾಗೂ ಜೂನ್-2025 ತಿಂಗಳಿನಲ್ಲಿ ಆಸ್ತಿ ತೆರಿಗೆ ಪಾವತಿಸಿದಲ್ಲಿ ಯಾವುದೇ ರೀತಿಯ ದಂಡ ಇರುವುದಿಲ್ಲ. ಜುಲೈ-2025 ತಿಂಗಳಿನಿಂದ ಪ್ರತಿ ತಿಂಗಳಿಗೆ ಶೇ.2 ರಷ್ಟು ದಂಡದೊಂದಿಗೆ ಆಸ್ತಿಕರ ಪಾವತಿಸಬೇಕಾಗಿರುತ್ತದೆ.
ಆಸ್ತಿ ಮಾಲಿಕರು, ಸಾರ್ವಜನಿಕರು ತಮ್ಮ ತಮ್ಮ ನಿವೇಶನಗಳು ಹಾಗೂ ಕಟ್ಟಡಗಳ ಆಸ್ತಿಕರವನ್ನು ಮೇ-2025ರ ಒಳಗಾಗಿ ತೆರಿಗೆಯನ್ನು ಪಾವತಿ ಮಾಡಿ ರಿಯಾಯಿತಿಯ ಸದುಪಯೋಗವನ್ನು ಪಡೆದುಕೊಳ್ಳಬೇಕು. ನೀರಿನ ತೆರಿಗೆ ಕಡ್ಡಾಯವಾಗಿ ಪಾವತಿಸಬೇಕು. ಅಲ್ಲದೇ ನಗರದಲ್ಲಿ ವಿವಿಧ ಉದ್ದಿಮೆಗಳನ್ನು ನಡೆಸುತ್ತಿರುವ ಉದ್ದಿಮೆದಾರರು ಕಡ್ಡಾಯವಾಗಿ ಉದ್ದಿಮೆ ಪರವಾನಿಗೆಯನ್ನು ಪಡೆದುಕೊಳ್ಳಬೇಕು ಹಾಗೂ ಉದ್ದಿಮೆ ಪರವಾನಿಗೆ ಪಡೆದುಕೊಂಡವರು 2025-2026ನೇ ಸಾಲಿಗೆ ನವೀಕರಣ ಮಾಡಿಕೊಳ್ಳಲು ಈ ಮೂಲಕ ಸೂಚಿಸಲಾಗಿದೆ. ಖಾಲಿ ನಿವೇಶನಗಳ ಮಾಲಿಕರುಗಳು ತಮ್ಮ ನಿವೇಶನಗಳಲ್ಲಿ ಕಸ ಮತ್ತು ತ್ಯಾಜ್ಯವಸ್ತು ಸಂಗ್ರಹವಾಗದಂತೆ ಸ್ವಚ್ಛವಾಗಿಟ್ಟುಕೊಳ್ಳುವಂತೆ ಕೊಪ್ಪಳ ನಗರಸಭೆ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ

Get real time updates directly on you device, subscribe now.

Comments are closed.

error: Content is protected !!