ವಿದ್ಯಾರ್ಥಿಗಳಲ್ಲಿ ಓದುವ, ಬರೆಯುವ ಹವ್ಯಾಸವನ್ನು ಬೆಳೆಸಬೇಕು-ಬಿಸರಳ್ಳಿ
ಕೊಪ್ಪಳ ; ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗೀಳಿಗೆ ಬಿದ್ದಿರುವ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಿಂದ ದೂರವಾಗುತ್ತಿದ್ದಾರೆ. ಆಟ ಪಾಠಗಳತ್ತಲೂ ಗಮನ ನೀಡುತ್ತಿಲ್ಲ. ಓದುವ, ಬರೆಯುವ ಹವ್ಯಾಸಗಳಿಂದ ದೂರವಾಗುತ್ತಿದ್ದಾರೆ. ಇಂತಹ ಪ್ರಬಂಧ ಸ್ಪರ್ಧೆಗಳನ್ನು, ಭಾಷಣ ಸ್ಪರ್ಧೆಗಳನ್ನು ಹಮ್ಮಿಕೊಳ್ಳುವ ಮೂಲಕ ಅವರಲ್ಲಿ ಓದುವ ಮತ್ತು ಬರವಣಿಗೆಯ ಹವ್ಯಾಸವನ್ನು ಬೆಳೆಸುವ ಕೆಲಸ ಮಾಡಬೇಕಿದೆ ಎಂದು ಪತ್ರಕರ್ತ,ಬರಹಗಾರ ಸಿರಾಜ್ ಬಿಸರಳ್ಳಿ ಹೇಳಿದರು.
ಸ್ವಾತಂತ್ರೋತ್ಸವ ನಿಮಿತ್ಯ ಭಾಗ್ಯನಗರದ ಡಾ.ಬಿ.ಆರ್.ಅಂಬೇಡ್ಕರ್ ಸಮಗ್ರ ಕ್ಷೇಮಾಭಿವೃದ್ದಿ ಸಂಘದಿಂದ ಅಂಬೇಡ್ಕರ್ ಸರ್ಕಲ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿ ಮಾತನಾಡುತ್ತಿದ್ದರು. ಮಕ್ಕಳಲ್ಲಿ ನಮ್ಮ ಸ್ವಾತಂತ್ರ್ಯದ ಹೋರಾಟದ ಬಗ್ಗೆ, ಸಂವಿಧಾನದ ಬಗ್ಗೆ ಹಾಗೂ ಬಾಬಾಸಾಹೇಬರ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಕೆಲಸ ಮಾಡಬೇಕು ಆ ನಿಟ್ಟಿನಲ್ಲಿ ಈ ಸಂಘವು ಕಳೆದ ಎರಡ್ಮೂರು ವರ್ಷಗಳಿಂದ ಸಂಘಟನಾತ್ಮಕವಾಗಿ ಹಾಗೂ ಸಾಮಾಜಿಕವಾಗಿ ಶೈಕ್ಷಣಿವಾಗಿ ವಿವಿಧ ಕಾರ್‍ಯಕ್ರಮಗಳನ್ನು ಹಮ್ಮಿಕೊಂಡು ಮುನ್ನಡೆಯುತ್ತಿರುವದು ಶ್ಲಾಘನೀಯ ಕೆಲಸ ಎಂದು ಹೇಳಿದರು. ಕಾಂಗ್ರೆಸ್ ಹಿರಿಯ ಮುಖಂಡ ಕೃಷ್ಣಾ ಇಟ್ಟಂಗಿ ಮಾತನಾಡಿ ಸಂಘಟನೆಯ ಕೆಲಸವನ್ನು ಶ್ಲಾಘಿಸಿದರು. ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಎಸ್ ಪಿ ಡಿ ಕಾಲೇಜ್, ಕೊಪ್ಪಳ ಕವಿತಾ, ಮುತ್ತು ದೊಡ್ಮನಿ ಕೊಪ್ಪಳ,ಮರಿಸ್ವಾಮಿ ದೇವರಮನಿ ಕಾತರಕಿ ಗುಡ್ಲಾನೂರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಕೊಪ್ಪಳ ಹಾಗೂ ಜ್ಞಾನಬಂಧು ಶಾಲೆಯ ಪ್ರತಿಭಾ ಇವರಿಗೆ ಬಹುಮಾನ ವಿತರಿಸಲಾಯಿತು. ಸ್ವಾಗತ ಮತ್ತು ನಿರೂಪಣೆಯನ್ನು ಉಪನ್ಯಾಸಕ ಮಂಜುನಾಥ ಬುಲ್ಟಿ ಹಾಗೂ ವಂದನಾರ್ಪಣೆಯನ್ನು ಅಧ್ಯಕ್ಷರಾದ ಚಂದ್ರು ಇಟ್ಟಂಗಿ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಶರಣಪ್ಪ ಹಂಚಿನಮನಿ, ಉಪಾಧ್ಯಕ್ಷ ಪುತ್ರಪ್ಪ ಕಟ್ಟಿಮನಿ, ಪ್ರಶಾಂತ ಅಡ್ಡೇದಾರ, ಮೊಹ್ಮದ್ , ಮನು, ಶಿವು ಇಟ್ಟಂಗಿ, ಅಮುಲ್ ಕಠಾರೆ ಸೇರಿದಂತೆ ಇತರರು ಉಪಸ್ಥಿತರಿದ್ದರು,
Comments are closed.