ಇ-ಜಮಾಬಂದಿ ತಂತ್ರಾಂಶ ವರ್ಷದೊಳಗೆ ಪೂರ್ಣ: ಕೃಷ್ಣ ಬೈರೇಗೌಡ
– ಭೂ ದಾಖಲೆಗಳ ಪರಿಶೀಲನೆಗೆ ಅನುಕೂಲ
– ಭೂ ಮಾಲೀಕತ್ವದ ದಾಖಲೆಗಳಿಗೆ ಅಧಿಕೃತ ದೃಢೀಕರಣ
ಬೆಂಗಳೂರು ಮಾರ್ಚ್ 12:
ಗ್ರಾಮ ಹಾಗೂ ತಾಲ್ಲೂಕು ಮಟ್ಟದ ಭೂದಾಖಲೆಗಳನ್ನು ತಾಳೆ ಮಾಡಿ ಕ್ರಮಬದ್ಧಗೊಳಿಸುವ ವಿಧಾನವಾದ ಜಮಾಬಂದಿ ಪ್ರಕ್ರಿಯೆಯನ್ನು ವೇಗವಾಗಿ ನಿರ್ವಹಿಸಲು ಇ-ಜಮಾಬಂದಿ ತಂತ್ರಾಂಶವನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ವಿಧಾನಪರಿಷತ್‌ನಲ್ಲಿ ತಿಳಿಸಿದ್ದಾರೆ.
ಸದಸ್ಯ ಜವರಾಯಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಇದರಿಂದ ಗ್ರಾಮ ಲೆಕ್ಕಿಗರ ಮೇಲಿನ ಕಾರ್ಯದ ಒತ್ತಡ ಕಡಿಮೆ ಆಗಲಿದ್ದು, ಜಮಾಬಂದಿ ಪ್ರಕ್ರಿಯೆಗೆ ವೇಗ ದೊರೆಯಲಿದೆ. ಸದ್ಯಕ್ಕೆ ಇದು ಅರ್ಧ ಪೂರ್ಣಗೊಂಡಿದ್ದು, ಒಂದು ವರ್ಷದೊಳಗೆ ಸಂಪೂರ್ಣವಾಗಲಿದೆ ಎಂದು ತಿಳಿಸಿದರು.
ಜಮಾಬಂದಿ ಒಂದು ಸರಕಾರಿ ಪ್ರಕ್ರಿಯೆಯಾಗಿದ್ದು, ಇದನ್ನು ಪ್ರತಿ ವರ್ಷ ಭೂಮಿಯ ದಾಖಲೆಗಳ ಪರಿಶೀಲನೆಗಾಗಿ ಹಮ್ಮಿಕೊಳ್ಳಲಾಗುತ್ತದೆ. ಇದನ್ನು ಸಾಮಾನ್ಯವಾಗಿ ತಹಶೀಲ್ದಾರ್ ಮೇಲ್ವಿಚಾರಣೆಯಡಿ ಗ್ರಾಮ ಲೆಕ್ಕಿಗರು ಮತ್ತು ಇತರ ಅಧಿಕಾರಿಗಳು ನಡೆಸುತ್ತಾರೆ. ಇದು ಜನರಿಂದ ನಡೆಯುವ ಗ್ರಾಮ ಪಂಚಾಯತಿಯ ವಾರ್ಷಿಕ ಆದಾಯ ಮತ್ತು ವೆಚ್ಚಗಳ ಭೌತಿಕ ಮತ್ತು ಆರ್ಥಿಕ ಲೆಕ್ಕ ಪರಿಶೀಲನೆಯಾಗಿದೆ. ಗ್ರಾಮ ಪಂಚಾಯತಿಯು ನಿರ್ವಹಿಸುವ ಲೆಕ್ಕಗಳು, ಲೆಕ್ಕಗಳು, ರಿಜಿಸ್ಟರ್‌ಗಳು, ರಿಜಿಸ್ಟರ್‌ಗಳ ದಾಖಲೆಗಳು ಹಾಗೂ ಅನುಷ್ಠಾನಿಸಿದ ಕಾಮಗಾರಿಗಳ ವಾರ್ಷಿಕ ಲೆಕ್ಕಪರಿಶೋಧನೆ ಮಾಡಲಾಗುತ್ತದೆ ಎಂದರು.
ಇ-ಜಮಾಬಂದಿ ಎಂದರೆ ಜಮಾಬಂದಿಯ ಆನ್‌ಲೈನ್ ಆವೃತ್ತಿ ಆಗಿದ್ದು, ಇದು ಹಕ್ಕುಗಳ ದಾಖಲೆ ಅಥವಾ ಭೂ ಮಾಲೀಕತ್ವದ ದಾಖಲೆಗಳಿಗೆ ಅಧಿಕೃತ ದೃಢೀಕರಣವನ್ನು ನೀಡುತ್ತದೆ. ಹರಿಯಾಣ ಸೇರಿದಂತೆ ಇತರ ರಾಜ್ಯಗಳು ಈಗಾಗಲೇ ಜಮಾಬಂದಿಯ ವಿದ್ಯುನ್ಮಾನ ಆವೃತ್ತಿಯನ್ನು ಅಭಿವೃದ್ಧಿಪಡಿಸಿ ಯಶಸ್ವಿಯಾಗಿದ್ದು, ಇದೇ ಮಾದರಿಯಲ್ಲಿ ಕರ್ನಾಟದಲ್ಲೂ ಇ-ಜಮಾಬಂದಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು.
ನಾಗರಿಕರಿಗೆ ಯೋಜನೆಗಳ ನಿಖರ ಮಾಹಿತಿ ಒದಗಿಸುವುದು. ಸಾರ್ವಜನಿಕ ಕುಂದುಕೊರತೆ. ಪರಿಹಾರ ಹಾಗೂ ಗ್ರಾಮ ಪಂಚಾಯತಿಗಳ ಸ್ಪಂದನಶೀಲ ಆಡಳಿತಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದು ಜಮಾಬಂದಿ ಪ್ರಕ್ರಿಯೆಯ ಉದ್ದೇಶವಾಗಿದೆ ಎಂದರು.
ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳಾದ ಕುಡಿಯುವ ನೀರು, ವಸತಿ, ಮಹಾತ್ಮಗಾಂಧಿ ನರೇಗಾ ಯೋಜನೆ, 15ನೇ ಹಣಕಾಸು ಇತ್ಯಾದಿ ಕಾರ್ಯಕ್ರಮ/ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಖಾತರಿಪಡಿಸುವುದು ಹಾಗೂ ಗ್ರಾಮ ಪಂಚಾಯತಿ ಆಡಳಿತದಲ್ಲಿ ಪಾರದರ್ಶಕತೆ ತರುವುದು ಜಮಾಬಂದಿ ಆಯೋಜನೆಯ ಉದ್ದೇಶವಾಗಿದೆ. ನ್ಯೂಲೈನ್ ಭೌತಿಕವಾಗಿ ನಡೆಯುವ ಈ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ನಿರ್ವಹಿಸಲು ಈ ತಂತ್ರಾಂಶವನ್ನು ಸರ್ಕಾರ ಮುಂಬರುವ ದಿನಗಳಲ್ಲಿ ಅಭಿವೃದ್ಧಿಪಡಿಸಲಿದೆ ಎಂದು
ತಿಳಿಸಿದರು.
ಜಮಾಬಂದಿ ಪ್ರಕ್ರಿಯೆಯಲ್ಲಿ ಸರ್ಕಾರ ಮತ್ತು ಸ್ಥಳೀಯ ಆಡಳಿತ ಜಮಾಬಂದಿಯ ವೇಳಾಪಟ್ಟಿ ಪ್ರಕಟಿಸುತ್ತದೆ. ಲೆಕ್ಕಿಗರು ಗ್ರಾಮಸ್ಥರ ಸಹಯೋಗದೊಂದಿಗೆ ಭೂ ದಾಖಲೆಗಳನ್ನು ಪರಿಶೀಲಿಸುತ್ತಾರೆ. ಯಾವುದೇ ಭೂ ಸ್ವಾಮ್ಯ, ವಾರಸು ಹಕ್ಕು ಅಥವಾ ದಾಖಲೆಗಳ ತಿದ್ದುಪಡಿ ಈ ಹಂತದಲ್ಲಿ ಮಾಡಬಹುದು, ತಹಶೀಲ್ದಾರ್ ಮತ್ತು ಇತರ ಅಧಿಕಾರಿಗಳು ದಾಖಲೆಗಳನ್ನು ದೃಢೀಕರಿಸುತ್ತಾರೆ. ಪರಿಶೀಲನೆಯ ನಂತರ ಜಮಾಬಂದಿಯ ಅಂತಿಮ ದಾಖಲೆಗಳನ್ನು ಸಾರ್ವಜನಿಕರಿಗೆ ಲಭ್ಯವಿರಿಸಲಾಗುತ್ತದೆ ಎಂದು ತಿಳಿಸಿದರು.
ಭೂ-ಕಂದಾಯ ಕಾಯ್ದೆಯಲ್ಲಿ ಸಮಗ್ರ ಬದಲಾವಣೆ ಪ್ರಸ್ತುತ ಕರ್ನಾಟಕ ಸರ್ಕಾರದ ಭೂಮಿ ಪೋರ್ಟಲ್ ನಲ್ಲಿ ಭೂದಾಖಲೆಗಳನ್ನು ಪರಿಶೀಲಿಸುವ ಹಾಗೂ ಅಗತ್ಯ ದಾಖಲೆಗಳನ್ನು ಡೌನೋಡ್ ಮಾಡುವ ಆಯ್ಕೆಯನ್ನು ನೀಡಲಾಗಿದೆ. ಭೂಮಿ ಹಕ್ಕುಪತ್ರ, ಖಾತಾ ವಿವರಗಳು, ಭೂನಕ್ಷೆ ಮತ್ತು ಇತರ ದಾಖಲೆಗಳನ್ನು ಅನೈನ್ನಲ್ಲಿ ಪಡೆಯಲು ಅವಕಾಶ ನೀಡಲಾಗಿದೆ ಎಂದರು.
ಪ್ರಸ್ತುತ ಚಾಲ್ತಿಯಲ್ಲಿರುವ ಕರ್ನಾಟಕ ಭೂ-ಕಂದಾಯ ಕಾಯ್ದೆಯು ತುಂಬ ಹಳೆಯದಾಗಿದ್ದು, ಕ್ಷೇತ್ರ ಮಟ್ಟದಲ್ಲಿ ಅನುಷ್ಟಾನಗೊಳಿಸಲು ಹಾಗೂ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಹೆಚ್ಚಿನ ಸ್ಪಷ್ಟತೆ ಹೆಚ್ಚಿನ ಸ್ಪಷ್ಟತೆ ನೀಡುವ ಹಿನ್ನೆಲೆಯಲ್ಲಿ ಸಮಗ್ರವಾಗಿ ಅಧ್ಯಯನ ಯನ ನಡೆಸಿ, ಹೊಸ ಭೂಕಂದಾಯ ಕಾಯ್ದೆ ತರಲಾಗುವುದು ಎಂದು ಹೇಳಿದರು.