ಸರ್ಕಾರಿ ಶಾಲೆಗಳ ಎಸ್.ಎಸ್.ಎಲ್.ಸಿ ಫಲಿತಾಂಶ ಶೇ.90 ಕ್ಕಿಂತ ಕಡಿಮೆ ಆಗದಿರಲಿ: ರಾಹುಲ್ ರತ್ನಂ ಪಾಂಡೇಯ

ಕೊಪ್ಪಳ ಜಿಲ್ಲೆಯ ಸರ್ಕಾರಿ ಶಾಲೆಗಳ ಎಸ್.ಎಸ್.ಎಲ್.ಸಿ ಫಲಿತಾಂಶವು ಶೇ.90 ಕ್ಕಿಂತ ಕಡಿಮೆ ಆಗದಿರಲಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ ಹೇಳಿದರು.
ಅವರು ಶನಿವಾರ ಜಿಲ್ಲಾ ಪಂಚಾಯತ್ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶವು ಸುಧಾರಣೆ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಮತ್ತು ನೋಡಲ್ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕಳೆದ ಬಾರಿಯ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಶೇ.74.5 ರಷ್ಟು ಎಸ್.ಎಸ್.ಎಲ್.ಸಿ ಫಲಿತಾಂಶ ಬಂದಿದೆ. ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಮಕ್ಕಳ ಫಲಿತಾಂಶ ಸುಧಾರಣೆಗಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದ್ದು, ಪ್ರತಿಯೊಬ್ಬ ನೋಡಲ್ ಅಧಿಕಾರಿಗೆ 6 ಶಾಲೆಗಳನ್ನು ದತ್ತು ನೀಡಲಾಗಿದೆ. ಕಲಿಕಾ ಗುಣಮಟ್ಟದ ಹೆಚ್ಚಳಕ್ಕೆ ತೀವ್ರ ನಿಗಾ ವಹಿಸಿದ್ದು, ಇತ್ತೀಚೆಗೆ ನಡೆದ ಪೂರಕ ಪರಿಕ್ಷೆಯಲ್ಲಿ ಶೇ.79.6 ರಷ್ಟು ಫಲಿತಾಂಶ ಬಂದಿದೆ. ಪ್ರಸ್ತುತ ವರದಿ ಪ್ರಕಾರ ಗಣಿತದಲ್ಲಿ ನೋಡುವುದಾದರೆ ಶೇ.84 ರಷ್ಟು ಫಲಿತಾಂಶ ಬಂದಿದೆ. ಇದರಲ್ಲಿ ಫೆಲ್ ಆಗಿರುವ ಶೇ.20ರ ಮಕ್ಕಳಿಗೆ ಇನ್ನೂ 15 ದಿನಗಳ ಕಾಲ ಸೂಕ್ತ ಮಾರ್ಗದರ್ಶನ ಮಾಡಿ ಆ ಮಕ್ಕಳು ಪಾಸ್ ಆಗುವಂತೆ ಮಾಡಬೇಕು. ಗಣಿತ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಇನ್ನೂ ಸ್ವಲ್ಪ ಸುಧಾರಣೆ ಮಾಡಲು ಅವಕಾಶವಿದ್ದು, ಇದರಿಂದ ನಮ್ಮ ಗುರಿ ಶೇ.84ಕ್ಕೆ ತಲುಪುತ್ತದೆ. ಪೂರಕ ಪರೀಕ್ಷೆಗಳಲ್ಲಿ ಫೇಲ್ ಆದ ಮಕ್ಕಳಗೆ ಹೆಚ್ಚಿನ ಗಮನ ಹರಿಸಿ, ಆ ಮಕ್ಕಳಲ್ಲಿ ಕನಿಷ್ಠ 25% ಮಕ್ಕಳು ಉತ್ತೀರ್ಣರಾದರೆ, ನಮಗೆ ಸುಲಭವಾಗಿ ಶೇ.85 ಗುರಿ ತಲುಪಲು ಸಹಾಯ ಆಗುತ್ತದೆ. ಇನ್ನೂ ಕೇವಲ 5 ರಿಂದ 6% ಗ್ರಾಸ್ ಆದರೆ, ನಮ್ಮ ಗುರಿ ಶೇ.90 ಕ್ಕೆ ತಲುಪಲಿದೆ ಎಂದರು.
ಎಸ್.ಎಸ್.ಎಲ್.ಸಿ ಪರೀಕ್ಷೆಗಾಗಿ ಈ ವರ್ಷದಲ್ಲಿ 23,763 ಮಕ್ಕಳ ನೋಂದಣಿಯಾಗಿದೆ. ಪ್ರತಿದಿನ 10 ಅಂಶಗಳ ಪ್ರಕಾರ ಕೆಲಸ ಮಾಡ್ತಿದಾರೆ, ಅದು ಮುಂದಿನ 15 ದಿನಗಳ ಕಾಲ ಮುಂದುವರೆಯಬೇಕು. ನೂಡಲ್ ಅಧಿಕಾರಿಗಳು ಸತತವಾಗಿ ಹಿಂದಿನ ಒಂದು ವರ್ಷದಿಂದ ಪ್ರಯತ್ನ ಮಾಡುತ್ತಿದ್ದಾರೆ, ಆದಷ್ಟು ಬೇಗ ಗುರಿ ತಲುಪಬೇಕು. ಯಾವುದೇ ಶಾಲೆಯಲ್ಲಿ 90% ಕ್ಕಿಂತ ಕಡಿಮೆ ಫಲಿತಾಂಶ ಇರಬಾರದು. ಈ ಹಿನ್ನೆಲೆಯಲ್ಲಿ ನೋಡಲ್ ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಿ. ಈ ಮಾಹಿತಿಯನ್ನು ನೋಡಲ್ ಅಧಿಕಾರಿಗಳು ಬಿ.ಇ.ಓ.ಗಳಿಗೆ ತಿಳಿಸಿ, ಮುಂದಿನ 15 ದಿನದಲ್ಲಿ ಪ್ರತಿದಿನ ಶಾಲೆಗಳನ್ನ ವೀಕ್ಷಿಸಿ ಅಲ್ಲಿನ ಸಮಸ್ಯೆಗಳ ಕುರಿತು ಜಿಲ್ಲಾ ಪಂಚಾಯತ್ ಗೆ ವರದಿ ನೀಡಬೇಕು ಎಂದು ಎಲ್ಲಾ ನೋಡಲ್ ಅಧಿಕಾರಿಗಳಿಗೆ ಸಿಇಓ ಅವರು ಸೂಚನೆ ನೀಡಿದರು.
ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಶೈಲ ಬಿರಾದಾರ ಹಾಗೂ ನೋಡಲ್ ಅಧಿಕಾರಗಳು ಸೇರಿದಂತೆ ಶಾಲಾ ಶಿಕ್ಷಣ ಇಲಾಖೆ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Comments are closed.