ನಿಂಗೋಜಿಗೆ ಶರಣ ಸಂಕುಲ ರತ್ನರಾಜ್ಯ ಪ್ರಶಸ್ತಿ ಪ್ರದಾನ

Get real time updates directly on you device, subscribe now.


ಯಲಬುರ್ಗಾ — ತಾಲೂಕಿನ ಕರಮುಡಿ ಗ್ರಾಮದ ಉತ್ಸಾಹಿ ಸಾಹಿತಿ ವೀರಪ್ಪ ಮಲ್ಲಪ್ಪ ನಿಂಗೋಜಿ ರವರಿಗೆ “ಶರಣ ಸಂಕುಲ ರತ್ನರಾಜ್ಯ ಪ್ರಶಸ್ತಿ” ಯನ್ನು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯವರು ಬೆಳಗಾವಿಯ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಜರುಗಿದ ಬೆಳಗಾವಿ ತಾಲೂಕಾ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಉದ್ಘಾಟನೆ ಹಾಗೂ ವಿಜಯ ಬಡಿಗೇರ ರವರ “ಅನುಸ್ಪಂದನ” ಆಧುನಿಕ ವಚನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಪ್ರದಾನ ಮಾಡಿ ಗೌರವಿಸಲಾಗಿದೆ.
ನಿಂಗೋಜಿರವರ ಸಾಹಿತ್ಯಕ ಸೇವೆಯನ್ನು ಗುರುತಿಸಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲು ಹೆಮ್ಮೆ ಎನಿಸುತ್ತದೆ ಎಂದು
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯಾಧ್ಯಕ್ಷರಾದ ಕೊಟ್ರೇಶ್ ಎಸ್. ಉಪ್ಪಾರ ˌ ರವರು ಹೇಳಿ ಗೌರವಿಸಿದರು.
ಜಿಲ್ಲಾಧ್ಯಕ್ಷರಾದ ಸುಶೀಲಾ ಲ. ಗುರವ ˌ ತಾಲೂಕಾಧ್ಯಕ್ಷರಾದ ಡಾ. ಪಾರ್ವತಿದೇವಿ ಪಾಟೀಲˌ ಬೆಳಗಾವಿ ಜಿಲ್ಲಾ ಕ.ಸಾ.ಪ.ಅಧ್ಯಕ್ಷರಾದ ಮಂಗಲಾ ಮೆಟಗುಡ್ಡ ˌಶಾಲಿನಿ ರುದ್ರಮುನಿ ˌ ವಿಜಯ ಬಡಿಗೇರ ˌ ಪ್ರಾ. ಹುಣಸಿಕಟ್ಟಿ ˌ ಎ.ಎ.ಬಳಿಗಾರ ರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ನಿಂಗೋಜಿ ವೀರಪ್ಪನವರಿಂದ ಮತ್ತಷ್ಟು ಉತ್ತಮೊತ್ತಮ ಕ್ರತಿಗಳು ಲೋಕಾರ್ಪಣೆಗೊಳ್ಳಲಿ ಎಂದು ಶುಭ ಹಾರೈಸಿದರು.
ಬೆಳಗಾವಿಯ ಲೀಲಾ ರಾಜಪೂತ ˌ ಧಾರವಾಡದ ಶಿವಪ್ಪ ಶಾನವಾಡ ˌ ಉತ್ತರ ಕನ್ನಡದ ಆಶಾ ಶೆಟ್ಟಿ ˌ ಹಾಗೂ ಹಾಸನದ ಕೆ.ಆರ್.ಗಿರೀಶ ರವರಿಗೂ ಇದೇ ಸಂದರ್ಭದಲ್ಲಿ “ಶರಣ ಸಂಕುಲ ರತ್ನ ರಾಜ್ಯ ಪ್ರಶಸ್ತಿ” ಯನ್ನು ನೀಡಿ ಗೌರವಿಸಲಾಯಿತು.ಬೆಳಗಾವಿ ಜಿಲ್ಲೆಯ ಹಲವಾರು ವಿದ್ಯಾರ್ಥಾಗಳ ಸಾಂಸ್ಕ್ರತಿಕ ಕಾರ್ಯಕ್ರಮಗಳು ಗಮನ ಸೆಳೆದವು

Get real time updates directly on you device, subscribe now.

Comments are closed.

error: Content is protected !!