ಛತ್ರಪ್ಪ ತಂಬೂರಿ ಹಾಗೂ ಪಿ. ಲಕ್ಷ್ಮಣ ನಾಯ್ಕ ರಿಗೆ ವಾರ್ಷಿಕ ಪ್ರಶಸ್ತಿ ಘೋಷಣೆ

Get real time updates directly on you device, subscribe now.

ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯಿಂದ
ಗಂಗಾವತಿ: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯಿಂದ ಕೊಡಲ್ಪಡುವ ವಾರ್ಷಿಕ ಪ್ರಶಸ್ತಿಗೆ ಗಂಗಾವತಿಯ ಶಿಕ್ಷಕ ಹಾಗೂ ರಂಗಭೂಮಿ ಕಲಾವಿದ ಛತ್ರಪ್ಪ ತಂಬೂರಿಯವರು ಹಾಗೂ ಬಂಜಾರ ಸಮಾಜದ ಮುಖಂಡ ಪಿ. ಲಕ್ಷ್ಮಣ್ ನಾಯ್ಕ್ ಅವರಿಗೆ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಘೋಷಣೆ ಮಾಡಿದೆ.
ಛತ್ರಪ್ಪ ತಂಬೂರಿಯವರು ಶಿಕ್ಷಕ ವೃತ್ತಿಯೊಂದಿಗೆ ಸಾಹಿತ್ಯ, ಸಂಗೀತ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ರಂಗಭೂಮಿಯಲ್ಲಿ ವಿಶೇಷ ಸೇವೆ ಮಾಡಿ ಗಮನನ ಸೆಳೆದಿದ್ಧಾರೆ. ಇವರ ರಂಗಭೂಮಿ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಅದೇ ರೀತಿ ಗಂಗಾವತಿ ತಾಲೂಕಿನ ಪಿ. ಲಕ್ಷ್ಮಣ ನಾಯ್ಕ್ ರವರು ಬಂಜಾರ ಸಮಾಜದ ಮುಖಂಡರಾಗಿ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಕಾರ್ಯ ಮಾಡಿದ್ದು, ಇವರ ಕಲಾ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಇವರಿಗೆ ಮುಂದಿನ ಮಾರ್ಚ್ ತಿಂಗಳು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬಂಜಾರ ಸಂಸ್ಕೃತಿ ಉತ್ಸವ ನಡೆಯಲಿದ್ದು, ಈ ಉತ್ಸವದಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಇವರೀರ್ವರಿಗೆ ಕೊಪ್ಪಳ ಜಿಲ್ಲೆಯ ಬಂಜಾರ ಸಮುದಾಯ, ಕನ್ನಡ ಸಾಹಿತ್ಯ ಪರಿಷತ್ತು, ದಲಿತ ಸಾಹಿತ್ಯ ಪರಿಷತ್ತು, ವಿವಿಧ ಸಮಾಜಗಳ ಸಂಘ-ಸಂಸ್ಥೆಗಳು, ರಂಗಭೂಮಿ ಕಲಾವಿದರು, ಕಲಾಭಿಮಾನಿಗಳು ತುಂಬು ಹೃದಯದಿಂದ ಅಭಿನಂದನೆ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!