ದೇಶದಲ್ಲಿ ಐದು ಸಾವಿರಕ್ಕೂ ಹೆಚ್ಚು ನೋಂದಾಯಿತ ಸಂಘಟನೆಗಳಿದ್ದರೂ ವಿರೋಧಿಗಳ ಕುತಂತ್ರಕ್ಕೆ ಬಲಿಯಾಗಿವೆ – ಎಮ್,ಪಿ,ಮೂಲಭಾರತಿ 

Get real time updates directly on you device, subscribe now.

oplus_2

ಕೊಪ್ಪಳ : ದೇಶದಲ್ಲಿ ಐದು ಸಾವಿರಕ್ಕೂ ಹೆಚ್ಚು ನೋಂದಾಯಿತ ಸಂಘಟನೆಗಳಿದ್ದರೂ ವಿರೋಧಿಗಳ ಕುತಂತ್ರಕ್ಕೆ ಬಲಿಯಾಗಿವೆ ಎಂದು ಭಾರತೀಯ ಭೀಮಾ ಸೇನೆಯ ರಾಷ್ಟ್ರೀಯ ಸಂಯೋಜಕ

ಎಮ್,ಪಿ,ಮೂಲಭಾರತಿ ವಿಷಾದ ವ್ಯಕ್ತಪಡಿಸಿದರು.
    ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಂಘಟನಾ ಸಭೆಯಲ್ಲಿ ಎಮ್,ಪಿ,ಮೂಲಭಾರತಿ  ಮುಂದುವರೆದು ಮಾತನಾಡಿ 1968ರಲ್ಲಿ ಹುಟ್ಟು ಹಾಕಿದ ಭಾರತೀಯ ಭೀಮಾ ಸೇನಾ ಸಂಘಟನೆಯು ಹಲವಾರು ಏಳು ಬೀಳುಗಳನ್ನು ಕಂಡಿದ್ದು, ಅನೇಕ ನಾಯಕರು ಇಲ್ಲಿಯವರೆಗೆ ಸಂಘಟನೆ ಮುಂದುವರಿಸಿಕೊಂಡು ಬಂದಿದ್ದಾರೆ, ಇನ್ನು ಮೇಲೆ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ,ಈಗ ಅದನ್ನು ನಾವು ಸಮ ಸಮಾಜಕ್ಕೆ ಶ್ರಮಿಸೋಣ, ಬಾಬಾ ಸಾಹೇಬ್ ಅಂಬೇಡ್ಕರ್ ಎಳೆದು ತಂದ ರಥವನ್ನು ಮುಂದಕ್ಕೆ ಕೊಂಡು ಹೊಯ್ಯೋಣ, ಇತಿಹಾಸವನ್ನು ಅರಿತು ಇತಿಹಾಸವನ್ನು ಸೃಷ್ಟಿಸುವ ಸೃಜನಶೀಲರಾಗಿ ಬದುಕನ್ನು ಕಟ್ಟೋಣ ಎಂದ ಅವರು ಆಗಿನ ಧೀಮಂತ ನಾಯಕ ಶ್ಯಾಮಸುಂದರ ಅವರು ನಡೆದುಬಂದ ದಾರಿಯ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟರು.
   ಮುಖ್ಯ ಅತಿಥಿಯಾಗಿದ್ದ ಭಾರತೀಯ ಭೀಮಾ ಸೇನೆಯ ರಾಷ್ಟ್ರೀಯ ಕಾರ್ಯದರ್ಶಿ ಸುನಿಲ್ ಕುಮಾರ್ ಡೊಳ್ಳಿ ಮಾತನಾಡಿ ನಾವೆಲ್ಲರೂ ಹೊಡೆದು ಹೋದ ಕನ್ನಡಿಯಂತೆ ಆಗಿದ್ದೇವೆ, ಸಂಘಟನಾತ್ಮಕವಾಗಿ ನಾವೆಲ್ಲರೂ ಒಂದಾಗಿ ಹೊಸ ನಾಡನ್ನು ಕಟ್ಟೋಣ  ಎಂದರು.
    ಸಭೆಯ ಅಧ್ಯಕ್ಷತೆ ವಹಿಸಿದ್ದ ಭಾರತೀಯ ಭೀಮಾ ಸೇನೆಯ ರಾಜ್ಯಾಧ್ಯಕ್ಷ ಸುರೇಶ್ ಕುಮಾರ್ ಶಿಂಧೆ ಬೀದರ್ ಮಾತನಾಡಿ ಪ್ರತಿಯೊಬ್ಬ ಕಟ್ಟ ಕಡೆಯ ವ್ಯಕ್ತಿಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸರ್ವರಿಗೂ ಸಮ ಬಾಳು ಸರ್ವರಿಗೂ ಸಮ ಪಾಲು ದೊರಕಿಸುವ ಕೆಲಸ ಮಾಡಲು ನಾವೆಲ್ಲರೂ ಗಟ್ಟಿಯಾಗಿ ನಿಲ್ಲೋಣ ಎಂದರು,
    ಇನ್ನೊಬ್ಬ ಮುಖ್ಯ ಅತಿಥಿಯಾಗಿದ್ದ ಭಾರತೀಯ ಭೀಮಾ ಸೇನೆಯ ಬೀದರ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಧಾಮನಿ ಗುಪ್ತ  ಮಾತನಾಡಿ ಸಮಾಜದಲ್ಲಿ ಸಮಾನವಾಗಿ ಬಾಳಲು ಅವಕಾಶ ಮಾಡಿದ ಭೀಮರಾಯರಿಗೆ ನಾನು ಚಿರಋಣಿ,ಕಾರಣ ನಾನು ನಿಮ್ಮೆಲ್ಲರ ಜೊತೆಗೆ ಸಮನಾಗಿ ಕುಳಿತುಕೊಂಡು ಮಾತನಾಡುತ್ತಿದ್ದೇನೆ,ಹೆಣ್ಣು ಅಬಲೆ ಅಲ್ಲ ಸಬಲೆ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಇಂತಹ ಶಾಲೆಯಲ್ಲಿ ಶಿಕ್ಷಣದ ಕಿಚ್ಚು ಹಚ್ಚುವ ಮೂಲಕ ಶೈಕ್ಷಣಿಕ ಬದುಕನ್ನು ಕಟ್ಟಿಕೊಟ್ಟ ಜ್ಯೋತಿ ಬಾ ಫುಲೆ ಸಾವಿತ್ರಿಬಾಯಿ ಫುಲೆ ಅವರಿಗೆ ನಾವೆಲ್ಲ ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆ ಎಂದು ಹೇಳಿದರು,
     ಭಾರತೀಯ ಭೀಮಾ ಸೇನೆಯ ಬೀದರ್ ಜಿಲ್ಲಾ ಮಹಿಳಾ ಘಟಕದ ಗೌರವಾಧ್ಯಕ್ಷೆ ಮಾದವಿ ನೀಲಿಕಟ್ಟಿ,ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್,ಎ, ಗಫಾರ್, ಅಲೆಮಾರಿ ಬುಡಕಟ್ಟು ಮಹಾಸಭಾ ಜಿಲ್ಲಾಧ್ಯಕ್ಷ ಸಂಜಯ್ ದಾಸ್ ಕೌಜಗೇರಿ,ಕರ್ನಾಟಕ ಮಾದಿಗ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಮುದುಕಪ್ಪ ಹೊಸಮನಿ,ಯುವ ಮುಖಂಡ ಪ್ರಕಾಶ ಬೆಲ್ಲದ್,ಶಿವರಾಜ್ ಹೊಸಮನಿ,ರಾಘು ಚಾಕ್ರಿ, ಮಾರ್ಕಂಡಯ್ಯ ಬೆಲ್ಲದ,ಕಿರಣ ಬಂಗಾಳಿಗಿಡದ,ವೀರೇಶ್ ತೆಗ್ಗಿನಮನಿ ಯಡಿಯಾಪುರ, ಬಸವರಾಜ ನರೆಗಲ್ಲ, ರಾಮಲಿಂಗಶಾಸ್ತ್ರಿಮಠ,ಇನ್ನು ಅನೇಕರು ಉಪಸ್ಥಿತರಿದ್ದರು.
    ಭಾರತೀಯ ಭೀಮಾ ಸೇನಾ ಜಿಲ್ಲಾ ಅಧ್ಯಕ್ಷ ಕಾಶಪ್ಪ ಚಲವಾದಿ ಸ್ವಾಗತಿಸಿ, ನಿರೋಪಿಸಿ, ಕೊನೆಯಲ್ಲಿ ವಂದಿಸಿದರು.

Get real time updates directly on you device, subscribe now.

Comments are closed.

error: Content is protected !!