ಹಳೆ ಪಿಂಚಣಿ ಜಾರಿಗಾಗಿ ಮುಖ್ಯಮಂತ್ರಿಗಳಿಗೆ ಪತ್ರ ಚಳುವಳಿ
ಕೊಪ್ಪಳ ಫೆ. ೧:ಏಪ್ರಿಲ್ ೨೦೦೬ರಿಂದ ಜಾರಿಯಾದ ನೂತನ ಪಿಂಚಣಿಯನ್ನು ವಿರೋಧಿಸಿ ಮತ್ತು ಹಳೆಯ ಪಿಂಚಣಿಜಾರಿಗಾಗಿರಾಜ್ಯಾದ್ಯಂತ ಸರಕಾರಿ ಮತ್ತುಅನುದಾನಿತ ನೌಕರರು ಪತ್ರ ಚಳುವಳಿ ಹಮ್ಮಿಕೊಂಡಿದ್ದಾರೆ. ಏಪ್ರಿಲ್ ೨೦೦೬ರ ಪೂರ್ವದಲ್ಲಿಇದ್ದಂತೆ ಹಳೆಯ ಪಿಂಚಣಿ ಮುಂದುವರೆಸುವುದಾಗಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ತಮ್ಮಚುನಾವಣಾ ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿದ್ದರು.ಆದರೆ ಸರಕಾರ ಬಂದುಎರಡು ವರ್ಷಗಳು ಕಳೆದರೂ ಅದರ ಬಗ್ಗೆ ಕ್ರಮ ಕೈಗೊಳ್ಳದಿರುವುದನ್ನು ವಿರೋಧಿಸಿ ನೌಕರರು ಪತ್ರ ಚಳುವಳಿಯನ್ನು ಹಮ್ಮಿಕೊಂಡಿದ್ದಾರೆ.ಅದರಂತೆ ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವಕಾಲೇಜಿನಲ್ಲಿಯೂ ಸಹ ನೂತನ ಪಿಂಚಣಿ ರದ್ದುಗೊಳಿಸಿ ಹಳೆಯ ಪಿಂಚಣಿ ಮರುಜಾರಿಗಾಗಿಮುಖ್ಯಮಂತ್ರಿಗಳಿಗೆ ಪತ್ರಗಳನ್ನು ಬರೆದು ಕಳುಹಿಸಲಾಯಿತು.ಈ ಪತ್ರ ಚಳುವಳಿಯಲ್ಲಿ ಪ್ರಾಚಾರ್ಯರಾದಡಾ.ವಿರೇಶಕುಮಾರ, ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್, ಕಮಲಾ ಅಳವಂಡಿ, ಕುಬೇರಪ್ಪದಂಡಿನ, ಡಾ.ಬಾಳಪ್ಪ ತಳವಾರ, ಪಿ.ಗೋಪಾಲಪ್ಪ ಮುಂತಾದವರು ಉಪಸ್ಥಿತರಿದ್ದರು.