ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಎಸ್ಸಿ- ಎಸ್.ಟಿ ಗುತ್ತಿಗೆದಾರರಿಗೆ ಅನ್ಯಾಯ -ಮುದುಕಪ್ಪ ಹೊಸಮನಿ

Get real time updates directly on you device, subscribe now.

ಕೊಪ್ಪಳ: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಇಲಾಖೆಯಿಂದ ಕರೆದ ಟೆಂಡರನಲ್ಲಿ ಎಸ್ಸಿ-ಎಸ್ ಟಿ ಗುತ್ತಿಗೆದಾರರಿಗೆ ಶೇ24.10% ಕಾಮಗಾರಿಗಳ ಮೀಸಲಾತಿ ನೀಡದೆ ಅನ್ಯಾಯವೆಸಗಿದ್ದು ಇದನ್ನು ಕೂಡಲೇ ಸರಿಪಡಿಸಬೇಕೆಂದು ಎಂದು ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆಯ ರಾಜ್ಯ ಸಮಿತಿ ಸದಸ್ಯ ಹಾಗೂ ಕೊಪ್ಪಳ ಜಿಲ್ಲಾ ಅಧ್ಯಕ್ಷ ಮುದುಕಪ್ಪ
ಎಮ್ ಹೊಸಮನಿ ಅವರು ನಗರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
    ಕೊಪ್ಪಳ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ವಿವಿಧ ಇಲಾಖೆಯಲ್ಲಿ ಪದೇಪದೇ ಅನ್ಯಾಯವಾಗುತ್ತಿದ್ದು ಈಗಾಗಲೇ ಲೋಕೋಪಯೋಗಿ ಇಲಾಖೆಯಲ್ಲಿ ಎಸ್ ಸಿ ಎಸ್ ಟಿ ಗುತ್ತಿಗೆದಾರರಿಗೆ ಅನ್ಯಾಯವಾಗಿ ಪ್ರತಿಭಟನೆ ನಡೆದು ನಂತರ ಈಗ ನಗರಾಭಿವೃದ್ಧಿ ಪ್ರಾಧಿಕಾರದಿಂದ ಎಸ್ಸಿ-ಎಸ್ ಟಿ ಗುತ್ತಿಗೆದಾರರಿಗೆ ಟೆಂಡರನಲ್ಲಿ ಅನ್ಯಾಯವಾಗಿದ್ದು ಸರಕಾರದ ಆದೇಶದ ಪ್ರಕಾರ 50‌ ಲಕ್ಷ ರೂಪಾಯಿ ಮೀರದಂತ ಕಾಮಗಾರಿಗಳಿಗೆ 17.15 ರಷ್ಟು ಸಂಖ್ಯೆಯನ್ನು ಮೀರದಂತೆ ಅನುಸೂಚಿತ ಜಾತಿಗಳ ವರ್ಗಕ್ಕೆ ಸೇರಿದವರಿಗೆ ಟೆಂಡರುದಾರರ ಪೈಕಿ ಮಾತ್ರ ಟೆಂಡರನ್ನು ನೀಡತಕ್ಕದ್ದು ಮತ್ತು ಅಂತಹ ಕಾಮಗಾರಿಗಳ ಶೇ 6.95% ರಷ್ಟು ‘ಸಂಖ್ಯೆಯನ್ನು ಅನೂಸೂಚಿತ ವರ್ಗಕ್ಕೆ ಸೇರುದಾರರ ಪೈಕಿ ಮಾತ್ರ ಟೆಂಡರ ನೀಡತಕ್ಕದ್ದು ಆದರೆ ದಿನಾಂಕ :18.01.2025 ರಂದು ಕರೆದ 05 ಕಾಮಗಾರಿಗಳ ಒಟ್ಟು ಮೊತ್ತ. 94,07,557/- ರೂ ತಮ್ಮ ಇಲಾಖೆಯಿಂದ ಟೆಂಡರನ್ನು ಕರೆದಿದ್ದು ಆದರೆ ಈ ಟೆಂಡರಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರನ್ನು ದೂರವಿಟ್ಟು ಮತ್ತು ಸರಕಾರದ ಆದೇಶವನ್ನು ಗಾಳಿಗೆ ತೂರಿ ದಲಿತ ನೊಂದಾಯಿತ ಗುತ್ತಿಗೆದಾರರಿಗೆ ಅನ್ಯಾಯವಾಗಿದ್ದು ಇದು ಖೇದಕರ ಸಂಗತಿ ಕೂಡಲೆ ಈ ಟೆಂಡರಿಗೆ ಸಂಬಂದಪಟ್ಟ ಅಧಿಕಾರಿಗಳು ಟೆಂಡರನ್ನು ಪರಿಶೀಲಿಸಿ ಈ ‘ಟೆಂಡರನ್ನು ರದ್ದುಪಡಿಸಿ ದಲಿತರಿಗೆ ಟೆಂಡರನಲ್ಲಿ ಮೀಸಲಾತಿ ನೀಡಿ ಕಾನೂನು ಬದ್ದವಾಗಿ ಟೆಂಡರ ಕರೆಯಬೇಕೆಂದು ಮನವಿಯಲ್ಲಿ ತಿಳಿಸಿದ್ದು, ಈ ಅನ್ಯಾಯ ಸರಿಪಡಿಸದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಮುಖಂಡರಾದ ಹುಲುಗಪ್ಪ ಹ್ಯಾಟಿ, ದೇವರಾಜ್ ಕಾತರಕಿ, ಬಂದೇನವಾಜ್ ಮನಿಯರ್, ಸುಂಕಪ್ಪ ದೇವರಮನಿ, ಸಂದೀಪ್ ಗಿಣಿಗೇರಾ, ನಾಗರಾಜ್ ಅಳ್ಳಳ್ಳಿ ಮತ್ತಿತರರು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!