
ರಸ್ತೆ ಸುರಕ್ಷತೆಗೆ ಕ್ರಮವಹಿಸಿ – ಜಿಲ್ಲಾಧಿಕಾರಿ ನಲಿನ್ ಅತುಲ್
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕರೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ರಸ್ತೆ ಸುರಕ್ಷತೆ ಕುರಿತು ಇರುವ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಪಾಲನೆ ಮಾಡಬೇಕು ಇಲ್ಲದಿದ್ದರೆ ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗುತ್ತದೆ. ಹಾಗಾಗಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ರಸ್ತೆಗಳಲ್ಲಿ ಬ್ಲ್ಯಾಕ ಸ್ಪಾಟಗಳಿದ್ದರೆ ತಕ್ಷಣ ಸರಿಪಡಿಸಬೇಕೆಂದರು.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಏನಾದರೂ ಸಮಸ್ಯೆಗಳಾದರೆ ಜನರು ನಮಗೆ ಕೇಳುತ್ತಾರೆ. ರಸ್ತೆಗಳಲ್ಲಿ ಲೈಟಿಂಗ್. ಸಿ.ಸಿ.ಟಿ.ವಿ. ಸೈನೇಜಗಳನ್ನು ಅವಶ್ಯಕತೆ ಇರುವಲ್ಲಿ ಹಾಕಬೇಕು ಮತ್ತು ನಿಗದಿಪಡಿಸಿದ ದಿನಾಂಕಗಳಂದು ರಸ್ತೆ ಸುರಕ್ಷತಾ ಕುರಿತು ಸಭೆ ನಡೆಯಬೇಕು. ಇಲ್ಲದಿದ್ದರೆ ತಮಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಸ್ತೆ ಸುರಕ್ಷತೆ ಕುರಿತು ಜನರಲ್ಲಿ ಅರಿವು ಮೂಡಿಸುವದರ ಜೊತೆಗೆ ರಸ್ತೆಗಳಲ್ಲಿ ಮಾಹಿತಿ ಫಲಕ ಮತ್ತು ಸೈನ್ ಬೋರ್ಡಗಳನ್ನು ಅಳವಡಿಸಬೇಕು. ಹೆದ್ದಾರಿಗಳ ಮೇಲೆ ಅವಶ್ಯಕತೆಗಿಂತ ಹೆಚ್ಚಿನ ಭಾರದ ವಾಹನಗಳು ಸಂಚರಿಸುತ್ತವೆ ಇದರಿಂದ ರಸ್ತೆಗಳು ಹಾಳಾಗಿ ಹೋಗುತ್ತವೆ. ಅಗತ್ಯಕ್ಕಿಂತ ಹೆಚ್ಚಿನ ಭಾರ ಸಾಗಿಸುವ ವಾಹನಗಳ ಮೇಲೆ ಎಷ್ಟು ಕೇಸುಗಳನ್ನು ಹಾಕಲಾಗಿದೆ, ಮರಳಿನ ಟಿಪ್ಪರಗಳ ಓಡಾಟದಿಂದಲೇ ಬಹಳಷ್ಟು ಗ್ರಾಮೀಣ ರಸ್ತೆಗಳು ಹಾಳಾಗುತ್ತವೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಏನು ಮಾಡುತ್ತಿದ್ದಿರಾ ಎಂದು ಹೇಳಿದರು.
ಟ್ರಾಫಿಕ್ ಸಮಸ್ಯೆಗಳಾಗದಂತೆ ನಗರದಲ್ಲಿ ಪುಟ್ ಫಾತ್ ತೆರವುಗೊಳಿಸಿ ರಸ್ತೆ ಮೇಲೆ ವ್ಯಾಪಾರ ಮಾಡುವವರಿಗೆ ಒಂದು ಜಾಗವನ್ನು ನಿಗದಿಪಡಿಸಿ ಅಲ್ಲಿ ಅವರು ದಿನ ನಿತ್ಯದ ವ್ಯಾಪಾರ ಮಾಡಲು ವ್ಯವಸ್ಥೆ ಮಾಡಬೇಕು ಎಂದು ನಗರಸಭೆ ಆಯುಕ್ತರಿಗೆ ಸೂಚನೆ ನೀಡಿದರು. ಅತಿ ವೇಗವಾಗಿ ವಾಹನ ಚಲಾವಣೆ ಹಾಗೂ ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ಮೇಲೆ ಪ್ರಕರಣಗಳನ್ನು ದಾಖಲಿಸಬೇಕು ಎಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಮಾತನಾಡಿ ಕೆಲವು ಕಡೆ ಟೋಲಗೇಟಗಳಲ್ಲಿ ದ್ವೀ ಚಕ್ರ ವಾಹನಗಳವು ಓಡಾಡುವ ಮಾರ್ಗದಲ್ಲಿ ಸಿ.ಸಿ.ಟಿ.ವಿ ಅಳವಡಿಸಿಲ್ಲ. ರಸ್ತೆಗಳಲ್ಲಿ ಎಷ್ಟು ಬ್ಲ್ಯಾಕ್ ಸ್ಪಾಟಗಳನ್ನು ಗುರುತಿಸಿದ್ದಿರಾ. ಸಭೆಗೆ ಸುಮ್ಮನೆ ಬಂದು ಹೋಗುವ ಹಾಗೆ ಆಗಬಾರದು. ನಿಖರವಾಗಿ ಮಾಹಿತಿಯೊಂದಿಗೆ ಸಭೆಗೆ ಬರಬೇಕು. ಮುನಿರಾಬಾದ ಒಳಗಡೆ ಬಸ್ಸು ಬರುತ್ತಿಲ್ಲ ಎಂದು ಶಾಲಾ-ಮಕ್ಕಳು ಬಂದು ನಮಗೆ ದೂರು ನೀಡುತ್ತಿದ್ದಾರೆ. ಯಾಕೆ ಹೋಗುತ್ತಿಲ್ಲ. ಇದರಿಂದ ಶಾಲಾ-ಮಕ್ಕಳಿಗೆ ತೊಂದರೆಯಾಗುವುದಿಲ್ಲವೆ. ಡ್ರೈವರಗಳಿಗೆ ಈ ಕುರಿತು ನಿರ್ದೆಶನ ನೀಡಿ ಮಾತು ಕೇಳದಿದ್ದರೆ ಅವರ ಮೇಲೆ ಕ್ರಮ ಜರುಗಿಸಿ ಎಂದು ಸಾರಿಗೆ ಇಲಾಖೆಯು ಅಧಿಕಾರಿಗೆ ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆ ಕೊಪ್ಪಳ. ರಸ್ತೆ ಸುರಕ್ಷತಾ ಮಾಶಾಚರಣೆ ಪೋಸ್ಟರಗಳನ್ನು ಜಿಲ್ಲಾಧಿಕಾರಿ ನಲಿನ್ ಅತುಲ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಅವರು ಬಿಡುಗಡೆಗೊಳಿಸಿದರು.
ಈ ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ಪಿ.ಹೇಮಂತರಾಜ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸಪೇಟೆ ಸೈಟ್ ಇಂಜಿನಿಯರ್ ದಾನೇಶ್ವರ್, ಆರ್.ಟಿ.ಓ ಲಕ್ಷ್ಮೀಕಾಂತ ನಾಲವಾರ, ನಗರಸಭೆ ಆಯುಕ್ತರಾದ ಗಣಪತಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ್, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗದ ಅಧಿಕಾರಿ ರಾಜೇಂದ್ರ ಜಾಧವ್ ಸೇರಿದಂತೆ ಇತರರು ಉಪಸ್ಥಿತರಿದ್ದರು.