ಗ್ರಾಮೀಣಾಭಿವೃದ್ಧಿ ನಿರ್ಲಕ್ಷ್ಯ- ಟಿ ಯಶವಂತ ಆಕ್ರೋಶ
Koppal
ಕೇಂದ್ರ ಸರ್ಕಾರ ಸತತವಾಗಿ ಆರೋಗ್ಯ, ಶಿಕ್ಷಣ, ಉದ್ಯೋಗ ಖಾತರಿ, ಆಹಾರ ಭದ್ರತೆ ಹಾಗೂ ಗ್ರಾಮೀಣ ಮೂಲಸೌಕರ್ಯಕ್ಕೆ ಅನುದಾನ ಕಡಿತ ಮಾಡುತ್ತಿದ್ದು ಗ್ರಾಮೀಣಾಭಿವೃದ್ಧಿ ಯನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ ಆಕ್ರೋಶ ವ್ಯಕ್ತಪಡಿಸಿದರು.
ಅವರು ಕೊಪ್ಪಳ ನಗರದಲ್ಲಿ ಕೆಪಿಆರ್ ಎಸ್ ನಾಲ್ಕನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತಿದ್ದರು.
ರೈತರ ಆದಾಯವನ್ನು ಡಬಲ್ ಮಾಡುವುದಾಗಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ, ಯಾವುದೇ ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಂಬಲ ಬೆಲೆ ನೀಡದೇ ವಂಚಿಸಿದೆ. ರೈತರ ಆತ್ಮಹತ್ಯೆಗಳು ಡಬಲ್ ಆಗಿವೆ ,ರೈತ ಕುಟುಂಬದ ಸಾಲ ಮಾತ್ರವೇ ಡಬಲ್ ಆಗಿದೆ ಇಂತಹ ರೈತ ವಿರೋಧಿ ಆಡಳಿತವನ್ನು ತಿರಸ್ಕರಿಸಬೇಕು ಎಂದು ಅವರು ಕರೆ ನೀಡಿದರು.
ಯಾವಾಗಲೂ ಬರ ಪಡೀತ ಪ್ರದೇಶವಾಗಿರುವ ಕೊಪ್ಪಳ ಜಿಲ್ಲೆ ಯನ್ನು ನೀರಾವರಿ ಗೆ ಒಳಪಡಿಸಲು ಬಚಾವತ್ ತೀರ್ಪಿನ ಪ್ರಕಾರ ಸಿಕ್ಕಿರುವ ಕೃಷ್ಣ ನದಿ ನೀರನ್ನು ಬಳಸಲು ಯೋಜನೆ ರೂಪಿಸದೇ ಇಲ್ಲಿನ ಶಾಸಕರು, ಸಚಿವರು, ಸಂಸತ್ ಸದಸ್ಯರು ಕಾಲಹರಣ ಮಾಡುತ್ತಿದ್ದಾರೆ .ಬಲವಾದ ಹೋರಾಟದ ಮೂಲಕ ನೆನಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದು ತಿಳಿಸಿದರು
ನಂತರ ಮಾತನಾಡಿದ ರೈತ ಮುಖಂಡರಾದ ಎಚ್ ಆರ್ ನವೀನ್ ಕುಮಾರ ರವರು ಸ್ವಾತಂತ್ರ ಬಂದು ಎಪ್ಪಾತ್ತರು ವರ್ಷ ಕಳೆದರು ರೈತರಿಗೆ ಬೆಲೆ ನಿಗದಿ ಸ್ವತಂತ್ರ ಸಿಕ್ಕಿಲ್ಲ ನಿರುದ್ಯೋಗ ಬಡತನ ಬೆಳೆಯುತ್ತಿದೆ ಕೃಷಿ ಭೂಮಿ ಉದ್ದಿಮಿಗಳ ಪಾಲಾಗುತ್ತಿದೆ ಇದೆ ರೀತಿ ಮುಂದುವರೆದರೆ ದೇಶದಲ್ಲಿ ಆಹಾರಕ್ಕಾಗಿ ಹಾಹಾಕಾರ ಸೃಷ್ಟಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು
ಈ ಸಭೆ ಅಧ್ಯಕ್ಷತೆಯನ್ನು ದೊಡ್ಡನಗೌಡ ಪಾಟೀಲ್ ವಹಿಸಿದ್ದರು ರಾಜ್ಯ ಸಹ ಕಾರ್ಯದರ್ಶಿ ಜಿ ನಾಗರಾಜ್ ಮತ್ತು citu ಜಿಲ್ಲಾ ಕಾರ್ಯದರ್ಶಿ ಖಾಸಿಂ ಸರ್ದಾರ್ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಮುಖಂಡರು ಸಂಗಮ್ಮ. ವಕೀಲರಾದ ಆರ್ ಕೆ ದೇಸಾಯಿ. Sfi ಜಿಲ್ಲಾ ಕಾರ್ಯದರ್ಶಿ ಎಮ್ ಸಿದ್ದಪ್ಪ ಕೊಪ್ಪಳ ಜಿಲ್ಲಾ ರೈತ ಮುಖಂಡ ಶಿವಕುಮಾರ್ ಗಂಗಾವತಿ.ಮುಂತಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು
Comments are closed.