ಗುತ್ತಿಗೆದಾರನಿಂದ ಪಿಡಬ್ಲ್ಯೂಡಿ ಹೊರಗುತ್ತಿಗೆ ಕಾರ್ಮಿಕರ ವೇತನ ವಿಳಂಭ ಪ್ರತಿಭಟನೆ
ಗಂಗಾವತಿ: ಲೋಕೋಪಯೋಗಿ ಇಲಾಖೆಯ ಪ್ರವಾಸಿಮಂದಿರ, ಸರ್ಕ್ಯೂಟ್ ಹೌಸ್‌ಗಳಲ್ಲಿ ಕೆಲಸ ಮಾಡುವ ೧೪ ಜನ ಹೊರಗುತ್ತಿಗೆ ಕಾರ್ಮಿಕರಿಗೆ ಕಳೆದ ೧೭ ತಿಂಗಳಿಂದ ವೇತನ ಪಾವತಿ ಮಾಡದೇ ಬಾಕಿ ಉಳಿಸಿಕೊಂಡಿರುವ ಹೊರಗುತ್ತಿಗೆದಾರನ ವಿರುದ್ಧ ಕಾರ್ಮಿಕರು ಪಿಡಬ್ಲ್ಯೂಡಿ ಕಚೇರಿ ಎದುರು ಧರಣಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಸಂಗಪ್ಪ, ಗಫೂರ್ ಮಾತನಾಡಿ, ಗಂಗಾವತಿ, ಕಾರಟಗಿ, ಕನಕಗಿರಿ ತಾಲ್ಲೂಕುಗಳಲ್ಲಿ ಪ್ರವಾಸಿ ಮಂದಿರ-ಸರ್ಕೀಟ್ ಹೌಸ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ೧೪ ಜನ ಹೊರಗುತ್ತಿಗೆ ಕಾರ್ಮಿಕರಿಗೆ ಕಳೆದ ೧೭ ತಿಂಗಳುಗಳಿಂದ ವೇತನ ಕೊಡದೇ ಇರುವುದು ಖಂಡನೀಯವಾಗಿದೆ. ೧೭ ತಿಂಗಳುಗಳಿಂದ ಕಾರ್ಮಿಕರಿಗೆ ಸಂಬಳ ನೀಡದೇ ಇರುವುದರಿಂದ ಕಾರ್ಮಿಕರ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟದಿಂದ ಬೀದಿಪಾಲಾಗಿದ್ದಾರೆ. ಕೂಡಲೇ ಮೂಲ ಮಾಲಿಕರಾದ ಸರ್ಕಾರ ೧೪ ಜನ ಹೊರಗುತ್ತಿಗೆ ಕಾರ್ಮಿಕರಿಗೆ ಕನಿಷ್ಟ ವೇತನ ಕಾಯ್ದೆಯ ಪ್ರಕಾರ ಸಂಬಳ ನೀಡಬೇಕು. ಇವರೆಲ್ಲರಿಗೂ ಪಿ.ಎಫ್., ಇ.ಎಸ್.ಐ. ವಂತಿಕೆಗಳನ್ನು ತುಂಬಿ, ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸಿದರು. ಬಾಕಿ ವೇತನ ಪಾವತಿ, ಭವಿಷ್ಯ ನಿಧಿ ಕಟಾವು ಸೇರಿ ಆರೋಗ್ಯ ಕಾರ್ಡು ವಿತರಣೆ ಮಾಡುವ ತನಕ ಅನಿರ್ಧಿಷ್ಠ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಲ್ಲೇಶ, ಹನುಮಂತ, ಯಮನೂರ, ಶ್ರೀನಿವಾಸ, ಸಂಗಪ್ಪ, ದೇವಪ್ಪ, ರಸೂಲ್ ಖಾನ್, ಶಾರದಾ, ಹೂವಪ್ಪ, ಹನುಮಂತಿ, ವಾಸೀಮ್ ಖಾನ್, ದಾವಲ್ ಸಾಬ, ರವಿ, ವಿಶ್ವನಾಥ, ಅಬ್ದುಲ್ ಸತ್ತಾರ್ ಗಫೂರ ಇದ್ದರು.
Comments are closed.