ರೈಲು ಹರಿದು ವ್ಯಕ್ತಿ ಸಾವು: ಪ್ರಕರಣ ದಾಖಲು
ಗಿಣಿಗೇರಾ ರೈಲು ನಿಲ್ದಾಣ ಹತ್ತಿರ ಚಲಿಸುವ ರೈಲಿಗೆ ಸಿಕ್ಕು ಜುಲೈ 26ರಂದು ಅಪರಿಚಿತ ವ್ಯಕ್ತಿ ಮೃತಪಟ್ಟ ಬಗ್ಗೆ ಗದಗ ರೈಲ್ವೆ ಪೊಲೀಸ್ ಠಾಣೆ ಯು.ಡಿ.ಆರ್.ನಂ:36/2023 ಕಲಂ: 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿಯು ಅಂದಾಜು 35 ರಿಂದ 40 ವರ್ಷ ವಯೋಮಾನದವರಾಗಿದ್ದು, ಸಾದಗಪ್ಪು ಮೈಬಣ್ಣ ಕೋಲು ಮುಖ,ಅಗಲವಾದ ಹಣೆ ತಳ್ಳನೇಯ ಮೈಕಟ್ಟು, ನಿಟಾದ ಮೂಗು, ತಲೆಯಲ್ಲಿ ಸುಮಾರು 1ರಿಂದ 2 ಇಂಚು ಕಪ್ಪು ಕೂದಲು, 2 ಇಂಚು ಕಪ್ಪು ಗಡ್ಡ ಮೀಸೆ ಇರುತ್ತದೆ. ಮೈಮೇಲೆ ಬಿಳಿಕಲರಿನ ಫುಲ್ ಶರ್ಟ, ಬಿಳಿ ಬಣ್ಣದ ಸ್ಯಾಂಡೋ ಬನಿಯನ್, ನೀಲಿ ಕಲರಿನ ಜೀನ್ಸ್ ಪ್ಯಾಂಟ್, ಆಕಾಶ ನೀಲಿ ಕಲರಿನ ಇಲಾಸ್ಟಿಕ್ ಕಾಚಾ, ನಡದಲ್ಲಿ ಕೆಂಪು ಹಳದಿ ಮಿಶ್ರೀತ ಉಡದಾರ, ಕಾಲಲ್ಲಿ ಲೇದರ ಕಂಪನಿಯ ಒಂದು ಜೋಡ ಚಪ್ಪಲಿ ಹಾಗೂ ಪ್ಯಾಂಟಿನ ಕಿಸೆಯಲ್ಲಿ ಕೆಂಪು ಕಡ್ಡಿ ವಸ್ತ್ರ ಇರುತ್ತದೆ. ಈ ಮೃತ ವ್ಯಕ್ತಿಯ ಬಗ್ಗೆ ಗುರುತು ಹಾಗೂ ವಾರಸುದಾರರ ವಿಳಾಸ ಪತ್ತೆಯಾದಲ್ಲಿ ಆರಕ್ಷಕ ಉಪ ನಿರೀಕ್ಷಕರು, ರೈಲ್ವೆ ಪೊಲೀಸ್ ಠಾಣೆ, ಗದಗ ದೂ.ಸಂ: 08372-278744, 9480802128ಗೆ ಅಥವಾ ಕಂಟ್ರೋಲ್ ರೂಂ ನಂ: 080-22871291ಗೆ ಸಂಪರ್ಕಿಸಬಹುದು ಎಂದು ಗದಗ ರೈಲ್ವೆ ಪೊಲೀಸ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.