ಐತಿಹಾಸಿಕ ಘಟನೆಗಳ ದಾಖಲು ಮಾಡಲು ಛಾಯಾಗ್ರಹಣದ ಪಾತ್ರ ಪ್ರಮುಖ

Get real time updates directly on you device, subscribe now.

: ಐತಿಹಾಸಿಕ ಘಟನೆಗಳನ್ನು ದಾಖಲು ಮಾಡುವುದರಲ್ಲಿ ಛಾಯಾಗ್ರಹಣದ ಪಾತ್ರ ಪ್ರಮುಖವಾಗಿದೆ ಹಾಗೂ ಅತಿ ಅವಶ್ಯಕವಾಗಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೋ.ಬಿ.ಕೆ.ರವಿ ಹೇಳಿದರು.
 ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪತ್ರಿಕೋದ್ಯಮದಲ್ಲಿ ಛಾಯಾಚಿತ್ರದ ಮಹತ್ವದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ವಿಶೇಷ ರೀತಿಯಿಂದ ಫೋಟೋ ತೆಗೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಛಾಯಾಚಿತ್ರ ಪತ್ರಿಕೋದ್ಯಮವು ಕುತೂಹಲ ಮೂಡಿಸುವ ಒಂದು ವಿಷಯವಾಗಿದೆ. ಪತ್ರಿಕೋದ್ಯಮಕ್ಕೆ ಛಾಯಾಚಿತ್ರದ ಕೊಡುಗೆ ಅಪಾರವಾಗಿದ್ದು, ಇತ್ತೀಚಿನ ಆಧುನಿಕ ತಂತ್ರಜ್ಞಾನದಿಂದ ಛಾಯಾಚಿತ್ರ ಪತ್ರಿಕೋದ್ಯಮವು ಮತ್ತಷ್ಟು ಹೊಸ ಆಯಾಮ ಅಳವಡಿಸಿಕೊಂಡಿದೆ ಎಂದರು.
ನಂತರ ಫೋಟೋ ಜರ್ನಲಿಸ್ಟ್ ವಿಶ್ವನಾಥ್ ಸುವರ್ಣ ವಿಶೇಷ ಉಪನ್ಯಾಸ ನೀಡಿದರು ಒಂದು ಪೋಟೋ ಸಾವಿರಾರು ಪದಗಳಿಗೆ ಸಮಾನವಾಗಿದೆ. ಛಾಯಾಗ್ರಾಹಕರಿಗೆ ತಾಳ್ಮೆ, ಸಮಯದ ಪ್ರಜ್ಞೆ ಹಾಗೂ ಪರಿಕಲ್ಪನೆ ಅತಿ ಅವಶ್ಯಕವಾಗಿದೆ ಎಂದರು. ಬಳಿಕ ಛಾಯಾಚಿತ್ರದ ಪತ್ರಿಕೋದ್ಯಮದ ಕುರಿತು, ಅದರಲ್ಲಿ ಅವರು ಅನುಭವದ ಕುರಿತು ವಿದ್ಯಾರ್ಥಿಗಳೊಂದಿಗೆ ಮಾಹಿತಿ ಹಂಚಿಕೊAಡರು. ಅವರು ಸೆರೆ ಹಿಡಿದ ಫೋಟೋಗಳನ್ನು ವಿದ್ಯಾರ್ಥಿಗಳು ವೀಕ್ಷಿಸಿದರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರಕಾಶ ಯಳವಟ್ಟಿ ಮತ್ತು ಅಧ್ಯಾಪಕರಾದ ಜಡೆಯಪ್ಪ, ಚಾಂದ್ ಬಾಷಾ, ಸಂತೋಷ ಕುಮಾರ, ಶ್ರೀಕಾಂತ್, ರಂಗಪ್ಪ, ಪಾರ್ವತಿ, ಅಯ್ಯಪ್ಪ, ಪ್ರವೀಣ್ ಪೊಲೀಸ್ ಪಟೇಲ್ ಸೇರಿದಂತೆ ಇತರರು ಇದ್ದರು. ಸೈನಜಾ ಬೇಗಂ ಸ್ವಾಗತಿಸಿದರು ಮತ್ತು ಪದ್ಮಜಾ ನಿರೂಪಿಸಿದರು. ಅಶ್ವಿನಿ ವಂದಿಸಿದರು

Get real time updates directly on you device, subscribe now.

Comments are closed.

error: Content is protected !!