ಜಾಮಿಯಾ ಮಜೀದ್ ಕಮಿಟಿ ಯವರಿಂದ ಆತ್ಮೀಯ ಸನ್ಮಾನ

Get real time updates directly on you device, subscribe now.

ಭಾಗ್ಯನಗರ : ಪಟ್ಟಣ ಪಂಚಾಯತ್ ಸದಸ್ಯರಾಗಿ ನಾಮಕರಣಗೊಂಡಿರುವ ಇಬ್ರಾಹಿಂ ಸಾಬ್ ಬಿಸರಳ್ಳಿ ಮತ್ತು ಆಶ್ರಯ ಸಮಿತಿ ಸದಸ್ಯರಾಗಿ ನಾಮಕರಣಗೊಂಡಿರುವ ಮೌಲಾಹುಸೇನ್ ಹಣಗಿ ಹಾಗೂ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಿರಾಜ್ ಬಿಸರಳ್ಳಿ ಯವರನ್ನು ಇಂದು ಭಾಗ್ಯನಗರದ ಜಾಮಿಯಾ ಕಮಿಟಿವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಭಾಗ್ಯನಗರ ಪಟ್ಟಣದ ಜಾಮಿಯ ಮಜಿದ್ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಭಾಗ್ಯನಗರ ಕಮಿಟಿಯ ಹಿರಿಯರಾದ ಮಹಮದ್ ಸಾಬ್ ಬೈರಾಪುರ, ನೂರ್ ಭಾಷಾ, ಮರ್ದಾನ್ ಸಾಬ್ ಹಿರೇಮಸೂತಿ, ಪೀರಸಾಬ್ ಬೈರಾಪುರ, ಹಾಜೀ ಕುತ್ಬುದ್ದಿನ್ ಸಾಬ್ ರಷೀದ್ ಸಾಬ್, ಶಾಕಿರ್, ಕಬೀರ ಸಾಬ್ ಬೈರಾಪುರ, ಜಾಫರ್ ಸಾಬ್ ಹಿರೇ ಮಸೂತಿ, ಅನ್ವರ್ ಸಾಬ್ ಬಿಸರಳ್ಳಿ, ಖಾಜಹುಸೈನ್ ಪಟೇಲ್ ನೌ ಜವಾನ್ ಕಮಿಟಿ ಸದಸ್ಯರು ಸೇರಿದಂತೆ ಇತರರು ಉಪಸಿತರಿದ್ದರು

Get real time updates directly on you device, subscribe now.

Comments are closed.

error: Content is protected !!