50 ವರುಷಗಳ ಸಂಭ್ರಮ : ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘ ದವರಿಂದ ರಕ್ತದಾನ ಶಿಬಿರ

Get real time updates directly on you device, subscribe now.

ಕೊಪ್ಪಳ : ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘ ಹುಟ್ಟಿ ೫೦ ವರ್ಷಗಳಾದವು. ದೇಶದ ಉದ್ದಗಲಕ್ಕೂ ನಿರಂತರವಾಗಿ ಅವಶ್ಯಕತೆಯಿರುವರಿಗೆ ಕ್ಷಿಪ್ರವಾಗಿ  ಜೀವನಾವಶ್ಯಕ ಓಷಧಿಗಳ ಪೂರೈಕೆಯಲ್ಲಿ ತೊಡಗಿಕೊಂಡಿರುವ ಜೊತೆಜೊತೆಗೇ ಇನ್ನೂ ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕ್ಕೊಳ್ಳುತ್ತಲಿರುವದು ನಿಮಗೆಲ್ಲ ಗೊತ್ತಿರುವ ಸಂಗತಿ. ಅಂತೆಯೇ ನಮ್ಮ ರಾಷ್ಟ್ರ ಸಂಘ ಜನ್ಮ ತಾಳಿದ ೫೦ ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ದೇಶದ ಉದ್ದಗಲಕ್ಕೂ ಎಲ್ಲ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲೂ ರಕ್ತದಾನ ಶಿಬಿರವನ್ನು ೨೪.೦೧.೨೦೨೫ ಹಮ್ಮಿಕೊಂಡಿರುತ್ತದೆ. ನಮ್ಮ ಜಿಲ್ಲೆಯ ವತಿಯಿಂದ ಈ ಶಿಬಿರವನ್ನು ಗವಿ ಮಠದ ದಾಸೋಹದ ಹತ್ತಿರ ರೆಡ್ ಕ್ರಾಸ್ ಸಂಸ್ಥೆ, ಕೊಪ್ಪಳ ಘಟಕದ ಸಹಯೋಗದೊಂದಿಗೆ ಏರ್ಪಡಿಸಲಾಗಿದೆ. ಆದಕಾರಣ ತಾವೆಲ್ಲರೂ ಈ ಅರ್ಥಪೂರ್ಣ ಸೇವೆಯಲ್ಲಿ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕೆಂದು ವಿನಂತಿ.
ಆತ್ಮೀಯರೇ, ನೀವು ಬನ್ನಿ ಹಾಗೂ ನಿಮ್ಮವರನ್ನು ಕರೆತನ್ನಿ. ಈ ಬೃಹತ್ ಗಾತ್ರದ ರಕ್ತದಾನ ಶಿಬಿರವು ಗಿನ್ನಿಸ್ ದಾಖಲೆಯ ಪುಟ ಸೇರಲಿದೆ…ನಾವೆಲ್ಲರೂ ಈ ದಾಖಲೆಯ ಪಾಲುದಾರರಾಗೋಣ ಬನ್ನಿ.
ಕೊಪ್ಪಳ ಡಿಸ್ಟ್ರಿಕ್ಟ್ ಕೆಮಿಸ್ಟ್ ಆಂಡ್ ಡ್ರಗಿಸ್ಟ್ ವೆಲ್ಫೇರ್ ಅಸೋಸಿಯೇಷನ್, ಕೊಪ್ಪಳ.

Get real time updates directly on you device, subscribe now.

Comments are closed.

error: Content is protected !!