ಕವಿಯಾದವನು ಒಳದನಿ ಜೊತೆಗೆ ಜನದನಿಯನ್ನು ಆಲಿಸಬೇಕು-ಮುಕುಂದ ಅಮೀನಗಡ
ಕವಿಯಾದವನು ತನ್ನ ಅಂತರಂಗದ ಒಳದನಿಯನ್ನು ಕೇಳಿಸಿಕೊಂಡು ಕಾವ್ಯ ಕಟ್ಟಬೇಕು.ಜೊತೆಗೆ ಜನದನಿಯನ್ನು ಆಲಿಸಬೇಕು ಅಂದಾಗ ಆ ಕಾವ್ಯ ಯುಗದ ದನಿಯಾಗುತ್ತದೆ.ಪ್ರತಿಯೊಬ್ಬ ಕವಿಯು ತನ್ನ ಕಾವ್ಯದಲ್ಲಿ ಮುರಿದು ಕಟ್ಟುವುದನ್ನು ಮಾಡುತ್ತಲೇ ಇರುತ್ತಾನೆ.ಪಂಪ,ರನ್ನ ನಾಗಚಂದ್ರ ಶರಣರು ಕುವೆಂಪು ಬೇಂದ್ರೆ ಹಾಗೂ ಅಡಿಗರು ಮುಂತಾದ ಎಲ್ಲ ಕವಿಗಳು ತಮ್ಮ ಕಾಲದ ಕಾವ್ಯಸ್ಥಿತಿಯನ್ನು ಮುರಿದು ಹೊಸಕಾವ್ಯವನ್ನು ಕಟ್ಟಿಕೊಟ್ಟಿದ್ದಾರೆ.ರಾಮಾಯಣ ಮತ್ತು ಮಹಾಭಾರತ ದ ಪಾತ್ರ ಸೃಷ್ಟಿ ಮತ್ತು ಭಾವ ಸೃಷ್ಟಿ ಮಾಡುವಲ್ಲಿ ಈ ಮುರಿದು ಕಟ್ಟುವಿಕೆಯೇ ಆ ಕವಿಗೆ ಪ್ರಾಮುಖ್ಯತೆಯನ್ನು ತಂದು ಕೊಟ್ಟಿದೆ.ಬದಲಾವಣೆ ಪ್ರಕೃತಿ ಸಹಜವಾದದ್ಧರಿಂದ ಕಾವ್ಯದಲ್ಲಿಯೂ ಮುರಿದು ಕಟ್ಟುವ ಸೃಷ್ಟಿ ಕಾರ್ಯ ನಿರಂತರತೆಯನ್ನು ಪಡೆದಿದೆ ಎಂದು ರಂಗಕರ್ಮಿ ಸಾಹಿತಿ ಮತ್ತು ಕೃಷಿ ಇಲಾಖೆ ಯ ಅಧೀಕ್ಷಕರಾದ ಅವರು ಮಾತನಾಡಿದರು.
ರವಿವಾರ ಸಂಜೆ ಮಹಿಳಾ ಲೋಕ ಪತ್ರಿಕೆ ಯ ಕಾರ್ಯಾಲಯದಲ್ಲಿ ನಡೆದ ಸಾಹಿತ್ಯ ಸಂಜೆ ಕಾರ್ಯಕ್ರಮ ದ ಉಪನ್ಯಾಸಕರಾಗಿ ಮುಕುಂದ ಅಮೀನಗಡ “ಮುರಿದು ಕಟ್ಟುವುದು…ಕವಿ ಧರ್ಮ “ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ಸಂಪಾದಕಿ ಸಾವಿತ್ರಿ ಮುಜುಮದಾರ ಅತಿಥಿಗಳ ಪರಿಚಯ ಹಾಗೂ ಪ್ರಾಸ್ತಾವಿಕವಾಗಿ ಮಾತನಾಡಿದರು.ಅಲ್ಲಮಪ್ರಭು ಬೆಟ್ಟದೂರು, ಭಾಗ್ಯಶ್ರೀ ಯವರು ಪ್ರತಿಕ್ರಯಿಸಿದರು.ಗವಿಸಿದ್ಧಪ್ಪ ಕೊಪ್ಪಳ, ಮಹಾಂತೇಶ ಮಲ್ಲನಗೌಡ, ಈಶ್ವರ ಹತ್ತಿ,ಶಿ.ಕಾ.ಬಡಿಗೇರ,ಮಾಲಾ ಬಡಿಗೇರ,ಡಿ.ಎಂ.ಬಡಿಗೇರ,ಜಿ.ಎಸ್.ಗೋನಾಳ,ಶಾರದಾ ರಜಪೂತ ನಿಂಗಮ್ಮ ಪಟ್ಟಣಶೆಟ್ಟಿ ಶ್ರೀನಿವಾಸ ಚಿತ್ರಗಾರ ಮಂಜುನಾಥ ಚಿತ್ರಗಾರ ವಿಜಯ ಅಮೃತರಾಜ ಮೆಹಬೂಬ್ ಮಠದ ಮಹಾಂತೇಶ ಸಜ್ಜನ ಈರಪ್ಪಾ ಬಿಜಲಿ, ಶಿವಪ್ರಸಾದ ಹಾದಿಮನಿ,ಶರಣಬಸಪ್ಪ ಬಿಳಿಎಲಿ, ವಿಮಲಾಬಾಯಿ ಇನಾಮದಾರ ಶ್ರವಣ ಕುಮಾರ ರಜಪೂತ ಚಿನ್ನಪ್ಪ ತಳವಾರ, ಸಂಗಮೇಶ್ವರಗೌಡ ಪಾಟೀಲ್,ಶಂಕರ, ರವೀಂದ್ರ, ಅನಿಲಕುಮಾರ,ಎಂ.ಬಿ.ಅಳವಂಡಿ ಅನೇಕ ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು
Comments are closed.