ತ್ರಿವಿಧ ದಾಸೋಹದ ದಕ್ಷಿಣ ಭಾರತದ ಕುಂಭಮೇಳ…
ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ರಥೋತ್ಸವ
ಇನ್ನೇನುಜಾತ್ರೆಗೆ ತಿಂಗಳು ಇದೆಎನ್ನುವಾಗಲೇ ಸುತ್ತಲ ಹಳ್ಳಿಗಳಲ್ಲಿ ದಾಸೋಹಕ್ಕೆ ವಿವಿಧ ಬಗೆಯ ಹೋಳಿಗೆಗಳು, ಕರ್ಚಿಕಾಯಿ, ಮಾದಲಿ, ಸಜ್ಜೆ ಮತ್ತು ಜೋಳದ ಹಿಟ್ಟಿನಿಂದ ತಯಾರಿಸಿದ ರೊಟ್ಟಿಗಳನ್ನು, ಹಲವಾರು ವಿಧದ ಚಟ್ನಿಪುಡಿಗಳನ್ನು, ಕೆಂಪು ಚಟ್ನಿ, ಉಪ್ಪಿನಕಾಯಿಗಳನ್ನು ತಯಾರಿಸುವ ಭಕ್ತರು ಡೊಳ್ಳಿನ ಮೆರವಣಿಗೆಯೊಂದಿಗೆತಲೆಯ ಮೇಲೆ ಪುಟ್ಟಿಯನ್ನು ಹೊತ್ತುಇಲ್ಲವೇ ಅಲಂಕರಿಸಿದ ಎತ್ತಿನ ಬಂಡಿಗಳಲ್ಲಿ, ಟ್ರ್ಯಾಕ್ಟರ್ಗಳಲ್ಲಿ ಶ್ರೀಮಠಕ್ಕೆ ತಂದುಅರ್ಪಿಸುತ್ತಾರೆ. ಮತ್ತೆ ಕೆಲವರು ಬೆಲ್ಲ, ಸಕ್ಕರೆಯಂತಹ ನೂರಾರು ದಿನಸಿ ಪದಾರ್ಥಗಳನ್ನು, ಅಕ್ಕಿಯ ಮೂಟೆಗಳನ್ನು ಇನ್ನು ಕೆಲವರು ತರಕಾರಿಗಳನ್ನು ಹಣ್ಣು ಹಂಪಲುಗಳನ್ನು ತಂದು ಶ್ರೀ ಮಠಕ್ಕೆಅರ್ಪಿಸುತ್ತಾರೆ. ಸುತ್ತಲ ಜಿಲ್ಲೆಗಳ ನೂರಾರು ಊರುಗಳ ಸಾವಿರಾರು ಮನೆಗಳಿಂದ ಹೀಗೆ ಶೇಖರವಾಗುವಆಹಾರದದಾಸ್ತಾನು ನೋಡಲುಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಇದುವೇದಕ್ಷಿಣ ಭಾರತದ ಮಹಾ ಕುಂಭಮೇಳ ಎಂದೆನಿಸಿದ ಕೊಪ್ಪಳ ನಗರದ ಗವಿಸಿದ್ದೇಶ್ವರ ಮಠದಅನ್ನದಾಸೋಹದ ಪರಿ.
ಇನ್ನು ಮುಂಜಾನೆ ಮೂರುಗಂಟೆಗೆ ಒಲೆಗೆ ಉರಿ ಹಚ್ಚಿದರೆಅದು ನಂದುವುದು ಮಧ್ಯರಾತ್ರಿಒಂದುಗಂಟೆಗೆ. ದಿನವೂ ಲಕ್ಷಾಂತರಜನ ಭಕ್ತರಿಗೆಅಡುಗೆತಯಾರಿಸಲು, ತರಕಾರಿಗಳನ್ನು ತೊಳೆದು ಹೆಚ್ಚಲು, ಭಕ್ತರಿಗೆಉಣಬಡಿಸಲು, ಶಿಸ್ತಿನಿಂದ ಸಾಲುಗಳಲ್ಲಿ ಸಾಗಿ ಅನ್ನ ಪ್ರಸಾದವನ್ನು ಸ್ವೀಕರಿಸಲು ಜನರಿಗೆದಾರಿತೋರಲು ಹೀಗೆ ಹತ್ತು ಹಲವು ಗುಂಪುಗಳಲ್ಲಿ ಸ್ವಯಂಸೇವಕರಾಗಿಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿಗಳು, ಯುವಕರು, ಕಾಲೇಜುಗಳ ಎನ್‌ಎಸ್‌ಎಸ್ ಮತ್ತುಎನ್ ಸಿ ಸಿ ಘಟಕದ ವಿದ್ಯಾರ್ಥಿಗಳು,ಮಹಿಳೆಯರು ವೃದ್ಧರು ಮತ್ತು ಪೊಲೀಸ್‌ಇಲಾಖೆಯ ಸಿಬ್ಬಂದಿಗಳು, ಗೃಹರಕ್ಷಕ ದಳದವರು ಈ ಅನ್ನದಾಸೋಹದಕೈಂಕರ್ಯದಲ್ಲಿಕಿಂಚಿತ್ತುಅಡೆತಡೆಯಾಗದಂತೆತಮ್ಮ ಸೇವೆಯನ್ನು ಸಲ್ಲಿಸುತ್ತಾರೆ.
ಜಾತ್ರೆಎಂದರೆ ಕೇವಲ ಧಾರ್ಮಿಕಆಚರಣೆಯಲ್ಲ, ರಥೋತ್ಸವವಲ್ಲ… ಬದಲಾಗಿಜನರಲ್ಲಿ ವಿವಿಧ ಸಾಮಾಜಿಕ ವಿ?ಯಗಳ ಕುರಿತುಜಾಗೃತಿಯನ್ನು ಮೂಡಿಸುವ, ಸಮಾಜಮುಖಿಯಾಗಿಜನರನ್ನು ಪ್ರೇರೇಪಿಸುವ ಕಾರ್ಯಕ್ರಮ. ಈ ಕಾರ್ಯಕ್ರಮದ ಅಂಗವಾಗಿ ಶ್ರೀ ಗವಿಮಠ ಸಂಸ್ಥಾನವು ಈ ಬಾರಿ ವಿವಿಧಗ್ರಾಮೀಣ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಜನರಲ್ಲಿಗ್ರಾಮೀಣ ಕ್ರೀಡೆಗಳ ಕುರಿತಾದಆಸಕ್ತಿಯನ್ನು ಮೂಡಿಸಿದೆ. ಬಹುದೊಡ್ಡ ಮೊತ್ತದ ಬಹುಮಾನಗಳನ್ನು ಈ ಕ್ರೀಡೆಗಳಲ್ಲಿ ಗೆದ್ದವರಿಗೆ ನೀಡುವ ಮೂಲಕ ಮುಂದಿನ ದಿನಮಾನಗಳಲ್ಲಿ ಗ್ರಾಮೀಣಕ್ರೀಡೆಯ ಭವಿ?ವನ್ನು ಉಜ್ವಲಗೊಳಿಸಲು ಭದ್ರಬುನಾದಿಯನ್ನು ಶ್ರೀ ಮಠವು ಹಾಕಿದೆ.
ಆರೋಗ್ಯದಜಾಗೃತಿಯನ್ನು ಮೂಡಿಸುವಉಚಿತ ಹೆಲ್ತ್‌ಕ್ಯಾಂಪ್ ಗಳ ಮೂಲಕ ಜನ ಸಮುದಾಯಕ್ಕೆಆರೋಗ್ಯದ ಮಹತ್ವವನ್ನುಅರಿಯಲು ಅವಕಾಶ ಮಾಡಿಕೊಟ್ಟಿದೆ. ಸತತ ಮೂರು ದಿನಗಳ ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಮಠಾಧೀಶರಿಂದ ನಮ್ಮಧಾರ್ಮಿಕ ಪರಂಪರೆಯಕುರಿತಾದಜ್ಞಾನವನ್ನು ಹಂಚುವ ಮಹಾ ’ಜ್ಞಾನದಾಸೋಹ’ ಕೊಪ್ಪಳದ ಗವಿಮಠದಲ್ಲಿಏರ್ಪಾಡಾಗಿದೆ.
ಕಳೆದ ವ?ದಿಂದ ಸುಮಾರು ೫೦೦೦ಕ್ಕೂ ಹೆಚ್ಚು ಜನ ಮಕ್ಕಳಿಗೆ ಆಶ್ರಯವನ್ನು ನೀಡಿಅಕ್ಷರದಾಸೋಹವನ್ನು ಆರಂಭಿಸಿರುವ ಶ್ರೀಮಠಕ್ಕೆ ಸಾವಿರಾರು ಭಕ್ತರುತಮ್ಮಕೈಲಾದ?ದೇಣಿಗೆಯನ್ನು ನೀಡಿಜ್ಞಾನದಾಸೋಹದಅರಿವಿನ ಜ್ಯೋತಿ ನಿರಂತರವಾಗಿ ಪ್ರಜ್ವಲಿಸುವಂತೆ ಮಾಡಿದ್ದಾರೆ. ’ಹನಿ ಹನಿಗೂಡಿದರೆ ಹಳ್ಳ, ತೆನೆತೆನೆತೆನೆಗೂಡಿದರೆ ಬಳ್ಳ’ ಎಂಬ ಮಾತಿನಂತೆ ಕೊಪ್ಪಳ ಮಹಾನಗರದಲ್ಲಿಅನ್ನ,ಆಶ್ರಯ ಮತ್ತುಜ್ಞಾನದತ್ರಿವಿಧದಾಸೋಹ ಮೂರ್ತಿಯಾಗಿ ಕಂಗೊಳಿಸುತ್ತಿರುವ ವರು ಶ್ರೀಮಠದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ೧೮ನೇ ಪೀಠಾಧಿಪತಿಗಳೇ ಅಭಿನವ
ಗವಿಸಿದ್ದೇಶ್ವರ ಮಹಾಸ್ವಾಮಿಗಳು.
ವಿನಯವೇ ಮೈವೆತ್ತಂತ ಸ್ವಾಮೀಜಿಯವರತಾಯಿ ಮಡಿಲಿನ ಪ್ರೀತಿಯ ಮಮತೆಯಲ್ಲಿಉಂಡು ಓದಿ ಬೆಳೆಯುತ್ತಿರುವ ಮಕ್ಕಳು ಭವ್ಯ ಭವಿ?ದ ನಾಗರಿಕರಾಗುವುದರಲ್ಲಿ ಸಂದೇಹವೇಇಲ್ಲ.
ಈ ಬಾರಿಯಜಾತ್ರೆಯ ವಿಶೇ?ವೆಂದರೆ ೧೧ನೇ ಜನವರಿ ೨೦೨೫ರಂದು ವಿಕಲಚೇತನರ ಸಬಲೀಕರಣಕ್ಕಾಗಿ ಸಕಲಚೇತನ ಎಂಬ ನಡಿಗೆಯಕಾರ್ಯಕ್ರಮವನ್ನು ಈಗಾಗಲೇ ನಡೆಸಿದ್ದು, ಕಳೆದ ಹಲವಾರು ದಿನಗಳಿಂದ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ಕುಸ್ತಿ, ಗುಂಡುಎತ್ತುವ ಸ್ಪರ್ಧೆ, ಎತ್ತಿನ ಬಂಡಿಗಳನ್ನು ಅಲಂಕರಿಸುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದುಇದುಗ್ರಾಮೀಣ ಬದುಕಿನಕುರಿತು ಒಳ್ಳೆಯ ಆಸಕ್ತಿಯನ್ನು ಹುಟ್ಟಿಸುವಲ್ಲಿ ಸಹಾಯಕವಾಗಿದೆ.
ಹಿನ್ನೆಲೆ….
ಕೊಪ್ಪಳ ಗವಿಮಠದಜಾತ್ರೆಯನ್ನು ಕೊಪ್ಪಳದ ಗವಿಮಠದ ೧೧ನೇ ಪೀಠಾಧಿಪತಿ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಯವರ ಲಿಂಗೈಕ್ಯ ದಿನದಂದುಆಚರಿಸಲಾಗುತ್ತದೆ. ೮೦೦ ವ?ಗಳ ಇತಿಹಾಸವಿರುವ ಕೊಪ್ಪಳ ಗವಿಮಠದ ಮೊದಲ ಪೀಠಾಧಿಪತಿಯಾದರುದ್ರಮುನಿ ಸ್ವಾಮಿಗಳು ಕರ್ನಾಟಕರಾಜ್ಯದಲ್ಲಿ ವೀರಶೈವಧರ್ಮವನ್ನು ಹೆಚ್ಚು ಪ್ರಚಲಿತಗೊಳಿಸಿದವರು. ಅವರು ಕಾಶಿಯ ಜಂಗಮವಾಡಿ ಮಠದಿಂದ ೧೦೮೦ರಲ್ಲಿ ಧರ್ಮ ಪ್ರಸಾರ ಮಾಡುತ್ತಾ ಕೊಪ್ಪಳ ನಗರದ ಪೂರ್ವ ದಿಕ್ಕಿನಲ್ಲಿರುವಗುಡ್ಡದಗವಿಯಲ್ಲಿ ನೆಲೆಸಿದರು. ಹಾಗೆ ಇವರು ನೆಲೆಸಿದ ಮಠವೇ ಗವಿಮಠ. ಇವರ ನಂತರಇವರ ಉತ್ತರಾಧಿಕಾರಿಗಳ ಪರಂಪರೆಆರಂಭವಾಯಿತು. ಮುಂದೆ ೧೧ ನೇ ಪೀಠಾಧಿಪತಿಯಾಗಿ ಬಂದ ಗವಿಸಿದ್ದೇಶ್ವರ ಸ್ವಾಮಿಗಳು ಹಲವಾರು ಪವಾಡಗಳನ್ನು ಮೆರೆದರು. ಧಾರ್ಮಿಕ ಸಾಮರಸ್ಯಕ್ಕೆ ನಾಂದಿ ಹಾಡಿದರು. ಸಾಮಾಜಿಕ ಸುಧಾರಣೆತಂದಅವರು ಪು? ಮಾಸದ ಬಿದಿಗೆಯ ದಿನ ಅಂದರೆದವನದ ಹುಣ್ಣಿಮೆಯಾದಎರಡು ದಿನಕ್ಕೆ ಲಿಂಗೈಕ್ಯರಾದ ನಂತರಅವರ ಗುರುಗಳಿಗಾಗಿ ನಿರ್ಮಿಸಿದ ಸಮಾಧಿಯಲ್ಲಿಯೇಅವರಗದ್ದುಗೆಯನ್ನು ಮಾಡಿ ಪೂಜಾರಂಭ ಮಾಡಲಾಯಿತು. ಇದೀಗ ೧೮ನೇ ಪೀಠಾಧಿಪತಿಯಾಗಿಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಶ್ರೀಮಠದ ಭವ್ಯ ಪರಂಪರೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಕಾಲದಲ್ಲಿ ಮಠವು “ನ ಭೂತೊ ನ ಭವಿ?ತಿ” ಎಂಬಂತೆಅಭಿವೃದ್ಧಿಕಂಡಿದ್ದುಅದಕ್ಕೆಕಾರಣ ಮೂರ್ತಿಚಿಕ್ಕದಾದರೂಕೀರ್ತಿದೊಡ್ಡದುಎಂಬಂತಿರುವ ಸರಳತೆ, ಸಾತ್ವಿಕತೆಯೇ ಮೈವೆತ್ತ ಘನ ತತ್ವ ಮಹಿಮರಾದಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು.
ಬನದ ಹುಣ್ಣಿಮೆಯ ಹಿಂದಿನ ದಿನವೇ ನಂದಿ, ಈಶ್ವರ, ಸೂರ್ಯ, ಚಂದ್ರ ಮತ್ತು ಪ್ರಣವ ಮಂತ್ರಗಳನ್ನು ಒಳಗೊಂಡಿರುವ ಬಸವಪಟವನ್ನು ಪೂಜೆ ಮಾಡಿ ಗವಿಸಿದ್ದೇಶ್ವರರ ಕರ್ತೃಗದ್ದುಗೆಯ ಸುತ್ತಲುಐದು ಸುತ್ತು ಹಾಕಿ ನಂತರ ಮಠದ ಮುಂಭಾಗದಕಲ್ಲಿನ ಕಂಬಕ್ಕೆ ಕಟ್ಟುವ ಮೂಲಕ ಜಾತ್ರೆಯಕಾರ್ಯಕ್ರಮಕ್ಕೆ ನಾಂದಿ ಹಾಡುತ್ತಾರೆ.
ಮಠದಆವರಣದಲ್ಲಿರುವಕೆರೆಯಲ್ಲಿತೆಪ್ಪೋತ್ಸವ ನಡೆಯುತ್ತದೆ. ಗವಿಸಿದ್ದೇಶ್ವರರ ಉತ್ಸವ ಮೂರ್ತಿಯನ್ನು ಮೆರವಣಿಗೆಯ ಮೂಲಕ ತಂದು ಹೂವಿನಿಂದಅಲಂಕೃತವಾದತೆಪ್ಪದಲ್ಲಿ ಪ್ರತಿ?ಪಿಸಿ ಪೂಜೆ ಪುರಸ್ಕಾರಗಳನ್ನು ಕೈಗೊಂಡುಕೆರೆಯಲ್ಲಿರುವ ಶಿವಲಿಂಗದ ಸುತ್ತಲೂತೆಪ್ಪದಲ್ಲಿ ಪ್ರದಕ್ಷಿಣೆ ಹಾಕುವ ಮೂಲಕ ತೆಪ್ಪೋತ್ಸವವನ್ನು ನಡೆಸಲಾಗುತ್ತದೆ. ಕಣ್ಮನ ಸೆಳೆಯುವ ಬೆಳಕಿನ ದೀಪಗಳ ರಂಗೋಲಿ.ಮಧ್ಯಾಹ್ನ ೩ ಗಂಟೆಯಿಂದಲೇತೆಪ್ಪೋತ್ಸವವನ್ನು ನೋಡಲು ಹಾಜರಾಗುವ ಭಕ್ತ ಸಮೂಹದಉಲ್ಲಾಸ, ಉತ್ಸಾಹಗಳು ಭಕ್ತಿ ಭಾವದ ವ್ಯಕ್ತ ಸ್ವರೂಪದಂತೆತೋರಿದರೆಆಶ್ಚರ್ಯವಿಲ್ಲ.
೧೪ನೇ ದಿನಾಂಕ ಮಠದ ಮೇಲ್ಭಾಗದಲ್ಲಿರುವಅನ್ನಪೂರ್ಣೇಶ್ವರಿದೇಗುಲಕ್ಕೆ ಕೊಪ್ಪಳ ತಾಲೂಕಿನಇರಕಲ್ಲಗಡದಗ್ರಾಮದ ಸಂತೋಷಿಮಾತೆಯ ಭಕ್ತರು ಪಾದಯಾತ್ರೆಯಲ್ಲಿ ಬಂದು ಉಡಿ ತುಂಬಿದ ನಂತರಇಡೀಊರಿನಜನರೆಲ್ಲ ಸರತಿ ಸಾಲಿನಲ್ಲಿ ನಿಂತು ಮಾತೆಅನ್ನಪೂರ್ಣೇಶ್ವರಿದೇವಿಗೆ ಉಡಿ ತುಂಬುವುದರಜೊತೆಗೆತಮ್ಮ ಮನದಆಕಾಂಕ್ಷೆಯ ಮೇರೆಗೆಅಲ್ಲಿ ನೆರೆದಿರುವ ಮುತ್ತೈದೆಯರಿಗೆಉಡಿಯನ್ನುತುಂಬುತ್ತಾರೆ.ಜಾತ್ರೆಗೆಂದುತಮ್ಮತವರಿಗೆ ಬಂದ ಹೆಣ್ಣುಮಕ್ಕಳಿಗೆ ಇಲ್ಲಿತಮ್ಮ ಬಾಲ್ಯದ ಸ್ನೇಹಿತರು ಸಿಕ್ಕು ಹಳೆಯ ನೆನಪುಗಳನ್ನೆಲ್ಲ ಹೆಕ್ಕಿ ಸಂತಸದಿಂದ ಬೀಗುತ್ತಾರೆ. ಪರಸ್ಪರ ಉಡಿ ತುಂಬಿ ಧನ್ಯತೆಯ ಭಾವವನ್ನು ಹೊಂದುತ್ತಾರೆ.
ಮರುದಿನ ಮುಂಜಾನೆ ಕೊಪ್ಪಳ ನಗರದಜಡೆಗೌಡರ ಮನೆಯಲ್ಲಿ ಶ್ರೀ ಗವಿಸಿದ್ದೇಶ್ವರನ ಮೂರ್ತಿಯನ್ನು ಪೂಜಿಸಿ ವಾದ್ಯ ವೃಂದದವರ ಸಮೇತ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾ ಮಠಕ್ಕೆತರುತ್ತಾರೆ. ಮುದ್ದಾಬಳ್ಳಿ, ಹಲಗೇರಿ ಮತ್ತು ಮಂಗಳಾಪುರ ಗ್ರಾಮಗಳಿಂದಲೂ ಕೂಡ ಶ್ರೀ ಗವಿಸಿದ್ದೇಶ್ವರರ ಕಳಸ, ಮೂರ್ತಿಗಳನ್ನು ಮೆರವಣಿಗೆಯಲ್ಲಿಆಯಾಗ್ರಾಮಸ್ಥರ ನೇತೃತ್ವದಲ್ಲಿ ಮಠಕ್ಕೆತರಲಾಗುತ್ತದೆ. ಸಾಯಂಕಾಲ ನಿಶ್ಚಿತ ಮುಹೂರ್ತಕಾಲದಲ್ಲಿ ಅತಿಥಿಗಳಿಂದ ಜಾತ್ರಾ ಮಹೋತ್ಸವಉದ್ಘಾಟನೆಗೊಂಡು ಗವಿಸಿದ್ದೇಶ್ವರನ ಉತ್ಸವ ಮೂರ್ತಿಯನ್ನು ಒಳಗೊಂಡ ಅಲಂಕೃತಗೊಂಡತೇರು ಭಕ್ತರ ಉಘೇ ಉಘೇಘೋ?ದೊಂದಿಗೆ ಸಾಗುತ್ತದೆ. ಕೇವಲ ತಲೆಗಳು ಮಾತ್ರಕಾಣುವಂತಹ ಸಾಗರೋಪಾದಿಯಲ್ಲಿ ಜನರನ್ನೊಳಗೊಂಡ ಭಕ್ತ ಸಮೂಹ ರಥ ಸಾಗುವ ಹಾದಿಯಲ್ಲಿಉತ್ತತ್ತಿ, ಬಾಳೆಹಣ್ಣುಗಳನ್ನು ದೇವರಿಗೆ ಸಮರ್ಪಿಸುತ್ತಾ, ಹಾಗೆ ಎಸೆದಂತಹತಮಗೆದೊರೆತ ಬಾಳೆಹಣ್ಣು, ಉತ್ತತ್ತಿಗಳನ್ನು ಮಹಾಪ್ರಸಾದವೆಂದುಆಯ್ದುಕೊಂಡುತಮ್ಮ ನೆಂಟರಿ?ರಿಗೆ ಹಂಚಿತಾವು ಸ್ವೀಕರಿಸುತ್ತಾರೆ.
ರಥೋತ್ಸವದ ಮರುದಿನ ಸಂಜೆಚಿಕ್ಕೇನಕೊಪ್ಪದ ಶರಣರು ದೀಡ ನಮಸ್ಕಾರವನ್ನು ಹಾಕುತ್ತಾರೆ. ಅಂದುಅವರೊಂದಿಗೆಎಲ್ಲಜನಾಂಗದಜನರುಕೂಡತಮ್ಮತಮ್ಮ ಸಂಕಲ್ಪದಂತೆ ದೀಡ ನಮಸ್ಕಾರವನ್ನು ಹಾಕುತ್ತಾರೆ. ಅಂದುರಾತ್ರಿ ಶ್ರೀ ಮಠದ ವತಿಯಿಂದ ಮದ್ದು ಸುಡುವ ಮೂಲಕ ಆಗಸದಲ್ಲಿ ವಿವಿಧ ಬಗೆಯ ಬಣ್ಣಗಳ ಪಟಾಕಿಯ ಚಿತ್ತಾರಗಳ ಮೂಡುವಿಕೆ. ಕಣ್ಣುಕೋರೈಸುವ ಬೆಳಕಿನ ಚಿತ್ತಾರಜನರ ಮನಗಳನ್ನು ಬೆಳಗುತ್ತದೆ.
ಹಳ್ಳಿಯ ಜನರಂತೂರಥೋತ್ಸವದ ದಿನ ಬೆಳಗಿನ ಸಮಯದಲ್ಲಿಯೇ ಗವಿಸಿದ್ದೇಶ್ವರನಿಗೆ ನೈವೇದ್ಯದಎಡೆಯನ್ನು ಮಡಿಯಿಂದತಂದುಕೊಟ್ಟುದೇವರಿಗೆ ನಮಿಸಿ, ಕಾಯಿ ಒಡೆಸಿಕೊಂಡು ದಾಸೋಹ ಭವನದಲ್ಲಿ ಪ್ರಸಾದ ಸ್ವೀಕರಿಸುತ್ತಾರೆ. ರಥೋತ್ಸವದ ನಂತರ ಮಕ್ಕಳಿಗೆ ಅವರಿ?ದ ಸಾಮಗ್ರಿಗಳನ್ನು ಕೊಡಿಸಲುಜಾತ್ರೆಯಲ್ಲಿತಿರುಗಾಡುತ್ತಾ ..ಹೆಣ್ಣು ಮಕ್ಕಳು ಬಳೆ ಸಾಲಿನಲ್ಲಿಯೂ, ಪುಟ್ಟ ಮಕ್ಕಳು ಆಟದ ಸಾಮಾನುಗಳ ಸಾಲಿನಲ್ಲಿಯೂ, ಗಂಡಸರುಒಕ್ಕಲುತನದ ಸಾಮಗ್ರಿಗಳನ್ನು ಖರೀದಿಸಲು ಮುಗಿ ಬೀಳುತ್ತಾರೆ. ಬಹುಶಹ ಬನಶಂಕರಿಯಜಾತ್ರೆಯನ್ನು ಬಿಟ್ಟರೆ, ಕೊಪ್ಪಳ ಜಾತ್ರೆಯ? ವೈವಿಧ್ಯಮಯಜಾತ್ರೆ ಮತ್ತೆಲ್ಲೂಇಲ್ಲ. ಬಹಳ? ಗೌಜಿ ಗದ್ದಲಗಳ ಮಧ್ಯದಲ್ಲಿಯೂ ಶಿಸ್ತು, ಸಮಯಪ್ರಜ್ಞೆ, ಸಂಸ್ಕೃತಿಯ ಹಿರಿಮೆಯನ್ನು ಮೆರೆಯುವ ಏಕೈಕ ಜಾತ್ರೆ ಕೊಪ್ಪಳದ ಗವಿಸಿದ್ದೇಶ್ವರ ಮಠದಜಾತ್ರಾ ಮಹೋತ್ಸವ.
ಜಾತ್ರೆಯ ಮೊದಲ ಮೂರು ದಿನಗಳಲ್ಲಿ ರಾಷ್ಟ್ರೀಯ ಮತ್ತುಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಕರೆಸಿ, ಪರಿಚಯಿಸಿ ಅವರನ್ನು ಸನ್ಮಾನಿಸುತ್ತಾರೆ. ರಾತ್ರಿಯ ಹೊತ್ತಿನಲ್ಲಂತೂ ಸಾಂಸ್ಕೃತಿಕ ಲೋಕ ಕೈ ಬೀಸಿ ಕರೆಯುತ್ತದೆ. ಸಂಗೀತ, ನೃತ್ಯ, ನಾಟಕ, ಜಾನಪದ, ತತ್ವಪದ ಮುಂತಾದ ವೈವಿಧ್ಯಮಯ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತವೆ. ಜೊತೆಜೊತೆಗೆ ಮನು?ನನ್ನು ಭೌತಿಕತೆಯಿಂದ ಪಾರಮಾರ್ಥಿಕತೆಯಡೆಗೆಕರೆದೊಯ್ಯುವಆಧ್ಯಾತ್ಮಿಕ ಚಿಂತನೆಗಳು, ಗೋಷ್ಠಿಗಳು ವೈಚಾರಿಕತೆಯನ್ನು, ಆಧ್ಯಾತ್ಮಿಕ ನಿಲುವನ್ನು, ಧಾರ್ಮಿಕ ತಿಳುವಳಿಕೆಯನ್ನು ಜನರಲ್ಲಿಉಂಟುಮಾಡುತ್ತವೆ. ಇದೆಲ್ಲಕ್ಕೂ ಮೆರುಗು ನೀಡುವಂತೆ ಕಳೆದ ವ?ಜಾತ್ರೆಯಲ್ಲಿಅಂಗವಿಕಲರಿಗೆ ವಿವಾಹ ಮಾಡಿಸುವುದರಜೊತೆಜೊತೆಗೆಅವರಿಗೆಅವರವರ ಜಿಲ್ಲೆಗಳಲ್ಲಿ ಉದ್ಯೋಗ ಕೈಗೊಳ್ಳಲು ಬೇಕಾಗುವ ಮೂಲಭೂತ ಸೌಲಭ್ಯಗಳನ್ನು ಮೂಲಭೂತ ಸೌಲಭ್ಯಗಳನ್ನು ಸರಕಾರೇತರ ಸಂಸ್ಥೆಗಳ ಸಹಾಯದಿಂದಕೈಗೊಂಡಿದ್ದಾರೆ … ಜಾತ್ರೆಗೆಒಂದು ವಾರ ಮುಂಚೆಯೇ ಈ ಸಾಮೂಹಿಕ ವಿವಾಹ ಕಾರ್ಯಕ್ರಮವು ನೆರವೇರಿದ್ದು ಗವಿಸಿದ್ದೇಶ್ವರ ಮಠ ಸಮಾಜದಅಲಕ್ಷಿತಜನರ ಸವಾಂಗೀಣಅಭಿವೃದ್ಧಿಗೆ ಮತ್ತೊಂದು ಹೊಸ ಆಯಾಮವನ್ನುತೋರಿದೆ.
ಹೀಗೆ ಲಕ್ಷಾಂತರಜನ ಭಕ್ತರು ಸೇರುವ ತ್ರಿವಿಧದಾಸೋಹಗಳು ನಡೆಯುವದಕ್ಷಿಣ ಭಾರತದ ಮಹಾಕುಂಭಮೇಳ ಎಂಬ ಹೆಸರನ್ನು ಗಳಿಸಿರುವ ಕೊಪ್ಪಳದ ಗವಿಮಠದಜಾತ್ರೆ ಹಲವು ದಿನಗಳ ಕಾಲ ನಡೆದುತೆರೆಮರೆಗೆ ಸರಿಯುತ್ತದೆ. ತಿಂಗಳಪಯಂತ ಜಾತ್ರೆಯ ನೆನಪನ್ನು ಮೆಲುಕು ಹಾಕುತ್ತಾಜನರು ಮುಂದಿನ ಜಾತ್ರೆಗಾಗಿಕಾಯುತ್ತಾರೆ. ಹಾಗಾದರೆ ನೀವೂ ಬರುವಿರಲ್ಲವೇ…. ಕೊಪ್ಪಳ ಜಾತ್ರೆಯ ನೋಡಲು, ಅನುಭವಿಸಲು ಕಣ್ತುಂಬಿಕೊಳ್ಳಲು.
-ವೀಣಾ ಹೇಮಂತ್‌ಗೌಡ ಪಾಟೀಲ್, ಮುಂಡರಗಿ, ಗದಗ.