ಜಿಲ್ಲಾ ಕ್ರೀಡಾ ವಸತಿ ನಿಲಯದ ಪ್ರವೇಶಾತಿ: ಜೂನ್ 06, 07ರಂದು ಆಯ್ಕೆ ಪ್ರಕ್ರಿಯೆ

Get real time updates directly on you device, subscribe now.

*

—-

ಕೊಪ್ಪಳ ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2023-24ನೇ ಸಾಲಿಗೆ ಪ್ರಸ್ತುತ 5ನೇ ತರಗತಿ ವ್ಯಾಸಂಗ ಮಾಡುತ್ತಿರುವ ಕ್ರೀಡಾಪಟುಗಳಿಗೆ ಕೊಪ್ಪಳ ಕ್ರೀಡಾ ವಸತಿ ನಿಲಯಕ್ಕೆ ಪ್ರವೇಶಾವಕಾಶ ಜರುಗಿಸುವ ಸಂಬAಧ ಆಯ್ಕೆ ಪ್ರಕ್ರಿಯೆಯನ್ನು ಜೂನ್ 06ರಂದು ಮತ್ತು ಜೂನ್ 07ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಕೊಪ್ಪಳ ಜಿಲ್ಲಾ ಕ್ರೀಡಾ ವಸತಿ ನಿಲಯಕ್ಕೆ 5ನೇ ತರಗತಿಗೆ ಪ್ರವೇಶಾತಿಗೆ ಜೂನ್ 06ರಂದು ಬಾಲಕೀಯರಿಗೆ ಹಾಗೂ ಜೂನ್ 07ರಂದು ಬಾಲಕರಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಕೊಪ್ಪಳ ಜಿಲ್ಲೆಯವರಿಗೆ ಮಾತ್ರ ಅವಕಾಶವಿದೆ. ಅರ್ಹ ಕ್ರೀಡಾಪಟುಗಳು ಬೆಳಿಗ್ಗೆ 10ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಜರಿರಬೇಕು. ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ತಮ್ಮ ಶಾಲೆಯ ಮುಖ್ಯೋಪಾಧ್ಯಾಯರಿಂದ ಧೃಡೀಕೃತ ಶಾಲಾ ಧೃಡೀಕರಣ ಪತ್ರ, ಆಧಾರ್ ಕಾರ್ಡ್ ಝರಾಕ್ಸ್ ಪ್ರತಿ ಕಡ್ಡಾಯವಾಗಿರುತ್ತದೆ ಅಥವಾ ಆಧಾರ ಕಾರ್ಡನಲ್ಲಿ ಜನ್ಮದಿನಾಂಕ ನಮೂದಿಸಿದ್ದರೂ ಅರ್ಹಗೊಳಿಸಲಾಗುವುದು. ಪ್ರಸ್ತುತ 2023-24ನೇ ಸಾಲಿನಲ್ಲಿ 5ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ದಿನಾಂಕ: 01-06-2023ಕ್ಕೆ 11 ವರ್ಷ ವಯೋಮಿತಿ ಒಳಗಿನವರಿರಬೇಕು. 5ನೇ ತರಗತಿಗೆ ಪ್ರವೇಶ ಪಡೆಯುವ ಅರ್ಹತೆ ಇರಬೇಕು. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ 5ನೇ ತರಗತಿ ಅಥ್ಲೆಟಿಕ್ಸ್ & ವಾಲಿಬಾಲ್ ಕ್ರೀಡೆಗೆ ಬಾಲಕರು, ಬಾಲಕೀಯರು ಕನಿಷ್ಠ ಎತ್ತರ 145 ಸೆಂ.ಮೀ ಇರಬೇಕು. ಆಯ್ಕೆ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಕ್ರೀಡಾ ಉಡುಪಿನೊಂದಿಗೆ ಭಾಗವಹಿಸಬೇಕು. ಭಾಗವಹಿಸುವ ಕ್ರೀಡಾಪಟುಗಳಿಗೆ ಯಾವುದೇ ರೀತಿಯ ಪ್ರಯಾಣ ಭತ್ಯೆ ಹಾಗೂ ದಿನಭತ್ಯೆ ನೀಡುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಕ್ರೀಡಾ ಇಲಾಖೆ ಕಚೇರಿಗೆ ಖುದ್ದಾಗಿ ಅಥವಾ ಖೋಖೋ ತರಬೇತುದಾರರಾದ ಎ.ಎನ್ ಯತಿರಾಜು ಮೊ.ಸಂ: 94486-33146, ವಾಲಿಬಾಲ್ ತರಬೇತಿದಾರರಾದ ಕಮಲ್ ಸಿಂಗ್ ಬಿಸ್ಟ್ ಮೊ.ಸಂ: 6360146300 ಹಾಗೂ ಸುರೇಶ ಮೊ.ಸಂ: 99015-27333 ಮತ್ತು ಕ್ರೀಡಾವಸತಿ ನಿಲಯದ ಸಹಾಯಕರಾದ ಹನುಮೇಶ ಪೂಜಾರ ಮೊ.ಸಂ: 8095936395 ಗೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: