ಸೌತ್ ವೆಸ್ಟರ್ನ್ ರೈಲ್ವೆ ಬೋರ್ಡ್ ಬಳಕೆದಾರರ ಸಲಹಾ ಸಮಿತಿಗೆ ಡಾ. ಲಕ್ಷ್ಮಣ್ ನೇಮಕ
ಬೆಂಗಳೂರು: ಸೌತ್ ವೆಸ್ಟರ್ನ್ ರೈಲ್ವೆ ಬೋರ್ಡ್ ಬಳಕೆದಾರರ ಸಲಹಾ ಸಮಿತಿಯ ಪ್ರತಿನಿಧಿಯಾಗಿ ಡಾ. ಲಕ್ಷ್ಮಣ್ ಹೆಚ್ ಅವರನ್ನು ನೇಮಿಸಲಾಗಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ರಾಜೂರ ಗ್ರಾಮದಲ್ಲಿ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ಡಾ ಲಕ್ಷ್ಮಣ್ ಹೆಚ್ ಅವರು ತಮ್ಮ ವೈದ್ಯಕೀಯ ವ್ಯಾಸಂಗವನ್ನು ಬಳ್ಳಾರಿ ಸರಕಾರಿ ಕಾಲೇಜಿನಲ್ಲಿ ಪೂರೈಸಿದವರು. ಬಳಿಕ ಅವರು ವೈದ್ಯ ವೃತ್ತಿಯನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಿ ಶ್ರೀ ಬಾಲಾಜಿ ಹಾಸ್ಪಿಟಲ್ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ, ಪ್ರಸ್ತುತ ರಾಜ್ಯ ಬಿಜೆಪಿ ವೈದ್ಯಕೀಯ ಪ್ರಕೋಷ್ಟದ ರಾಜ್ಯ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪಕ್ಷವು ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಈ ಜವಾಬ್ದಾರಿ ನೀಡಿದೆ. ಇದಕ್ಕಾಗಿ ಚಿರಋಣಿಯಾಗಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಸಂಘ ಪರಿವಾರ ಮತ್ತುರಾಜ್ಯ ಬಿಜೆಪಿಯ ಎಲ್ಲಾ ಹಿರಿಯ ಕಿರಿಯ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ರಾಷ್ಟ್ರೀಯ ಹಿರಿಯ ಮುಖಂಡರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದು ಅವರು ತಿಳಿಸಿದ್ದಾರೆ.