ಸಂಕೀರ್ತನ ಚಲನಚಿತ್ರ ಚಿತ್ರೀಕರಣಕ್ಕೆ ಇಂದು ಚಾಲನೆ

0

Get real time updates directly on you device, subscribe now.

ರಮೇಶ್ ಭಟ್, ಶ್ರೀಧರ. ಪದ್ಮಕಲಾ ಖ್ಯಾತ ತಾರಾಗಣದ

ಗಂಗಾವತಿ: ಕನ್ನಡ ಚಿತ್ರರಂಗದಲ್ಲೇ ಅಪರೂಪದ ದಾಸರ, ಯತಿಗಳ ಸಮಾಗಮದ ಖ್ಯಾತ ನಾಮರು ಅಭಿನಯಿಸುತ್ತಿರುವ ಬಹುತಾರಗಣದ ಸಾಫಲ್ಯ ಸಂಸ್ಥೆಯ ಚಲನಚಿತ್ರ ’ಸಂಕೀರ್ತನ’ ನಾಳೆ ಡಿಸೆಂಬರ್ ೧೯ ಗುರುವಾರ ಬೆಳಗ್ಗೆ ೧೦ ಗಂಟೆಗೆ ಆನೆಗೊಂದಿಯ ಚಿಂತಾಮಣಿಯಲ್ಲಿ ಚಿತ್ರೀಕರಣ ಪ್ರಾರಂಭಗೊಳ್ಳಲಿದೆ.
ರಾಜವಂಶಸ್ಥರಾದ ಲಲಿತಾರಾಣಿ ಶ್ರೀರಂಗದೇವರಾಯಲು ಚಿತ್ರೀಕರಣಕ್ಕೆ ಚಾಲನೆ ನೀಡಲಿದ್ದಾರೆ. ಚಿತ್ರದ ನಿರ್ಮಾಪಕಿ ಖ್ಯಾತ ನಟಿ, ಕೆ. ಪದ್ಮಕಲಾ ಗುಂಡುರಾವ್, ಖ್ಯಾತ ನಟ ಹಾಗು ನಿರ್ದೇಶಕ ಡಿ.ಎಸ್.ಮಂಜುನಾಥ್ (ಕಲಾ ಗಂಗೋತ್ರಿ ಮಂಜು), ಕಾರ್ಯಕಾರಿ ನಿರ್ಮಾಪಕರು ಹಾಗು ನಟ ವಿಜಯ್ ಭಾಸ್ಕರ್, ತಹಶೀಲ್ದಾರ್ ನಾಗರಾಜ್, ನಟರಾದ ಶರದ ದಂಡೀನ ವಕೀಲರು, ವಿಷ್ಣುತೀರ್ಥ ಜೋಷಿ ಇತರರು ಪಾಲ್ಗೊಳ್ಳಲಿದ್ದಾರೆ. ಖ್ಯಾತ ಚಲನಚಿತ್ರ ನಟಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಪದ್ಮಕಲಾ ಇವರ ಸಾಫಲ್ಯ ಸಂಸ್ಥೆಯ ಚೊಚ್ಚಲ ನಿರ್ಮಾಣದ ಚಿತ್ರ ಇದಾಗಿದ್ದು, ಕಲಾ ನಿರ್ದೇಶನ, ವಸ್ತ್ರ ವಿನ್ಯಾಸ, ನಿರ್ಮಾಣ, ನಟನೆ ಹೀಗೆ ನಾಲ್ಕು ವಿಭಾಗಗಳಲ್ಲು ಈ ಚಿತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನಡ ಚಿತ್ರರಂಗದಲ್ಲೇ ಈ ಸಾಧನೆ ಮಾಡುತ್ತಿರುವ ಮೊದಲ ಮಹಿಳೆ ಇವರಾಗಿದ್ದು, ಹಲವು ಚಲನಚಿತ್ರಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿ ಯಶಸ್ವಿಗೊಳಿಸಿ, ದಾರವಾಹಿಗಳನ್ನು ನಿರ್ದೇಶಿಸಿರುವ, ನಟಿಸಿರುವ ರಾಜ್ಯ ಪ್ರಶಸ್ತಿ ಪಡೆಯಲು ಪರಿಣಾಮಕಾರಿ ಕಾರ್ಯನಿರ್ವಹಿಸಿರುವ ಡಿ.ಎಸ್. ಮಂಜುನಾಥ್ ಇವರು ನಿರ್ದೇಶನದ ಹೊಣೆ ಹೊತ್ತಿದ್ದು, ಖ್ಯಾತ ನಟರಾದ ರಮೇಶ್ ಭಟ್, ಶ್ರೀಧರ್ ಇತರರು ಚಿತ್ರದಲ್ಲಿದ್ದಾರೆ. ವಿಜಯ ನಗರ ಅರಸರ ಕಾಲದ ದಾಸರು, ಯತಿಗಳ ದಿವ್ಯ ಸಮಾಗಮದ ಈ ಚಿತ್ರ ಹದಿನೈದನೇ ಶತಮಾನಕ್ಕೆ ಕೊಂಡ್ಯೋಯ್ಯಲಿದೆ ಎನ್ನಲಾಗುತ್ತಿದೆ.

Get real time updates directly on you device, subscribe now.

Leave A Reply

Your email address will not be published.

error: Content is protected !!