ಸವಿತಾ ಸಮಾಜ ವಿವಿದೋದ್ದೇಶ ಸಹಾಕರ ಸಂಘ ನಿಯಮಿತ – ನೂತನ ಪದಾಧಿಕಾರಿಗಳ ಅವಿರೋಧ ಆಯ್ಕೆ
ಳ :ಇಲ್ಲಿನ ಸವಿತಾ ಸಮಾಜ ವಿವಿದೋದ್ದೇಶ ಸಹಾಕರ ಸಂಘ ನಿಯಮಿತಕ್ಕೆಇಂದುಜರುಗಿದಚುನಾವಣೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು ೨೦೨೪ ರಿಂದ೨೦೨೯ ವರೆಗಿನ೫ ವರ್ಷಗಳ ಅವಧಿಗೆಅಧ್ಯಕ್ಷರಾಗಿ ನಾಗರಾಜಕಂಪ್ಲಿ ಹಾಗೂ ಉಪಾಧ್ಯಕ್ಷರಾಗಿ ಶಿವಮೂರ್ತಿ ಚಿಕ್ಕಮಾದಿನಾಳ ಇವರನ್ನು ಚುನಾವಣಾಧಿಕಾರಿಗಳು ಆಯ್ಕೆಗೊಳಿಸಿ ಘೋಷಿಸಿದ್ದಾರೆ.
ಇನ್ನುಳಿದಂತೆ ಕಾರ್ಯಕಾರಿ ನಿರ್ದೇಶಕ ಮಂಡಳಿಗೆ ದೇವಪ್ಪ ಕರ್ಕಿಹಳ್ಳಿ, ವಿಠ್ಠಲ ಗೌರಿಅಂಗಳ, ತುಕಾರಾಂ ಸವಿತಾ, ಮಾರುತಿ ಸೂಗೂರು, ಬಡಪ್ಪ ಮಲ್ಕಾಪುರ, ರಾಘವೇಂದ್ರ ಸವಿತಾ, ಮಹಿಳಾ ನಿರ್ದೇಶಕರಾಗಿ ಶ್ರೀಮತಿ ಅಯ್ಯಮ್ಮ ಸವಿತಾ ಹಾಗೂ ಶ್ರೀಮತಿ ರಂಗಮ್ಮ ಸವಿತಾಅವಿರೋಧವಾಗಿಆಯ್ಕೆಗೊಂಡಿದ್ದಾರೆ.ಜಿಲ್ಲಾ ಉಪನಿಬಂಧಕರಕಛೇರಿಯ ಪ್ರಥಮದರ್ಜೆಯ ಸಹಾಯಕರೂ ಹಾಗೂ ಸವಿತಾ ಸಮಾಜ ವಿವಿದೋದ್ಧೇಶ ಸಹಕಾರ ಸಂಘ ನಿಯಮಿತದಚುನಾವಣಾಧಿಕಾರಿಯಾಗಿನಿರ್ಮಲಾ ಬ ಗದಗೇರಿಕಾರ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಸವಿತಾ ಸಮಾಜದ ಮುಖಂಡರಾದದೇವಪ್ಪ ಗೌರಿಅಂಗಳ, ರವಿಕುಮಾರ ಸೂಗೂರು, ಕಲ್ಲಪ್ಪ ಹೊನ್ನುಂಚಿ, ಈಶಪ್ಪಚಿಕ್ಕಮಾದಿನಾಳ, ಕಾರ್ಯದರ್ಶಿ ಯಲ್ಲಪ್ಪ ಸವಿತಾ, ಪಿಗ್ಮಿಏಜೆಂಟ್ ನಾಗರಾಜ ಸವಿತಾ, ಸಣ್ಣಯಲ್ಲಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.