ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್ – ಹಣೆಬರಹ

Get real time updates directly on you device, subscribe now.

ಹಣೆಬರಹ

ಬಿರುಗಾಳಿಯೇ
ಒಮ್ಮೆ ನನ್ನ ಹಣೆಬರಹದ ಮೇಲೆ ಒಮ್ಮೆ ಬೀಸಿಬಿಡು
ನಿನ್ನ ವೇಗಕ್ಕೆ ನನ್ನ ಕೆಟ್ಟ ಹಣೆಬರಹವು ತೂರಿ ಹೋಗಲಿ

ಸೂರ್ಯನ ಕಿರಣಗಳೇ
ನನ್ನ ಹಣೆಬರಹವನ್ನೊಮ್ಮೆ ಕಾಯಿಸಿ ಬಿಡಿ
ನಿನ್ನ ಬಿರುಬಿಸಿನ ತಾಪಕ್ಕೆ ನನ್ನ ಕೆಟ್ಟ ಹಣೆಬರಹವು ಸುಟ್ಟು ಹೋಗಲಿ

ಸುರಿಯುವ ಮಳೆಯೇ
ಒಮ್ಮೆ ನನ್ನ ಹಣೆಬರಹದ ಮೇಲೆ ಸುರಿದು ಬಿಡು
ನಿನ್ನ ಪಾವಿತ್ರ್ಯದಿಂದ ನನ್ನ ಕೆಟ್ಟ ಹಣೆಬರಹವು ಸ್ವಚ್ಛಗೊಳ್ಳಲಿ

ಸಮುದ್ರದ ಅಲೆಗಳೇ
ನನ್ನ ಹಣೆಬರಹದ ಮೇಲೆ ಒಮ್ಮೆ ಹಾದುಹೋಗಿ
ನಿಮ್ಮ ಅಲೆಗಳೊಂದಿಗೆ ನನ್ನ ಕೆಟ್ಟ ಹಣೆಬರಹವು ದಡಕ್ಕೆ ಅಪ್ಪಳಿಸಲಿ

ಆರ್ಭಟಿಸುವ ಸಿಡಿಲೇ
ನನ್ನ ಹಣೆಬರಹದ ಮೇಲೆ ಒಮ್ಮೆ ಸೀಳಿಬಿಡು
ನಿನ್ನ ಹೊಡೆತಕ್ಕೆ ನನ್ನ ಕೆಟ್ಟ ಹಣೆಬರಹ ಸೀದು ಹೋಗಲಿ

ನಡುಗಿಸುವ ಭೂಕಂಪನವೇ
ನನ್ನ ಹಣೆಬರದ ಮೇಲೆ ಒಮ್ಮೆ ಕಂಪಿಸಿಬಿಡಿ
ನಿನ್ನ ನಡುಕದಿಂದ ನನ್ನ ಕೆಟ್ಟ ಹಣೆಬರಹವ ಭೂಗತವಾಗಲಿ

ಸಾಗರದ ಸುನಾಮಿಗಳೇ
ನನ್ನ ಹಣೆಬರಹದ ಮೇಲೆ ಒಮ್ಮೆ ದಾಳಿಮಾಡಿ
ನಿಮ್ಮಯ ಪ್ರವಾಹದಿಂದ ನನ್ನ ಕೆಟ್ಟ ಹಣೆಬರಹವ ಕೊಚ್ಚಿಹೋಗಲಿ

ಪಿನಾಕಪಾಣಿಯೇ
ನನ್ನ ಹಣೆಬರಹದ ಮೇಲೆ ನಿನ್ನ ಉರಿಗಣ್ಣನ್ನು ಬೀರಿಬಿಡು
ನಿನ್ನ ಜ್ವಾಲೆಯಿಂದ ನನ್ನ ಕೆಟ್ಟ ಹಣೆಬರಹವು ಭಸ್ಮವಾಗಲಿ


ಕನ್ನಡ ಉಪನ್ಯಾಸಕರು
ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ,
ಕೊಪ್ಪಳ-೫೮೩೨೩೧
ಮೊಬೈಲ್: ೯೪೪೮೫೭೦೩೪೦
ಇ-mಚಿiಟ: sಞoಣಟಿeಞಚಿಟ@gmಚಿiಟ.ಛಿom <mಚಿiಟಣo:sಞoಣಟಿeಞಚಿಟ@gmಚಿiಟ.ಛಿom>

Get real time updates directly on you device, subscribe now.

Comments are closed.

error: Content is protected !!