ಕೊಪ್ಪಳ ನಗರದಲ್ಲಿ ಡಿ,18 ರಂದು ಕ್ರಿಸಮಸ್ ಹಬ್ಬದ ರಕ್ಷಣಾ ಶುಭವಾರ್ತೆ ಸೌಹಾರ್ದ ಯಾತ್ರೆಗೆ ಗವಿ ಶ್ರೀಗಳಿಂದ ಚಾಲನೆ
.
ಕೊಪ್ಪಳ : ನಗರದಲ್ಲಿ ಡಿ:18ರಂದು ಬುಧವಾರ ಬೆಳಿಗ್ಗೆ 10.30 ಕ್ಕೆ ಕ್ರಿಸಮಸ್ ಹಬ್ಬದ ಪ್ರಯುಕ್ತ ಸರ್ವ ಧರ್ಮದವರೊಂದಿಗೆ ರಕ್ಷಣಾ ಶುಭವಾರ್ತೆ ಸೌಹಾರ್ದ ಯಾತ್ರೆಗೆ ಗವಿ ಶ್ರೀಗಳು ಚಾಲನೆ ನೀಡಲಿದ್ದಾರೆ ಎಂದು ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್
ಹಾಗೂ ಜಿಲ್ಲಾ ಭ್ರಾತೃತ್ವ ಸಮಿತಿಯ ಸಂಚಾಲಕ ಎಸ್,ಎ,ಗಫಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರದಲ್ಲಿ ಜಿಲ್ಲಾ ಪಾಸ್ಟರ್ಸ್ ಅಸೋಸಿಯೇಷನ್ ಹಾಗೂ ಜಿಲ್ಲಾ ಭ್ರಾತೃತ್ವ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದ ಪೂರ್ವ ಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದೆ,
ಕ್ರಿಸಮಸ್ ಹಬ್ಬದ ರಕ್ಷಣಾ ಶುಭ ವಾರ್ತೆ ಸೌಹಾರ್ದ ಯಾತ್ರೆಗೆ ಕೊಪ್ಪಳದ ಸಂಸ್ಥಾನ ಗವಿಮಠದ ಶ್ರೀಶ್ರೀಶ್ರೀ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಬಸವೇಶ್ವರ ವೃತ್ತದಲ್ಲಿ ಚಾಲನೆ ನೀಡಿ ಹಿತನುಡಿ ನುಡಿಯಲಿದ್ದಾರೆ, ಈ ಸೌಹಾರ್ದ ಯಾತ್ರೆಯ ಕುರಿತಂತೆ ಪ್ರಾಸ್ತಾವಿಕವಾಗಿ ತಾಲೂಕಾ ಪಾಸ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಫಾದರ್ ಜೆ.ರವಿಕುಮಾರ್ ಮಾತನಾಡಲಿದ್ದಾರೆ,ಮುಸ್ಲಿಮ್ ಧರ್ಮ ಗುರುಗಳಾದ ಮೌಲಾನಾ ಮೊಹಮ್ಮದ್ ಅಬುಲ್ ಹಸನ್ ಖಾಝಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಂಡಾಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು, ನಗರ ಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಹಾಗೂ ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಾದರ್ ಡಿ. ಆರ್. ಪೀಟರ್ ರಿಂದ ಸೌಹಾರ್ದ ಸಂದೇಶ ರವಾನೆ, ನಂತರ ಸೌಹಾರ್ದ ಯಾತ್ರೆ ಪ್ರಾರಂಭವಾಗಿ ಅಶೋಕ ವೃತ್ತ ತಲುಪಿದ ನಂತರ ಹೈಕೋರ್ಟ್ ನ್ಯಾಯವಾದಿ ಮಂಜುನಾಥ್ ಬಾಗೇಪಲ್ಲಿ, ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಎಸ್,ಎ,ಗಫಾರ್, ಭೀಮ ಆರ್ಮಿ ಕರ್ನಾಟಕ ಏಕತಾ ಮಿಷನ್ ಜಿಲ್ಲಾ ಅಧ್ಯಕ್ಷ ನಿಂಗಪ್ಪ ಜಿ, ಎಸ್,ಬೆಣಕಲ್ಲ, ಸೇರಿದಂತೆ ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಉಪಾಧ್ಯಕ್ಷ ಫಾದರ್ ತಿಪ್ಪೇಶ್ ನಾಯಕ್ ಸೌಹಾರ್ದತೆ ಮಾತುಗಳ ಬಳಿಕ ಸೌಹಾರ್ದ ಯಾತ್ರೆ ಮುಂದುವರೆದು ಕನಕ ದಾಸ ವೃತ್ತದಲ್ಲಿ ಎ,ಐ,ಡಿ,ಆರ್,ಎಮ್, ರಾಜ್ಯ ಅಧ್ಯಕ್ಷ ಡಾ: ಕೆ.ಎಸ್. ಜನಾರ್ದನ, ಬಸವ ದಳದ ಈರಣ್ಣ ಕೊರ್ಲಳ್ಳಿ ಮತ್ತು ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಖಜಾಂಚಿ ಫಾದರ್ ಎಮ್, ಡೇವಿಡ್ ಸೌಹಾರ್ದದ ಮಾತುಗಳು ನಂತರ ಕಾರ್ಮಿಕ ವೃತ್ತ (ಲೇಬರ ಸರ್ಕಲ್) ಬಳಸಿಕೊಂಡು ಭಾಗ್ಯನಗರದ ಅಂಬೇಡ್ಕರ ವೃತ್ತ ಮಾರ್ಗವಾಗಿ ವಾಲ್ಮೀಕಿ ವೃತ್ತದಲ್ಲಿ ಭಾಗ್ಯನಗರ ಪಟ್ಟಣ ಪಂಚಾಯತ ಅಧ್ಯಕ್ಷ ತುಕಾರಾಮಪ್ಪ ಗಡಾದ, ಉಪಾಧ್ಯಕ್ಷ ಹೊನ್ನೂರಸಾಬ ಬೈರಾಪೂರ ಹಾಗೂ ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಸಹ ಖಜಾಂಚಿ ಫಾದರ್ ಪ್ರಸಾದ್ ಸೌಹಾರ್ದ ಕುರಿತು ಮಾತನಾಡಲಿದ್ದಾರೆ,
ಈ ಸೌಹಾರ್ದ ಯಾತ್ರೆ ಹಾಗೂ ವೃತ್ತ ಕಾರ್ಯಕ್ರಮಗಳ ಅಧ್ಯಕ್ಷತೆ ಜಿಲ್ಲಾ ಪಾಸ್ಟರ್ ಅಸೋಸಿಯೇಷನ್ ಅಧ್ಯಕ್ಷ ಫಾದರ್ ಚೆನ್ನಬಸಪ್ಪ ಅಪ್ಪಣ್ಣವರ್ ವಹಿಸುವರು,
ಕೊಪ್ಪಳ ಜಿಲ್ಲೆಯಲ್ಲಿರುವ ಎಲ್ಲಾ ಚರ್ಚಗಳ ಹಿರಿಯ ದೈವ ಸೇವಕರುಗಳು ಮತ್ತು ದೈವ ಸೇವಕರುಗಳು, ಸುವಾರ್ತೆ ಸೇವಕರುಗಳು ಮತ್ತು ಕ್ರೈಸ್ತ ಸಮಾಜದ ಎಲ್ಲಾ ಹಿರಿಯ ಮುಖಂಡರು, ಸಮಾಜದ ಸರ್ವ ಸದಸ್ಯರು, ಅಖಿಲ ಭಾರತ ಕ್ರೈಸ್ತ ಮಹಾಸಭಾದ ತಾಲೂಕಾ ಅಧ್ಯಕ್ಷ ಪ್ರಕಾಶ್ ದೇವರ ಮನಿ, ಉಪಾಧ್ಯಕ್ಷ ಮಹೇಶ್ ಕಿನ್ನಾಳ,ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಅಧ್ಯಕ್ಷ ತುಕಾರಾಮ್ ಬಿ,ಪಾತ್ರೋಟಿ. ಜಿಲ್ಲಾ ಪಾಸ್ಟರ್ಸ್ ಅಸೋಸಿಯೇಷನ್ (ರಿ) ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರುಗಳು ಮತ್ತು ವಿಮುಕ್ತಿ ವಿದ್ಯಾ ಸಂಸ್ಥೆ ಕೊಪ್ಪಳ ಯೋಜನೆಯ ಕಾರ್ಯಕರ್ತ ವೀರೇಶ್ ತೆಗ್ಗಿನಮನಿ, ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಜಿಲ್ಲಾ ಮುಖಂಡ ಮೊಹಮ್ಮದ್ ರಾಶೀದ ಖಾಝಿ, ಎಸ್ಸಿ ಎಸ್ಟಿ ಅಲೆಮಾರಿ ಬುಡಕಟ್ಟು ಮಹಾಸಭಾ ಜಿಲ್ಲಾಧ್ಯಕ್ಷ ಸಂಜಯ್ ದಾಸ್ ಕೌಜಗೇರಿ,ಭಾರತೀಯ ಭೀಮ ಸೇನಾ ಜಿಲ್ಲಾ ಅಧ್ಯಕ್ಷ ಕಾಶಪ್ಪ ಚಲವಾದಿ, ರವಿ ಕಾಂತನವರ ಮುಂತಾದವರು ಭಾಗವಹಿಸಲಿದ್ದು, ಸಂಧಾನದ ಆಶಯದಂತೆ ಸೌಹಾರ್ದ ಸಮಾಜ ಬಯಸುವ ಎಲ್ಲಾ ಸಮಾನ ಮನಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿ ಯಶಸ್ವಿಗೊಳಿಸುವಂತೆ ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್ ಮತ್ತು ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಪತ್ರಿಕಾ ಪ್ರಕಟಣೆ ಮೂಲಕ ಕೋರಿದ್ದಾರೆ.